ಯುವಜನರ ವಿಭಾಗ

ನಿಮ್ಮ ಸಂಗಾತಿಗೆ ನೀವು ಸರಿಯಾದ ಜೋಡಿ ಹೌದೋ ಅಲ್ಲವೋ ಎಂಬುದನ್ನು ಇಲ್ಲಿ ಪರೀಕ್ಷಿಸಿ…!

Pinterest LinkedIn Tumblr

 

ಪ್ರೀತಿಯಲ್ಲಿ ಬಿದ್ದ ಮೇಲೆ ಕೆಲವರು ಮದುವೆಯಾಗ್ತಾರೆ ಇನ್ನೂ ಕೆಲವರು ಮದುವೆಯಾಗಲ್ಲ. ಅದಕ್ಕೆ ಕಾರಣಗಳು ಹಲವಿರಬಹುದು. ಕೆಲವರಿಗೆ ನಾನು ತೆಗೆದುಕೊಂಡಿರುವ ಆಯ್ಕೆ ಸರಿ ಇದೆಯೇ ಎನ್ನುವ ಬಗ್ಗೆ ಗೊಂದಲಗಳಿರುತ್ತದೆ. ಆ ಗೊಂದಲಗಳೇ ಬೇಡ ಎಂದು ನೀವು ನಿಮ್ಮ ಸಂಗಾತಿಗೆ ಸರಿಯಾದ ಪಾರ್ಟ್‌‌‌ನರ್‌‌ ಹೌದೋ ಅಲ್ಲವೋ ಎನ್ನುವುದಕ್ಕೆ ಫಾರ್ಮುಲಾವೊಂದನ್ನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಬ್ರಿಟಿಷ್‌ ಹೊಸ ಅಧ್ಯಯನವೊಂದು ಪ್ರೀತಿಯಲ್ಲಿರವ 5 ವಿವಿಧ ಸಂಬಂಧಗಳನ್ನು ಹಾಗೂ ಅವರ ಬದ್ಧತೆಯ ಶೈಲಿಯನ್ನು ತಿಳಿಸಿದ್ದಾರೆ. ಹಾಗೂ ಯಾವ ವಿಧದ ಸಂಬಂಧಗಳು ಮದುವೆಯಾಗಲು ಯೋಗ್ಯವಾಗಿವೆ ಎನ್ನುವುದನ್ನ ತಿಳಿಸಿದ್ದಾರೆ.

ನೀವು ಯಾವ ವಿಧದ ರಿಲೇಶನ್‌ಶಿಪ್‌ನಲ್ಲಿದ್ದೀರಾ ಹಾಗೂ ಸಂಗಾತಿಯೊಂದಿಗೆ ನಿಮ್ಮ ಮುಂದಿನ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನ ತಿಳಿಯ ಬೇಕೆ ಹಾಗಿದ್ದರೆ ಇದನ್ನ ಓದಿ.

ಸಂಘರ್ಷದಿಂದ ಕೂಡಿದ ಸಂಬಂಧ:

ಇಲ್ಲಿ ಸಂಗಾತಿಗಳು ಪರಸ್ಪರ ಜಗಳವಾಡುತ್ತಲೇ ಇರುತ್ತಾರೆ. ಜಗಳ ಮುಗಿದ ನಂತರ ಇಬ್ಬರೂ ಶಾಂತರಾಗಿ ಸೆಕ್ಸ್‌ನಲ್ಲಿ ತೊಡಗುತ್ತಾರೆ. ಈ ರೀತಿಯ ಸ್ವಭಾವವನ್ನು ಸಂಘರ್ಷದಿಂದ ಕೂಡಿದ ಸಂಬಂಧ ಎನ್ನುತ್ತಾರೆ. ಇವರು ಸ್ವಲ್ಪ ಹೊತ್ತಿನ ವರೆಗೂ ಒಬ್ಬರಿಂದ ಒಬ್ಬರು ದೂರ ಇರುತ್ತಾರೆ. ನಂತರ ಮತ್ತೆ ಯಥಾಸ್ಥಿತಿಗೆ ಬರುತ್ತಾರೆ. ಇವರ ಮಧ್ಯೆ ಜಗಳಗಳು ಇದ್ದಷ್ಟೇ ಪ್ರೀತಿ ಕೂಡಾ ಇರುತ್ತದೆ.

ಸಂಗಾತಿ ಕೇಂದ್ರೀಕೃತ ಸಂಬಂಧ:

ನಿಮ್ಮ ಸಂಗಾತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೀರಿ. ನಿಮ್ಮಿಬ್ಬರಲ್ಲಿ ಬಹಳಷ್ಟು ವಿಷಯಗಳು ಒಂದೇ ರೀತಿ ಇರುತ್ತದೆ. ಅವರು ಜೊತೆಯಾಗಿ ಹೆಚ್ಚಿನ ಸಮಯ ಕಳೆಯಲು ಇಷ್ಟ ಪಡುತ್ತಾರೆ. ಒಬ್ಬರಿಗೊಬ್ಬರು ಬೆಳೆಯಲು ಸಹಕರಿಸುತ್ತಾರೆ. ಇವರು ದೀರ್ಘ ಕಾಲದ ಸಂಬಂಧವನ್ನು ಹೊಂದುವ ಗುರಿಯನ್ನು ಹೊಂದಿರುತ್ತಾರೆ.

ಜೀವನಕ್ಕೆ ಮತ್ತೋಂದು ಚಾನ್ಸ್‌:

ಇವರು ಮೊದಲಬಾರಿಗೆ ಪ್ರೀತಿಯಲ್ಲಿ ಬಿದ್ದಿರುವವರೇನೂ ಅಲ್ಲ. ನೀವು ನಿಮ್ಮ ಹಿಂದಿನ ಸಂಬಂಧಗಳಲ್ಲಿ ಮಾಡಿರುವ ತಪ್ಪುಗಳಿಂದ ಬಹಳಷ್ಟು ಕಲಿತಿದ್ದೀರಾ. ಒಬ್ಬರಿಗೊಬ್ಬರು ಅವರ ಖಾಸಗಿತನವನ್ನು, ಭಾವನೆಯನ್ನು ಗೌರವಿಸುತ್ತಾರೆ. ಇವರಿಗೆ ಜೊತೆಯಾಗಿ ಕಾಲ ಕಳೆಯುವುದೆಂದರೆ ಅದು ಕರ್ತವ್ಯವಾಗಿರದೆ, ಅದು ಖುಷಿಯನ್ನು ನೀಡುವ ವಿಷಯವಾಗಿದೆ. ಈ ಸಂಬಂಧದಲ್ಲಿ ಬಂಧಿಯಾಗಿರವವರು ಕೊನೆವರೆಗೂ ಜೊತೆಯಾಗಿ ಜೀವನಸಾಗಿಸುವ ಲಕ್ಷಣಗಳು ಅಧಿಕ.

ಸಾಮಾಜಿಕವಾಗಿ ತೊಡಗಿಸಿಕೊಳ್ಳುವವರು:

ನಿಮ್ಮ ಸ್ನೇಹಿತರು ಅಥವಾ ಕುಟುಂಬಸ್ಥರು ನಿಮ್ಮ ಸಂಗಾತಿಯನ್ನು ಆಯ್ಕೆಗೆ ಸಮ್ಮತಿಸಿದರೆ ನೀವು ಈ ಕೆಟಗೆರಿಗೆ ಸೇರಿದವರಾಗಿರುತ್ತೀರಿ. ನಿಮ್ಮ ಹೆತ್ತವರು ಹಾಗೂ ಕುಟುಂಬಸ್ಥರು ಆ ಹುಡುಗಿಯನ್ನು ಇಷ್ಟಪಡುತ್ತಾರೆ ಅಥವಾ ಆ ಹುಡುಗ ಫ್ಯಾಮಿಲಿ ಒಳ್ಳೆಯದಿದೆ, ಆತ ತುಂಬು ಕುಟುಂಬಕ್ಕೆ ಸೇರಿದವ ಎನ್ನುವ ಕಾರಣಕ್ಕೆ ಅವರು ನಿಮ್ಮೊಂದಿಗೆ ಡೇಟ್‌ ಮಾಡುತ್ತೀರುತ್ತಾರೆ. ನೀವು ಇವರ ಜೊತೆ ಜೀವನ ಆರಂಭಿಸಿದರೆ ನಿಮ್ಮ ಜೀವನ ಸುಮಧುರವಾಗಿರುತ್ತದೆ. ಈ ಸಂಬಂಧದಲ್ಲಿ ನಿಮ್ಮ ಸಂಗಾತಿ ನಿಮ್ಮ ಬೆಸ್ಟ್‌ ಫ್ರೆಂಡ್‌ ಹಾಗೂ ಲವರ್‌ ಕೂಡಾ ಆಗಿರುತ್ತಾರೆ.

ನಾಟಕೀಯ ಶೈಲಿ:

ನೀವು 1/3 ರಷ್ಟು ಪ್ರೇಮಿಗಳ ಸಾಲಿಗೆ ಸೇರುತ್ತೀರಿ. ಈ ಸಂಬಂಧದಲ್ಲಿ ನಾಟಕೀಯತೆ ಹೆಚ್ಚು ಇರುತ್ತದೆ. ನೆಗೆಟಿವ್‌ ವಿಷಯವನ್ನು ಸರಿ ಎಂದು ವಾದಿಸಲು ಹೊರಡುತ್ತಾರೆ. ಒಬ್ಬರಿಗೊಬ್ಬರು ಜೊತೆಯಾಗಿ ಸಂತೋಷದಿಂದಿಲ್ಲ ಎನ್ನುವುದನ್ನ ಪದೇ ಪದೇ ಹೇಳುತ್ತಿರುತ್ತಾರೆ. ಒಬ್ಬರಿಗೊಬ್ಬರು ದೂರುವ ಅಭ್ಯಾಸವಿರುತ್ತದೆ. ಇಲ್ಲಿ ನಿಮ್ಮ ಸಂಗಾತಿ ನಿಮ್ಮ ಜೊತೆ ಹೆಚ್ಚಿನ ಸಮಯ ಕಳೆಯುವುದಿಲ್ಲ. ಈ ಗುಣದವರು ಬಹುಬೇಗನೇ ಬ್ರೇಕ್‌ ಅಪ್‌ ಮಾಡಿಕೊಳ್ಳುತ್ತಾರೆ. ಈ ಕೆಟಗರಿಯಲ್ಲಿರುವ ಮಹಿಳೆಯರು ಹೆಚ್ಚು ಶೋಚನೀಯರೆಂದು ಪರಿಗಣಿಸಲಾಗುತ್ತದೆ.

ಇದನ್ನ ಓದಿದ ಮೇಲೆ ನೀವು ಯಾವ ಕೆಟಗರಿಗೆ ಸೇರಿದವರು ಎನ್ನೋದನ್ನ ಯೋಚಿಸಿ.

Comments are closed.