ಕರಾವಳಿ

ಗರ್ಭಾವಸ್ಥೆಯಲ್ಲಿ ನವೆಗೆ ಕಾರಣ ಮತ್ತು ಮನೆ ಔಷಧಗಳು

Pinterest LinkedIn Tumblr

ನೀವು ಗರ್ಭಿಣಿ ಆಗಿರುವಾಗ, ಹೆಚ್ಚು ಎಚ್ಚರಿಕೆವಹಿಸುವುದು ತುಂಬಾ ಅಗತ್ಯ. ಯಾವುದಾದರೂ ನಿಮ್ಮ ದೇಹದ ಸಾಮಾನ್ಯ ಲಕ್ಷಣವನ್ನು ಬಿಟ್ಟು ಬೇರೆ ವ್ಯತ್ಯಾಸವನ್ನು ಕಂಡರೆ ನೀವು ಚಿಂತೆಗೆ ಒಳಗಾಗುವುದು ಸಾಮಾನ್ಯ. ಅದರಲ್ಲಿ ತುರಿಕೆ ಅಥವಾ ನವೆ ಕೂಡ ಒಂದು. ನಿಮ್ಮ ಹಿರಿಯರು ನಿಮಗೆ ನವೆ ಆದರೆ ಕೆರೆದುಕೊಳ್ಳಬೇಡ ಎಂಬುದನ್ನು ತಿಳಿಸುವರು ಆದರೆ, ನಿಮಗೆ ಹೇಗೆ ಆಗುತ್ತಿರುತ್ತದೆ ಮತ್ತು ಅದರಿಂದ ನೀವು ಎಷ್ಟು ಒತ್ತಡ ಅನುಭವಿಸುತ್ತಿರುವಿರಿ ಎಂಬುದು ನಮಗೆ ಗೊತ್ತು. ಅದಕ್ಕಾಗಿ ನಿಮಗೆ ನವೆ ಉಂಟಾಗಲು ಕಾರಣ ಮತ್ತು ಅದಕ್ಕೆ ಮನೆಮದ್ದುಗಳನ್ನು ನಿಮಗಾಗಿ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಗರ್ಭಾವಸ್ಥೆಯಲ್ಲಿ ನವೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆ, ಆದರೆ ಇದಕ್ಕೆ ಖಂಡಿತ ಪರಿಹಾರವಿದೆ, ಅದು ನಿಮ್ಮ ಮನೆಯಲ್ಲೇ ಇದಕ್ಕೆ ಪರಿಹಾರವಿದೆ. ಈ ಸ್ಥಿತಿಯನ್ನು ಹೋಗಲಾಡಿಸಲು ಹಲವು ಮನೆ ಔಷದಗಳಿವೆ, ಅದನ್ನು ತಿಳಿಯಲು ಮುಂದೆ ಓದಿ.

ಗರ್ಭಾವಸ್ಥೆಯಲ್ಲಿ ನವೆ ಉಂಟಾಗಲು ಕಾರಣ
ಗರ್ಭಾವಸ್ಥೆಯಲ್ಲಿ ನವೆ ಉಂಟಾಗಲು ಸಾಮಾನ್ಯ ಕಾರಣವೆಂದರೆ ತೂಕ ಪಡೆಯುವುದು ಮತ್ತು ಹಾರ್ಮೋನುಗಳ ಬದಲಾವಣೆ. ನೀವು ಈ ಸಮಯದಲ್ಲಿ ತೂಕ ಪಡೆಯುವಿರಿ ಮತ್ತು ನಿಮ್ಮ ಹೊಟ್ಟೆಯ ಭಾಗದ ಚರ್ಮ ಹಿಗ್ಗುವುದು, ಇದರಿಂದ ಚರ್ಮದಲ್ಲಿ ಸ್ವಲ್ಪ ನೀರಿನಾಂಶ ಕಡಿಮೆಯಾಗುವುದು. ಹಾರ್ಮೋನುಗಳು ಬದಲಾಗುವುದರಿಂದ ಅವು ಚರ್ಮದ ಮೇಲೆ ನವೆಯನ್ನು ಉಂಟುಮಾಡುವುದು.

ಕೆಲವು ಸಮಾನ್ಯವಲ್ಲದ ಕಾರಣಗಳೆಂದರೆ
೧.ಕೊಲೆಸ್ಟಾಸಿಸ್
ಇದು ಗರ್ಭಿಣಿ ಮಹಿಳೆ ಲಿವರ್ ನಲ್ಲಿ ತೊಂದರೆ ಆಗಿರುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಹರಿಯುವ ಬೈಲ್ ಸ್ವಲ್ಪ ತೊಂದರೆಗೆ ಒಳಗಾಗಿದ್ದರೆ ಕೂಡ ನವೆಯನ್ನು ಕಾಣುವರು.

ಗುರುತಿಸುವುದು ಹೇಗೆ
ಇದನ್ನು ಅನುಭವಿಸುವ ಮಹಿಳೆಯರು ತಮ್ಮ ತ್ವಚೆಯ ಎಲ್ಲಾ ಭಾಗದಲ್ಲೂ ನವೆಯನ್ನು ಅನುಭವಿಸುವರು, ಆದರೆ ಯಾವುದೇ ದದ್ದುಗಳು ಕಾಣಿಸುವುದಿಲ್ಲ.ಇದು ಮಗುವಿಗೆ ಕೂಡ ತೊಂದರೆಯನ್ನು ಉಂಟುಮಾಡಬಹುದು. ಕೂಡಲೇ ವೈದ್ಯರಲ್ಲಿ ತೋರಿಸಿಕೊಳ್ಳುವುದು ಉತ್ತಮ.

೨.ಈಸ್ಟ್ ಸೋಂಕು
ಕೆಲವು ಮಹಿಳೆಯರು ತಮ್ಮ ಯೋನಿಯ ಭಾಗದಲ್ಲಿ ನವೆಯನ್ನು ಅನುಭವಿಸುವರು. ಇದಕ್ಕೆ ಕಾರಣ ಈಸ್ಟ್ ಸೋಂಕು. ಇದು ಸಾಮಾನ್ಯವಾಗಿ ಜನನಾಂಗದ ಭಾಗದಲ್ಲಿ ಆಗುತ್ತದೆ. ಹಾರ್ಮೋನುಗಳ ಅಸಮತೋಲನ, ಹೆಚ್ಚು ಕರ್ಬೋಹೈಡ್ರೇಟ್ ಮತ್ತು ಸಕ್ಕರೆ ಸೇವನೆ ಅವರ ಯೋನಿಯ ಬಳಿ ಫ್ಯಾನ್ಗಲ್ ಅನ್ನು ಬೆಳೆಯುವಂತೆ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಇದನ್ನು ಅವರು ಬೆಳೆಸಿಕೊಳ್ಳುವರು. ನೈರ್ಮಲ್ಯ ಕಾಪಾಡಿಕೊಳ್ಳುವುದು ಇದಕ್ಕೆ ಸೂಕ್ತ ಪರಿಹಾರ. ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡುವುದು.

ಗರ್ಭಾವಸ್ಥೆಯಲ್ಲಿ ನವೆಗೆ ಮನೆ ಔಷಧಗಳು
೧.ಲೋಗಸರ
ಲೋಗಸರದ ಲೋಳೆಯನ್ನು ನವೆ ಇರುವ ಭಾಗದ ತ್ವಚೆಯ ಮೇಲೆ ನೇರವಾಗಿ ಹಚ್ಚಿ, ನಿಧಾನವಾಗಿ ಮತ್ತು ಮೃದುವಾಗಿ ಮಸಾಜ್ ಮಾಡಿ. ಕೆಲವು ಸಮಯದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ನೀವು ದಿನಕ್ಕೆ ಎರಡು ಬಾರಿ ಮಾಡಬಹುದು.

೨.ಬೇಕಿಂಗ್ ಸೋಡಾ ಸ್ನಾನ
೨-೩ ಚಮಚ ಬೇಕಿಂಗ್ ಸೋಡವನ್ನು ಸ್ವಲ್ಪ ನೀರಿನ ಜೊತೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಹೊಟ್ಟೆಯ ಸುತ್ತ ಮತ್ತು ನವೆ ಇರುವ ಭಾಗದಲ್ಲಿ ಹಚ್ಚಿರಿ. ಇದು ಒಣಗಲು ಬಿಡಿ. ಮತ್ತು ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.

೩.ಕೊಬ್ಬರಿ ಎಣ್ಣೆ
ನವೆ ಇರುವ ಜಾಗವನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.
ನಂತರ ಎರಡು ಹನಿ ಕೊಬ್ಬರಿ ಎಣ್ಣೆಯನ್ನು ತ್ವಚೆ ಮೇಲೆ ಹಾಕಿ ನಿದಾನವಾಗಿ ಮತ್ತು ಮೃದುವಾಗಿ ಹಚ್ಚಿರಿ/ಸವರಿ.
ಮಸಾಜ್ ಮಾಡಿ ಹಾಗೆಯೇ ಬಿಡಿ.

೪.ಕಡ್ಲೆ ಹಿಟ್ಟು
೨-೩ ಚಮಚ ಕಡ್ಲೆ ಹಿಟ್ಟನ್ನು ಸ್ವಲ್ಪ ನೀರಿನ ಜೊತೆ ಬೆರಸಿ ಪೇಸ್ಟ್ ತಯಾರಿಸಿಕೊಳ್ಳಿ.
ಇದನ್ನು ನವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ.
ಇದು ತಾನಾಗಿಯೇ ತ್ವಚೆಯ ಮೇಲೆ ನಿಧಾನವಾಗಿ ಒಣಗಲು ಬಿಡಿ.
ನಂತರ ಇದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ನೀವು ಇದಕ್ಕೆ ನೀರಿನ ಬದಲು ಹಾಲನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಬಹುದು. ಆದರೆ ನಿಮಗೆ ಇದರಿಂದ ಅಲರ್ಜಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

Comments are closed.