ಮಹಿಳೆಯರು ಎಂದರೆ ಕಾಂಪ್ಲೆಕ್ಸ್, ಮೂಡಿ ಹಾಗೂ ಸೆನ್ಸಿಟಿವ್ ಆಗಿರುತ್ತಾರೆ. ಅದೇ ಕಾರಣಕ್ಕಾಗಿ ಪುರುಷರು ತಮ್ಮ ಸಂಗಾತಿಯನ್ನು ಹೇಗೆ ಹ್ಯಾಂಡಲ್ ಮಾಡುವುದು ಎಂದು ಕನ್ಫ್ಯೂಸ್ ಆಗಿರುತ್ತಾರೆ. ಅವರನ್ನು ಹೇಗೆ ಅರ್ಥ ಮಾಡಿಕೊಳ್ಳುವುದು, ಯಾವ ಸಂದರ್ಭದಲ್ಲಿ ಅವರೊಂದಿಗೆ ಹೇಗೆ ಇದ್ದರೆ ಚೆಂದ ಅನ್ನೋದೆ ಅವರಿಗೆ ಅರ್ಥವಾಗೋದಿಲ್ಲ.
ನಿಮ್ಮ ಈ ಕನ್ಫ್ಯೂಸ್ನ್ನು ನಿವಾರಣೆ ಮಾಡಲು ನಾವು ನಿಮಗೆ ಒಂದಿಷ್ಟು ಟಿಪ್ಸ್ಗಳನ್ನು ನೀಡುತ್ತೇವೆ…
ಕಾಲ್ ಮಾಡಿ : ಪುರುಷರಿಗೆ ಫೋನ್ನಲ್ಲಿ ಮಾತನಾಡುವುದು ಎಂದರೆ ಇಷ್ಟವಿರೋದಿಲ್ಲ. ಅದರ ಬದಲಾಗಿ ಆಕೆಗೆ ಟೆಕ್ಸ್ಟ್ ಮಾಡಿ ಟಿವಿ, ಗೇಮಿಂಗ್ನಲ್ಲಿ ಬ್ಯುಸಿಯಾಗುತ್ತಾರೆ. ಆದರೆ ಹುಡುಗಿಯರಿಗೆ ಇದು ಇಷ್ಟವಿರೋದಿಲ್ಲ. ನೀವು ನಿಮ್ಮ ಸಂಗಾತಿಗೆ ದಿನದಲ್ಲಿ ಕಡಿಮೆ ಎಂದರೆ ಎರಡು ಬಾರಿ ಫೋನ್ ಮಾಡಿ ಮಾತನಾಡಬೇಕು. ನಿಮ್ಮ ರಿಲೇಶನ್ಶಿಪ್ ಹೆಲ್ತಿಯಾಗಿರಬೇಕೆಂದರೆ ಆಕೆಯ ನಂಬರ್ನ್ನು ಸ್ಪೀಡ್ ಡಯಲ್ನಲ್ಲಿಡಿ.
ಮೂಡ್ ಸ್ವಿಂಗ್ ಅವರ ಜೀವನದ ಒಂದು ಭಾಗವಾಗಿದೆ : ಮಹಿಳೆಯರಿಗೆ ಮೂಡ್ ಸ್ವಿಂಗ್ ಆಗೋದು ಸಾಮಾನ್ಯ. ಅವರು ಸಂತೋಷದಿಂದ ಒಂದೇ ಒಂದು ನಿಮಿಷದಲ್ಲಿ ಸ್ಯಾಡ್ ಮೂಡ್ಗೆ ಹೋಗುತ್ತಾರೆ. ಅದರಲ್ಲೂ ಪಿರಿಯಡ್ಸ್ ಸಮಯದಲ್ಲಿ ಅವರ ಮೂಡ್ ಸ್ವಿಂಗ್ ಸಾಮಾನ್ಯವಾಗಿದೆ. ಇದು ನಿಮ್ಮ ರಿಲೇಶನ್ಶಿಪ್ನ ಒಂದು ಭಾಗವಾಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಕೆಲವೊಮ್ಮೆ ಹುಡುಗಿಯರು ಮೂಡ್ ಸ್ವಿಂಗ್ ಹೆಸರಲ್ಲಿ ನಿಮ್ಮನ್ನು ಟೆಸ್ಟ್ ಕೂಡ ಮಾಡುತ್ತಾರೆ. ಆ ಸಮಯದಲ್ಲಿ ನೀವು ಅವರನ್ನು ಅರ್ಥ ಮಾಡಿಕೊಂಡರೆ ಓಕೆ. ಇಲ್ಲವಾದರೆ ನಿಮ್ಮ ರಿಲೇಶನ್ಶಿಪ್ ದಿ ಎಂಡ್ ಆಗುತ್ತದೆ.
ಅವರು ಹುಡುಗರೊಂದಿಗೆ ಹೋಗಲಿ ಬಿಡಿ : ನೀವು ಅವರೊಂದಿಗೆ ರಿಲೇಶನ್ಶಿಪ್ನಲ್ಲಿ ಇದ್ದೀರಿ ಅಷ್ಟೇ. ಅವರು ನಿಮ್ಮ ಆಸ್ತಿ ಅಲ್ಲ. ಆಕೆ ಬೇರೆ ಹುಡುಗರೊಂದಿಗೆ ಮಾತನಾಡಿದರೆ, ನಕ್ಕರೆ ಓಡಾಡಿದರೆ ನೀವು ಕೋಪ ಮಾಡಿಕೊಳ್ಳುವುದು ತಪ್ಪು. ಆಕೆ ತನ್ನ ಸಹೋದ್ಯೋಗಿ ಅಥವಾ ಹುಡುಗ ಫ್ರೆಂಡ್ ಜೊತೆ ಕಾಫಿ ಕುಡಿದರೆ ಇರಲಿ ಬಿಡಿ. ಆಕೆಗೆ ನೀವು ಸ್ವತಂತ್ರ್ಯ ಕೊಟ್ಟರೆ ಆಕೆ ನಿಮಗೆ ನಂಬಿಕಸ್ಥರಾಗಿರುತ್ತಾರೆ. ಆಕೆಗೆ ನಿಮ್ಮ ಮೇಲಿನ ಪ್ರೀತಿ ಕೂಡ ಹೆಚ್ಚಾಗುತ್ತದೆ.
ಫ್ಯಾಟ್ ಎಂದು ಹೇಳಬೇಡಿ? : ಇದನ್ನು ನೀವು ಅರ್ಥ ಮಾಡಿಕೊಳ್ಳಲೇಬೇಕು. ನೀವು ಆಕೆಯನ್ನು ಫ್ಯಾಟ್ ಎಂದು ಕರೆಯಬಾರದು. ಯಾಕೆಂದರೆ ಹುಡುಗಿಯರಿಗೆ ತಮ್ಮ ಸೈಜ್ ಮತ್ತು ಅಂದದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅವರಿಗೆ ಇಷ್ಟವಾಗೋದಿಲ್ಲ. ನೀವು ಅವರನ್ನು ಹಾಗೆ ಕರೆದರೆ ಮುಂದೆ ನೀವೆ ಅನುಭವಿಸಬೇಕಾಗಬಹುದು.
ಆಕೆಗೆ ಕಿಸ್ ಮತ್ತು ಹಗ್ ಎಂದರೆ ತುಂಬಾ ಇಷ್ಟ : ಹುಡುಗಿಯರಿಗೆ ಯಾವುದೆ ಗಿಫ್ಟ್ಗಿಂತ ಕಿಸ್ ಮತ್ತು ನಿಮ್ಮ ಹಗ್ ತುಂಬಾನೆ ಇಷ್ಟವಾಗುತ್ತದೆ. ಆಕೆಯ ಫೀಲಿಂಗ್ನ್ನು ನೀವು ಗೌರವಿಸಿ. ಬದಲಾಗಿ ಆಕೆಯದು ಗರ್ಲಿ ನೇಚರ್ ಎಂದು ಹೇಳಬೇಡಿ. ನಿಮಗೆ ಶಾಪಿಂಗ್ ಮಾಡುವುದಕ್ಕಿಂತ ಬೈಕ್ ಮತ್ತು ಕಾರನ್ನು ನೋಡುವುದು ಇಷ್ಟವಾದರೆ, ಆಕೆಗೆ ಸೆಕ್ಸ್ ಮಾಡುವುದಕ್ಕಿಂತ ಹಗ್ ಮತ್ತು ಕಿಸ್ಸಿಂಗ್ ಇಷ್ಟವಾಗುತ್ತದೆ.
Comments are closed.