ರಾಷ್ಟ್ರೀಯ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ವಿಡಿಯೋ ವೈರಲ್: ಇಬ್ಬರು ವಶ

Pinterest LinkedIn Tumblr

ಜಿಹಾನಾಬಾದ್ : 6 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ದೊರೆತಿದ್ದರೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಲೇ ಇವೆ.

ಬಿಹಾರದ ಜಿಹಾನಾಬಾದಿನಲ್ಲಿ ಆರು ಮಂದಿ ಕಾಮಾಂಧರು ಅಪ್ರಾಪ್ತ ಬಾಲಕಿ ಮೇಲೆ ದಾಳಿ ನಡೆಸಿ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವಿಡಿಯೋವನ್ನು ಪರಿಶೀಲಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕುರಿತ ತನಿಖೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಆರು ಮಂದಿ ಆರೋಪಿಗಳು ಬಾಲಕಿಯನ್ನು ಹಿಂಸಿಸುತ್ತಿದ್ದು, ಅವರಿಂದ ಬಿಡಿಸಿಕೊಳ್ಳಲು ಬಾಲಕಿ ಯತ್ನಿಸುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. ಒಬ್ಬಾತ ಬಾಲಕಿ ಅಲುಗಾಡದಂತೆ ಕಾಲುಗಳನ್ನು ಹಿಡಿಕೊಂಡಿದ್ದ. ವಿಡಿಯೋ ತೆಗೆದವನು ಸೇರಿದಂತೆ ಯಾರೊಬ್ಬರು ಬಾಲಕಿ ರಕ್ಷಣೆಗೆ ಮುಂದಾಗಿಲ್ಲ.

ಎಲ್ಲಾ ಆರೋಪಿಗಳು ಹದಿಹರೆಯದವರಾಗಿದ್ದಾರೆ . ವಿಡಿಯೋದಲ್ಲಿರುವ ಮೊಬೈಕ್ ಅವರಲ್ಲಿಯೇ ಒಬ್ಬರಿಗೆ ಸೇರಿದ್ದಾಗಿದೆ. ಇದರಿಂದ ಅವರನ್ನು ಹಿಡಿಯಲು ಸಾಧ್ಯವಾಯಿತು. ವಿಡಿಯೋ ಚಿತ್ರಿಸಿದ ಮೊಬೈಲ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗೆ ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ನಂತರ ಕೇಂದ್ರ ಸರ್ಕಾರ ಆರೋಪಿಗಳನ್ನು ಗಲ್ಲುಶಿಕ್ಷೆ ವಿಧಿಸುವುದಾಗಿ ವಿಶೇಷ ಆದೇಶ ಹೊರಡಿಸಿದೆ. ಆದರೂ, ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಲೇ ಇವೆ.

Comments are closed.