ಯುವಜನರ ವಿಭಾಗ

ಈ ಎಲ್ಲಾ ರೊಮ್ಯಾಂಟಿಕ್‌ ವಿಷಯಗಳನ್ನು ಪತ್ನಿಯಾದವಳು ತನ್ನ ಪತಿಯಿಂದ ಬಯಸುತ್ತಾಳೆ….ಅವು ಯಾವುದು ಗೊತ್ತೇ..?

Pinterest LinkedIn Tumblr

ಎಲ್ಲಾ ಹುಡುಗಿಯರಿಗೆ ಪ್ರೀತಿ ಎಂದರೆ ಪತಿ ಆಕೆಯನ್ನು ನೋಡಿಕೊಳ್ಳುವ ರೀತಿಯಾಗಿರುತ್ತದೆ. ಆತನ ವರ್ತನೆ ಆಕೆಯನ್ನು ಪ್ರೀತಿಯ ಉಯ್ಯಾಲೆಯಲ್ಲಿ ತೇಲುವಂತೆ ಮಾಡಿದರೆ ಆಕೆಗೆ ಅದಕ್ಕಿಂತ ಹೆಚ್ಚಿನದೇನು ಬೇಕಾಗಿರೋದಿಲ್ಲ.

ಹಾಗಾದರೆ ಬನ್ನಿ ಪತ್ನಿ ತನ್ನ ಪತಿಯಿಂದ ಬಯಸುವ ರೊಮ್ಯಾಂಟಿಕ್‌ ವಿಷಯಗಳು ಯಾವುವು ಅನ್ನೋದನ್ನು ತಿಳಿದುಕೊಳ್ಳಿ….

ಅನಿರೀಕ್ಷಿತ ಕಿಸ್‌ : ನಿಮ್ಮ ಪ್ರೀತಿಯನ್ನು ಎಕ್ಸ್‌‌ಪ್ರೆಸ್‌ ಮಾಡುವ ಒಂದು ಬೆಸ್ಟ್‌ ವಿಧಾನ ಎಂದರೆ ಸರ್‌ಪ್ರೈಸ್‌ ಕಿಸ್. ನಿದ್ರೆ ಮಾಡುವ ಮುನ್ನ ಪ್ರತಿದಿನ ಈ ಕಿಸ್‌ ನೀಡಿದರೆ ಉತ್ತಮ. ಕೆನ್ನೆಯ ಮೇಲೆ ಪ್ರೀತಿಯ ಮುತ್ತು ಅಥವಾ ಹಣೆಯ ಮೇಲೆ ಭರವಸೆಯ ಮುತ್ತು ನೀಡಿದರೆ ಆಕೆಯ ಮುಖದಲ್ಲಿ ಮಂದಹಾಸ ಮೂಡುತ್ತದೆ.

ಆಕೆಯನ್ನ ಗಟ್ಟಿಯಾಗಿ ಹಗ್‌ ಮಾಡುವುದು : ಆಕೆಯನ್ನು ನೀವು ತುಂಬಾನೆ ಲವ್‌ ಮಾಡುತ್ತಿದ್ದೀರಿ ಎಂದಾದರೆ ಆಕೆಗೆ ನಿಮ್ಮ ಆರೈಕೆ ಮುಖ್ಯವಾಗಿ ಬೇಕಾಗುತ್ತದೆ. ಆದುದರಿಂದ ಅವರನ್ನು ಗಟ್ಟಿಯಾಗಿ ಹಗ್‌ ಮಾಡಿ. ಇದರಿಂದ ಅವರಿಗೆ ಸಂತೋಷವಾಗುತ್ತದೆ.

ಆಕೆಗೆ ಕೆಲಸದಲ್ಲಿ ಸಹಾಯ ಮಾಡುವುದು : ತರಕಾರಿ ಕೊಂಡುಕೊಳ್ಳುವಾಗ ಅಥವಾ ಮನೆಯಲ್ಲಿ ಅಡುಗೆ ಮಾಡುವಾಗ ಆಕೆಗೆ ಸಹಾಯ ಮಾಡಿ, ನಿಮಗೆ ಸಮಯ ಸಿಕ್ಕಾಗಲೆಲ್ಲ ಆಕೆಗೆ ನಿಮ್ಮಿಂದಾಗುವ ಸಣ್ಣ ಪುಟ್ಟ ಸಹಾಯ ಮಾಡುತ್ತಿರಿ.

ಪತ್ನಿಯ ಅಭಿಪ್ರಾಯವನ್ನು ಕೇಳಿ ನಿರ್ಧಾರ ತೆಗೆದುಕೊಳ್ಳುವುದು : ನಿಮಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಇದ್ದರೆ ಆಕೆಯ ಸಹಾಯ ಪಡೆದುಕೊಳ್ಳಿ. ಆಕೆಯಿಂದ ನೀವು ಅಭಿಪ್ರಾಯ ಪಡೆದುಕೊಂಡರೆ ಅದನ್ನು ಅಳವಡಿಸಿಕೊಂಡರೆ ಅವರಿಗೂ ಖುಶಿಯಾಗುತ್ತದೆ.

ಆಕೆಗೆ ಚಳಿಯಾದಾಗ ನಿಮ್ಮ ಜಾಕೆಟ್‌ ಬಿಚ್ಚಿ ಕೊಡುವುದು : ತನ್ನಾಕೆಯನ್ನು ಬೆಚ್ಚಗಿರಿಸುವುದು ಒಬ್ಬ ಜೆಂಟಲ್‌ಮ್ಯಾನ್‌ ಮಾಡುವಂತಹ ಕೆಲಸವಾಗಿದೆ. ಆಕೆಗೆ ಚಳಿಯಾದಾಗ ತನ್ನ ಜಾಕೆಟ್‌ನ್ನು ಬಿಚ್ಚಿ ಆಕೆಗೆ ನೀಡಿ, ಬೆಚ್ಚಗಿರುವಂತೆ ಮಾಡುವ ಆ ಅನುಭವ ಆಕೆಗೆ ಇಷ್ಟವಾಗುತ್ತದೆ.

ಆಕೆ ಮಾತನಾಡುವಾಗ ಕಿವಿಯಾಗಿ ಆಲಿಸುವುದು : ಇದನ್ನು ಪ್ರತಿಯೊಬ್ಬ ಪತ್ನಿಯೂ ಬಯಸುತ್ತಾಳೆ. ತಾನು ಮಾತನಾಡುವಾಗ, ತನ್ನ ಸಮಸ್ಯೆ – ನೋವನ್ನು ಹೇಳುವಾಗ ಆತ ತನ್ನ ಕಿವಿಯಾಗಬೇಕೆಂದು ಅಂದುಕೊಳ್ಳುತ್ತಾಳೆ.

ಆಕೆಗೆ ಸರ್‌ಪ್ರೈಸ್‌ ನೀಡುವುದು : ಎಲ್ಲಾ ಮಹಿಳೆಯರಿಗೂ ಸರ್‌ಪ್ರೈಸ್‌ ಎಂದರೆ ಇಷ್ಟವಾಗಿರುತ್ತದೆ. ಅದು ಸಿಂಪಲ್‌ ಹೂವು ಆಗಿರಬಹುದು ಅಥವಾ ಚಾಕಲೇಟ್, ಸಣ್ಣ ಗಿಫ್ಟ್‌ ಕೂಡ ಆಗಿರಬಹುದು. ಆಕೆಗೆ ಇಷ್ಟವಾಗುತ್ತದೆ.

ನಿಮ್ಮ ಕೆಲಸಕ್ಕೆ ರಜಾ ಹಾಕಿ ಆಕೆಯೊಂದಿಗೆ ಸಮಯ ಕಳೆಯೋದು : ವಾರದಲ್ಲಿ ಯಾವಾಗಲಾದರು ಒಂದು ದಿನ ರಜೆ ಹಾಕಿ ಆ ದಿನ ಪೂರ್ತಿಯಾಗಿ ಆಕೆಯೊಂದಿಗೆ ಕಳೆಯಿರಿ. ಸ್ವಲ್ಪ ರೊಮ್ಯಾನ್ಸ್‌‌, ದಿನಪೂರ್ತಿ ಆಕೆಯೊಂದಿಗೆ ಬೆಡ್‌ರೂಮ್‌, ರೊಮ್ಯಾಂಟಿಕ್‌ ಲಾಂಗ್‌ ಡ್ರೈವ್‌ ಇದೆಲ್ಲವೂ ಚೆನ್ನಾಗಿರುತ್ತದೆ.

ಆಕೆಗೆ ಆರೈಕೆ : ಅನಾರೋಗ್ಯದ ಸಮಯದಲ್ಲಿ ಆಕೆಗೆ ಮಗುವಿನಂತಹ ಆರೈಕೆ ನೀಡಿದರೆ ಆಕೆ ನಿಮ್ಮಿಂದ ಜೀವನದಲ್ಲಿ ಬೇರೇನನ್ನು ಬಯಸಲಾರಳು. ಯಾಕೆಂದರೆ ನಿಮಗೆ ಏನಾದರು ಆದರೆ ಆಕೆ ದಿನಪೂರ್ತಿ ನಿಮ್ಮ ಬೆನ್ನೆಲುಬಾಗಿ ನಿಮ್ಮೊಂದಿಗೆ ಇರುತ್ತಾಳೆ. ಅದೆ ರೀತಿ ನೀವು ಕೂಡ ಆಕೆಗೆ ಆರೈಕೆ ಮಾಡಿ.

ಆ ಮೂರು ಮ್ಯಾಜಿಕಲ್‌ ಪದಗಳು : ಹೌದು ಮದುವೆಯಾಗಿದೆ ಎಂದರೆ ಮೇಲೆ ಆ ಮ್ಯಾಜಿಕಲ್‌ ಶಬ್ಧಗಳನ್ನು ಹೇಳಲು ಹೆದರಬೇಡಿ. ಯಾಕೆಂದರೆ ಐ ಲವ್‌ ಯೂ ಎನ್ನುವ ಆ ಮಾಂತ್ರಿಕ ಪದಗಳನ್ನು ಕೇಳುತ್ತಲೆ ಆಕೆ ನಿಮಗೆ ಸಂಪೂರ್ಣವಾಗಿ ಸೋತು ಪರವಶಳಾಗುತ್ತಾಳೆ.

Comments are closed.