ಅಂತರಾಷ್ಟ್ರೀಯ

ಉಡುಪಿ ಕುಂದಾಪುರ ಮೂಲದ ಮಾಲಾ ಅಡಿಗ ಅಮೆರಿಕದ ಪ್ರಥಮ ಮಹಿಳೆಯ ಪಾಲಿಸಿ ಡೈರೆಕ್ಟರ್​!

Pinterest LinkedIn Tumblr

ಉಡುಪಿ​: ಕರ್ನಾಟಕದ ಕರಾವಳಿ ಮೂಲದ ಮಾಲಾ ಅಡಿಗ ಅವರು ಅಮೆರಿಕದ ಶ್ವೇತಭವನದಲ್ಲಿ ಪ್ರಭಾವಿ ಅಧಿಕಾರವನ್ನು ಪಡೆದಿದ್ದು ಈ ಮೂಲಕ ವಿದೇಶಗಳಲ್ಲೂ ತಮ್ಮ ಪ್ರತಿಭೆ ಮೂಲಕ ಉತ್ತಮ ಸ್ಥಾನ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಭಾರತೀಯರಿಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಅಮೆರಿಕದಲ್ಲಿ ಡೊನಾಲ್ಡ್​ ಟ್ರಂಪ್​ ಅಧಿಕಾರವಾಧಿ ಮುಗಿದಿದ್ದು ಜೋ ಬೈಡೆನ್​ ಅವರ ಹೊಸ ಸರ್ಕಾರ ರಚನೆಯಾಗಿದೆ. ಜೋ ಬೈಡೆನ್​ ಅವರ ಪತ್ನಿ ಜಿಲ್​ ಬಿಡೆನ್​ (ಅಮೆರಿಕದ ಪ್ರಥಮ ಮಹಿಳೆ) ಅವರಿಗೆ ಪಾಲಿಸಿ ಡೈರೆಕ್ಟರ್ ಆಗಿ ಭಾರತದ ಅದರಲ್ಲೂ ಕರ್ನಾಟಕದ ಉಡುಪಿ ಕುಂದಾಪುರ ಮೂಲದ ಮಹಿಳೆ ಮಾಲಾ ಅಡಿಗ ಆಯ್ಕೆಯಾಗಿದ್ದಾರೆ. ಮಾಲಾ ಅಡಿಗರನ್ನು ಅಧ್ಯಕ್ಷ ಜೋ ಬಿಡೆನ್​ ಅವರೇ ಆಯ್ಕೆ ಮಾಡಿದ್ದಾರೆ.

ಮಾಲಾ ಅಡಿಗ ಅವರು ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ಮೂಲದವರು. ಅವರ ತಂದೆ ಡಾ. ರಮೇಶ್ ಅಡಿಗ ಅಮೆರಿಕಾದಲ್ಲಿ ಕಳೆದ ಆರು ದಶಕಗಳಿಂದ ನೆಲೆಸಿದ್ದು ವೈದ್ಯರಾಗಿದ್ದಾರೆ. ಮಾಲಾ ಅವರು ಹುಟ್ಟಿ ಬೆಳೆದಿದ್ದು ಅಮೆರಿಕದಲ್ಲೇ. ಸದ್ಯ ಅವರು ವಾಷಿಂಗ್ಟನ್‌ ನಿವಾಸಿಯಾಗಿದ್ದು, ಅಮೆರಿಕದ ಗ್ರಿನೆಲ್‌ ಕಾಲೇಜು, ಮಿನ್ನೆಸೊಟಾ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ ವಿ.ವಿ., ಶಿಕಾಗೋ ಲಾ ಸ್ಕೂಲ್‌ ವಿ.ವಿ.ಗಳಿಂದ ಪದವಿ ಗಳಿಸಿದ್ದರು.

ಕುಂದಾಪುರ ತಾಲೂಕು ಕಕ್ಕುಂಜೆಯ ಅಡಿಗ ಕುಟುಂಬದ ಮಗಳು ಮಾಲಾ ಅವರು ಈ ಹಿಂದೆ ಬೈಡೆನ್ ಫೌಂಡೇಶನ್​ನ ಉನ್ನತ ಶಿಕ್ಷಣ ನಿರ್ದೇಶಕಿಯಗಿದ್ದರು. ಬರಾಕ್ ಒಬಾಮಾ ಅವರಿಗೆ ಶಿಕ್ಷಣ, ಸಾಂಸ್ಕೃತಿಕ ವಿಭಾಗದ ಉಪ ಸಹಾಯಕ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅಮೆರಿಕಾದ ನ್ಯಾಶನಲ್ ಸೆಕ್ಯೂರಿಟಿ ಸ್ಟಾಫ್​ನಲ್ಲಿ ಮಾನವ ಹಕ್ಕುವಿಭಾಗದ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಇದೀಗ ಪ್ರಥಮ ಮಹಿಳೆಯ ಪಾಲಿಸಿ ಡೈರೆಕ್ಟರ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ.

Comments are closed.