ಕರಾವಳಿ

ಯುವಕರು ನೈಜ ಚಳವಳಿಯಲ್ಲಿ ಭಾಗವಹಿಸಲಿ: ಯುವಸ್ಪೂರ್ತಿ ಪುರಸ್ಕಾರ ಸಮಾರಂಭದಲ್ಲಿ MLC ಕೋಟ ಶ್ರೀನಿವಾಸ್ ಪೂಜಾರಿ

Pinterest LinkedIn Tumblr

ಕುಂದಾಪುರ: ಯುವಶಕ್ತಿ ಮಿತ್ರ ಮಂಡಲ(ರಿ) ಹೆಗ್ಗಾರಬೈಲು ವಕ್ವಾಡಿ, ಇದರ 21ನೇ ವಾರ್ಷಿಕೋತ್ಸವದ ಅಂಗವಾಗಿ ಯುವಸ್ಪೂರ್ತಿ ಪುರಸ್ಕಾರ ಸಮಾರಂಭವು ವಕ್ವಾಡಿಯ ಯುವಶಕ್ತಿ ವೇದಿಕೆಯಲ್ಲಿ ಜರುಗಿತು‌.

ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನ ಪರಿಷತ್ ಸದ್ಯಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಡಾ.ಕುಸುಮಾಕರ ಶೆಟ್ಟಿ ಪ್ರೇಮ ಕ್ಲಿನಿಕ್ ತೆಕ್ಕಟ್ಟೆ ಅವರಿಗೆ ಯುವ ಸ್ಪೂರ್ತಿ ಪುರಸ್ಕಾರ ಪ್ರಧಾನವನ್ನು ಮಾಡಿ ಮಾತನಾಡಿ, ಇಂತಹ ಪುರಸ್ಕಾರಕ್ಕೆ ಅರ್ಹವಾದ ವ್ಯಕ್ತಿ ಕುಸುಮಾಕರ ಶೆಟ್ಟಿ, ಅವರು ಇನ್ನು ಹೆಚ್ಚಿನ ಸೇವೆಯನ್ನು ಈ ಸಮಾಜಕ್ಕೆ ನೀಡಲಿ ಎಂದು ಹಾರೈಸಿದರು‌ .ಯುವ ಸಮಾಜ ಹೆಚ್ಚು ಹೆಚ್ಚು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಹಾಗೆಯೇ ಯುವಜನರು ನೈಜ ಚಳುವಳಿಗಾಗಿ ಭಾಗವಹಿಸಬೇಕು ಹೊರತು ದುಷ್ಪ್ರೇರಿತ ಚಳುವಳಿಗಾಗಿ ಭಾಗವಹಿಸಬಾರದು ಎಂದು ಕರೆಕೊಟ್ಟರು.

ಸಭೆಯ ಅಧ್ಯಕ್ಷತೆಯನ್ನು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ವಹಿಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್, ಉದ್ಯಮಿಗಳಾದ ಬಿ.ಎಂ.ಹಂಝ, ವಿ.ಕೆ.ಹರೀಶ್,ಯುವಶಕ್ತಿ ಮಿತ್ರ ಮಂಡಲದ ಅಧ್ಯಕ್ಷ ಉಮೇಶ್ ಪೂಜಾರಿ ಅವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಜೀ ವಾಹಿನಿಯ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಆರಾಧ್ಯ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಗೌರವಾಧ್ಯಕ್ಷರಾದ ರಂಜಿತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ವಿಜಯ ಪೂಜಾರಿ ವಂದಿಸಿದರು. ಸಂತೋಷ ಕುಲಾಲ ಮತ್ತು ಶ್ರೀರಾಜ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ವಕ್ವಾಡಿಯ ಮಕ್ಕಳಿಗೆ ಡ್ರಾಮಾ ಜ್ಯೂನಿಯರ್ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಓಂಕಾರ್ ಕಲಾ ತಂಡ ಕನ್ನುಕೆರೆ ಇವರಿಂದ ನಾಟಕ ಜರುಗಿತು.

Comments are closed.