ಕರಾವಳಿ

ಕುಂದಾಪುರ: ಮಗಳು ಪಿಯು ಟಾಪರ್; ಅಪ್ಪ ಅದೇ ಸಂಸ್ಥೆಯಲ್ಲಿ ಡ್ರೈವರ್!

Pinterest LinkedIn Tumblr

ಕುಂದಾಪುರ: ಅಪ್ಪ ಆ ಶೈಕ್ಷಣಿಕ ಸಂಸ್ಥೆಯಲ್ಲಿ ಡ್ರೈವರ್. ಅದೇ ಕಾಲೇಜಿನ ವಿದ್ಯಾರ್ಥಿಯಾಗಿರುವ ಮಗಳು ಈಗ ಪಿಯುಸಿಯಲ್ಲಿ ರಾಜ್ಯಕ್ಕೆ ನಾಲ್ಕನೆ ಟಾಪರ್. ಈ ಬಗೆಗಿನ ಒಂದು ಸಣ್ಣ ಸ್ಟೋರಿಯಿಲ್ಲಿದೆ ನೋಡಿ.

ಹೀಗೆ ಖುಷಿಯಾಗಿ ಇರೋ ಈಕೆ ಹೆಸರು ಸತ್ಯಶ್ರಿ ರಾವ್. ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ನೇರಂಬಳ್ಳಿಯವರು. ಪಿಯುಸಿಯಲ್ಲಿ ಆಕೆ ಸೈನ್ಸ್ ವಿಭಾಗದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾಳೆ. ಅದೇ ಆಕೆಯ ಖುಷಿಗೆ ಕಾರಣ. ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ ಪಿಸಿಎಂಸಿಯಲ್ಲಿ 593 ಅಂಕ ಪಡೆದಿದ್ದು ಯಾವುದೇ ಟ್ಯೂಶನ್ ಇಲ್ಲದೇ ಕೇವಲ ಶಾಲೆಯ ಪಾಠ ಪ್ರವಚನದ ಮೂಲಕವೇ ಈ ಸಾಧನೆ ಮಾಡಿದ್ದಾರೆ. ಮುಂದೆ ಇಂಜಿನಿಯರಿಂಗ್ ಮಾಡುವ ಆಸೆ ಈಕೆಯದ್ದು.

ನೇರಂಬಳ್ಳಿಯ ನಾಗೇಶ್ ರಾವ್ ಹಾಗೂ ಲಲಿತಾ ರಾವ್ ಎರಡನೇ ಪುತ್ರಿಯಾಗಿರುವ ಸತ್ಯಶ್ರಿ ಸಹೋದರಿ ಶೈಲಶ್ರಿ ಕೂಡ ಎರಡನೇ ವರ್ಷದ ಬಿಎಸ್ಸಿ ಸ್ಟುಡೆಂಟ್. ಅಂದ ಹಾಗೆ ನಾಗೇಶ್ ರಾವ್ ಚಾಲಕ ವ್ರತ್ತಿ ಮಾಡಿಕೊಂಡಿರುವುದು ಸತ್ಯಶ್ರಿ ಓದುತ್ತಿರುವ ಅದೇ ವೆಂಕಟರಮಣ ಶಾಲೆಯಲ್ಲಿ ಅನ್ನೋದು ಮತ್ತೊಂದು ವಿಶೇಷ. ಯಾವುದೇ ಒತ್ತಡವನ್ನು ಹಾಕದೇ ಮಗಳನ್ನು ಓದಿಸುತ್ತಿರುವ ನಾಗೇಶ್ ರಾವ್ ಮಗಳು ಟಾಪರ್ ಆಗಿದ್ದಕ್ಕೇ ತುಂಬಾನೇ ಖುಷಿಪಟ್ಟಿದ್ದಾರೆ. ಇಡೀ ಮನೆಯಲ್ಲಿಯೂ ಸಂಭ್ರಮದ ವಾತಾವರಣವಿದೆ.

ಒಟ್ಟಿನಲ್ಲಿ ಅಪ್ಪ ಡ್ರೈವರ್ ಆಗಿರುವ ಸಂಸ್ಥೆಯಲ್ಲಿ ಮಗಳು ರಾಜ್ಯಕ್ಕೆ ಟಾಪರ್ ಆಗಿರುವುದು ನಿಜಕ್ಕೂ ಗ್ರೇಟ್ ವಿಚಾರ.

ವರದಿ- ಯೋಗೀಶ್ ಕುಂಭಾಸಿ

Comments are closed.