ಬೆಂಗಳೂರು: ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಸೋತಿರಬಹುದು. ಆದರೆ ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ತಮ್ಮ ಪತ್ನಿ ಅನುಷ್ಕಾ ಶರ್ಮಾರ ಮನಗೆದ್ದಿದ್ದಾರೆ.
ಅರೆ ಪಂದ್ಯ ಸೋತರೆ ಅನುಷ್ಕಾಗೆ ಖುಷಿಯಾಗುತ್ತದೆಯೇ ಎಂದು ಭಾವಿಸಬೇಡಿ.. ಪಂದ್ಯದ ವೇಳೆ ನಾಯಕ ವಿರಾಟ್ ಕೊಹ್ಲಿ ಹಿಡಿದ ಅದ್ಬುತ ಕ್ಯಾಚ್ ಅನುಷ್ಕಾ ಶರ್ಮಾರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ. ಹೌದು.. ನಿನ್ನೆ ನಡೆದ ಪಂದ್ಯದಲ್ಲಿ ಆರ್ ಸಿಬಿ ನೀಡಿದ 176ರನ್ ಗಳ ಗುರಿಯನ್ನು ಕೋಲ್ಕತಾ ಕೇವಲ 4 ವಿಕೆಟ್ ಗಳನ್ನು ಕಳೆದು ಕೊಂಡು ಯಶಸ್ವಿಯಾಗಿ ಗುರಿ ಮುಟ್ಟಿತು. ಆದರೆ ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ ಕೋಲ್ಕತಾ ತಂಡ ಕೊಂಚ ಕಸಿವಿಸಿ ಅನುಭವಿಸಿತ್ತು.
ಅದಕ್ಕೆ ಕಾರಣ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ…19ನೇ ಓವರ್ ನ ವೇಳೆ ಸಿರಾಜ್ ಎಸೆದ ಚೆಂಡನ್ನು ಕಾರ್ತಿಕ್ ಶಾರ್ಟ್ ನತ್ತ ಬಲವಾಗಿ ಭಾರಿಸಿದರು. ಈ ವೇಳೆ ಲಾಂಗ್ ಆನ್ ನಲ್ಲಿ ನಿಂತಿದ್ದ ಕೊಹ್ಲಿ ರೇಸ್ ನಲ್ಲಿ ಓಡುವವರಂತೆ ಓಡಿಬಂದು ಡೈವ್ ಮಾಡಿ ಆ ಕ್ಯಾಚ್ ಅನ್ನು ಅದ್ಬುತವಾಗಿ ಹಿಡಿತಕ್ಕೆ ಪಡೆದರು. ಈ ಕ್ಯಾಚ್ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನು ದಂಗು ಬಡಿಸಿತ್ತು. ಕೇವಲ ಪ್ರೇಕ್ಷಕರು ಮಾತ್ರವಲ್ಲ ಗ್ಯಾಲರಿಯಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ಕೂಡ ಕೆಲ ಸೆಕೆಂಡ್ ಗಳ ಕಾಲ ಸ್ಥಬ್ಧರಾಗಿದ್ದರು. ಕೊಹ್ಲಿ ಹಿಡಿದ ಅದ್ಬುತ ಕ್ಯಾಚ್ ಗೆ ಆಚ್ಚರಿಯ ಭಾವನೆಯೊಂದಿಗೆ ಚಪ್ಪಾಳೆ ತಟ್ಟುವ ಮೂಲಕ ಶ್ಲಾಘಿಸಿದರು.
ಅನುಷ್ಕಾ ಶರ್ಮಾರ ಈ ರಿಯಾಕ್ಷನ್ ಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ವಿರುಷ್ಕಾ ಅಭಿಮಾನಿಗಳು ಪೋಸ್ಟ್ ಅಪ್ ಡೇಟ್ ಮಾಡಿ ಶ್ಲಾಘಿಸುತ್ತಿದ್ದರೆ, ಮತ್ತೆ ಕೆಲವರು ವಿರುಷ್ಕಾ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
Comments are closed.