ಕರಾವಳಿ

ಕರಾವಳಿ ಬೆಡಗಿ ಶಾಸ್ತ್ರ ಶೆಟ್ಟಿಗೆ ಮಿಸ್ ಕ್ವೀನ್ ಕರ್ನಾಟಕ ಕಿರೀಟ

Pinterest LinkedIn Tumblr

ಉಡುಪಿ: ಕರಾವಳಿಗೂ ಫ್ಯಾಶನ್ ಲೋಕಕ್ಕೂಎಲ್ಲಿಲ್ಲದ ನಂಟು. ವಿಶ್ವ ಸುಂದರಿ ಐಶರ್ಯ ರೈ ನಿಂದ ಹಿಡಿದು ಸಾಲು ಸಾಲು ಬೆಡೆಗಿಯರು ಫ್ಯಾಶನ್ ಲೋಕದಲ್ಲಿ ಕರಾವಳಿ ಮಣ್ಣಿನ ಕೀರ್ತಿ ಹೆಚ್ಚಿಸಿದ್ದಾರೆ. ಇದೀಗ ಈ ಪಟ್ಟಿಗೆ ಮತ್ತೊಬ್ಬರು ಸುಂದರಿ ಸೇರ್ಪಡೆಯಾಗಿದ್ದಾರೆ. ಆ ಕ್ವೀನ್ ಯಾರು..? ಈ ವರದಿ ನೋಡಿ .

ಶಾಸ್ತ್ರ ಶೆಟ್ಟಿ ಸದ್ಯ ಫ್ಯಾಶನ್ ಲೋಕದಲ್ಲಿ ಸುದ್ದಿ ಮಾಡುತ್ತಿರೋ ಕರಾವಳಿ ಬೆಡಗಿ. ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ, ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡ ಅಪ್ರತಿಮ ಚೆಲುವೆ . ಸುಮಾರು 200 ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧಿಸಿದ್ದ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ,ಕೊನೆಯ 22 ಫೈನಲಿಸ್ಟ್ ಗಳಲ್ಲಿ ಟಾಪ್ 6 ರಲ್ಲಿ ಮಿಸ್ ಕ್ವೀನ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡು ಕರ್ನಾಟಕದ ಮಣ್ಣಿನ ಕೀರ್ತಿ ಹೆಚ್ಚಿಸಿದ್ದಾಳೆ.

ಉಡುಪಿಯ ಬೈಲೂರಿನ ಮಿಶನ್ ಕೌಪಂಡ್ ನಿವಾಸಿಯಾಗಿರೋ ಶಾಸ್ತ್ರ ಶೆಟ್ಟಿ,ಮಣಿಪಾಲದ ಎಂ ಐ ಸಿ ಯ ಅಂತಿಮ ವರುಷದ ವಿದ್ಯಾರ್ಥಿನಿ.ಚಿಕ್ಕವಳಾಗಿದ್ದಾಗಲೇ ಈಕೆಗೆ ಫ್ಯಾಶನ್ ಲೋಕದಲ್ಲಿ ಅಪಾರ ಅಸಕ್ತಿ .ತನ್ನ 5 ನೇ ವಯಸ್ಸಿನಲ್ಲಿಯೇ ಚೈಲ್ಡ್ ಬೇಬಿ ಪ್ರಿನ್ಸ್ ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಳು,ಅಪಾರ ಜ್ನಾನ ಶಕ್ತಿ ಹೊಂದಿರುವ ಈಕೆ,ರಾಷ್ಟ್ರ ಮಟ್ಟದ ಚರ್ಚಾ ಕೂಟ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.ಇದುವೇ ಈವಾಗ ಈಕೆಯ ಭಾಗವಹಿಸುವ ಸೌಂದರ್ಯ ಸ್ಪರ್ಧೆಗಳ ಗೆಲುವಿಗೆ ವರದಾನವಾಗಿದೆ. ಅದ್ಬುತ ಸೌಂದರ್ಯ ರಾಶಿಯ ಈ ಚೆಲುವೆಗೆ ಇನ್ನೂ 20 ರ ಹರೆಯ.

ಫ್ಯಾಶನ್ ಲೋಕಕ್ಕೆ ಎಂಟ್ರಿ ಕೊಡ್ತಾ ಇದ್ದಂತೆ ಈಕೆ ಮಿಸ್ ಕರಾವಳಿ ಹಾಗೂ ಮಿಸ್ ಮಂಗಳೂರು ಕಿರೀಟಗಳನ್ನು ಒಂದೇ ವರುಷದಲ್ಲಿ ಮುಡಿಗೇರಿಸಿಕೊಂಡಿದ್ದಳು. 2016 ರಲ್ಲಿ ಸೌತ್ ಇಂಡಿಯನ್ ಟೀನ್ ಯೂನಿವರ್ಸ್ ಅದ ಬೆಡಗಿ ಮತ್ತೆ ಹಿಂದೆ ತಿರುಗಿ ನೋಡೆ ಇಲ್ಲ .2017 ರಲ್ಲಿ ಮಿಸ್ ಟೀನ್ ಗ್ರ್ಯಾಂಡ್ ಸೀ ಇಂಡಿಯಾದಲ್ಲಿ ಗೆದ್ದು ಬೆಲ್ಜೆರಿಯಾದಲ್ಲಿ ನಡೆದ ಮಿಸ್ ಟೀನ್ ಗ್ಯ್ರಾಂಡ್ ಸೀ ಯೂನಿವರಸ್ ದೇಶವನ್ನು ಪ್ರತಿನಿಧಿಸಿ ಮಿಸ್ ಟೀನ್ ಗ್ರ್ಯಾಂಡ್ ಸೀ ಎಶಿಯಾ ಕಿರೀಟವನ್ನು ಈ ತನ್ನದಾಗಿಸಿಕೊಂಡಿದ್ದಳು .ಈಗಾಗಲೇ ಫ್ಯಾಶನ್ ಜಗತ್ತಿನಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಅಪ್ರತಿಮ ಸುಂದರಿಗೆ, ಸಿನಿಮಾ ರಂಗ ಕೈ ಬೀಸಿ ಕರೆಯುತ್ತಿದೆ.ಸ್ಯಾಂಡಲ್ ವುಡ್ ನಿಂದಲೂ ಈಗಾಗಲೇ ಹಲವು ಆಫರ್ ಗಳು ಬಂದಿದ್ದು ,ಸದ್ಯಕ್ಕೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಇನ್ನೂ ಕೂಡ ತೀರ್ಮಾನ ತೆಗೆದುಕೊಂಡಿಲ್ಲವಂತೆ.

ಇದೀಗ ಮಿಸ್ ಕ್ವೀನ್ ಕರ್ನಾಟಕ ಅಗುವುದರ ಮೂಲಕ ಶಾಸ್ತ್ರ ಶೆಟ್ಟಿ, ಮುಂದಿನ ಜೂನ್ ಜುಲೈ ತಿಂಗಳಲ್ಲಿ ನಡೆಯಲಿರುವ ಮಿಸ್ ಕ್ವೀನ್ ಇಂಡಿಯಾ ಸ್ಪರ್ಧೆಗೆ ನೇರ ಪ್ರವೇಶವನ್ನು ಪಡೆದಿದ್ದಾಳೆ. ಇಲ್ಲೂ ಗೆದ್ರೆ ಮಿಸ್ ಕ್ವೀನ್ ಎಷ್ಯಾ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಳಿದ್ದಾಳೆ.ಒಟ್ಟಿನಲ್ಲಿ ಕರಾವಳಿಯ ಬೆಡಗಿ ಫ್ಯಾಶನ್ ಲೋಕದಲ್ಲಿ ತನ್ನದೇ ಆದ ಹವಾ ಎಬ್ಬಿಸುತ್ತಿದ್ದಾಳೆ ಅಂದ್ರೆ ತಪ್ಪಿಲ್ಲ.ಮುಂದಿನ ದಿನಗಳಲ್ಲಿ ಇನ್ನಷ್ಟು ಕಿರೀಟಗಳನ್ನ ತನ್ನದಾಗಿಸಿಕೊಳ್ಳಲಿ, ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನಲ್ಲಿ ಮಿಂಚಲಿ ಅನ್ನುವುದೇ ಎಲ್ಲರ ಆಶಯ.

 

Comments are closed.