ಕರ್ನಾಟಕ

ಹಿರಿಯರು ಬಳಸುತ್ತಿದ್ದ ದುಬಾರಿಯಲ್ಲದ, ಹೆಲ್ತಿ ಕಾಸ್ಮೆಟಿಕ್ಸ್ ಏನಿರಬಹುದು ಗೊತ್ತೆ.

Pinterest LinkedIn Tumblr

old_lady_charmi

ಮಂಗಳೂರು: ನಮ್ಮ ಹಿರಿಯವರು ತಮ್ಮ ಅಡುಗೆಮನೆಯಲ್ಲಿ, ಮನೆಯ ಹಿತ್ತಲಿನಲ್ಲಿ ಸಿಗುತ್ತಿದ್ದ ಪದಾರ್ಥಗಳು, ಹಣ್ಣು-ತರಕಾರಿಗಳನ್ನು ಉಪಯೋಗಿಸಿಕೊಂಡು ತಮ್ಮ ತ್ವಚೆ ಹಾಗೂ ದೇಹದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದರು. ಹಾಗಾದರೆ ಅವರು ಬಳಸುತ್ತಿದ್ದ ದುಬಾರಿಯಲ್ಲದ, ಹೆಲ್ತಿ ಕಾಸ್ಮೆಟಿಕ್ಸ್ ಏನಿರಬಹುದೆಂದು ನೋಡೋಣ ಬನ್ನಿ.

5turmeric

ಅರಿಶಿನ
ಅರಿಶಿನ ಭಾರತೀಯರ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥ ಹಾಗೂ ದೈನಂದಿನ ಜೀವನದಲ್ಲಿ ಬಳಸುವ ಪದಾರ್ಥ. ನಂಜುನಿರೋಧಕ ಗುಣಗಳನ್ನು ಹೊಂದಿರುವ ಅರಿಶಿನವನ್ನು ಮುಖಕ್ಕೆ ಹಚ್ಚುವುದರಿಂದ ಕಲೆಗಳು, ಮೊಡವೆಗಳು ಸುಲಭವಾಗಿ ಹೋಗುತ್ತವೆ.ಇದನ್ನು ಫೇಸ್ ಮಾಸ್ಕ್ ಆಗಿಯೂ ಬಳಸುವುದರಿಂದ ತ್ವಚೆ ಆರೋಗ್ಯಕರವಾಗಿ ಇರುವುದಲ್ಲದೆ, ಮುಖದ ಕಾಂತಿ ಹೆಚ್ಚುತ್ತದೆ.

cucumber

ನಿಂಬೆಹಣ್ಣು ಹಾಗೂ ಸವತೆಕಾಯಿ
ಕೆಮಿಕಲ್ ಬ್ಲೀಚಿಂಗ್ ಹಾಗೂ ಟ್ಯಾನ್ ರಿಮೂವಲ್ ಚಿಕಿತ್ಸೆ ಇರದಿದ್ದರೂ ಅಜ್ಜಿಯಂದಿರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದರು. ಹೇಗೆಂದರೆ ಮುಖಕ್ಕೆ ಸವತೆಕಾಯಿ ಹಾಗೂ ನಿಂಬೆಹಣ್ಣಿನ ರಸದ ಮಿಶ್ರಣವನ್ನು ಹಚ್ಚುತ್ತಿದ್ದರು. ಇದರಿಂದ ಚರ್ಮದ ಟ್ಯಾನಿಂಗ್ ದೂರವಾಗುತ್ತಿತ್ತು ಅಲ್ಲದೆ, ತ್ವಚೆಯ ಆಳದಲ್ಲಿ ಅಡಗಿರುವ ಕೊಳೆಯು ನಾಶವಾಗುತ್ತಿತ್ತು.

potato

ಆಲುಗಡ್ಡೆ:
ಕಣ್ಣಿನ ಕೆಳಗೆ ಬರುವ ಡಾರ್ಕ್ ಸರ್ಕಲ್ ನಂತಹ ಸಮಸ್ಯೆಗಳಿಗೆ ಅವರು ಬಳಸುತ್ತಿದ್ದದ್ದು ಆಲುಗಡ್ಡೆ. ಹೌದು, ಕತ್ತರಿಸಿಕೊಂಡ ಹಸಿ ಆಲುಗಡ್ಡೆಯ ತೆಳುವಾದ ಬಿಲ್ಲೆಯನ್ನು ಕಣ್ಣಿನ ಕೆಳಗಡೆ ಇಟ್ಟು 5-10 ನಿಮಿಷ ಬಿಟ್ಟು ಮುಖ ತೊಳೆಯುವುದರಿಂದ ಬಹಳ ಬೇಗ ಫಲಿತಾಂಶ ಕಂಡುಕೊಳ್ಳಬಹುದು.

honey

ಜೇನುತುಪ್ಪ:
ಜೇನುತುಪ್ಪವನ್ನು ಫೇಸ್ ಮಾಸ್ಕ್ ಆಗಿ ಬಳಸುವುದರಿಂದ ಬಂಗಾರದಂತಹ ಬಣ್ಣದ ತ್ವಚೆ ಪಡೆಯಬಹುದಂತೆ! ನೀವೂ ಟ್ರೈ ಮಾಡಿ.

methi_benfyt_photo

ಮೆಂತ್ಯೆಕಾಳು:
ರಾತ್ರಿ ನೆನೆಸಿಟ್ಟ ಮೆಂತ್ಯೆಕಾಳನ್ನು ಮರುದಿನ ಬೆಳಗ್ಗೆ ರುಬ್ಬಿ. ಇದನ್ನು ತಲೆ ಕೂದಲಿಗೆ ಹಚ್ಚುವುದರಿಂದ ಕೂದಲು ಶಕ್ತಿಯುತವಾಗುವುದಲ್ಲದೆ, ಕಪ್ಪಗೆ, ದಟ್ಟವಾಗಿ ಬೆಳೆಯುತ್ತವಂತೆ.

gram_flour_1

ಕಡಲೆಹಿಟ್ಟು:
ಇನ್ನು ಕಡಲೆಹಿಟ್ಟಿನಿಂದ ಆಗುವ ಲಾಭ ಒಂದೇ, ಎರಡೇ ನೂರಾರು.ಮುಖ್ಯವಾಗಿ ಸ್ಕಿನ್ ಟ್ಯಾನ್ ಆಗದಂತೆ ತಡೆಯಲು, ಸ್ಕಿನ್ ಲೈಟನಿಂಗ್ ಗೆ, ಎಣ್ಣೆ ತ್ವಚೆ ಆರೈಕೆ ಮಾಡಲು, ಮೊಡವೆ ಬರದಂತೆ ತಡೆಯಲು, ಅನಗತ್ಯ ಕೂದಲು ತೆಗೆಯಲು, ಉದ್ದ ಕೂದಲಿಗಾಗಿ, ಸುಂದರವಾದ ಕಲೆ ಮುಕ್ತ ತ್ವಚೆ ಹೊಂದಲು ಕಡಲೆಹಿಟ್ಟಿನ ಫೇಸ್ ಫ್ಯಾಕ್, ಹೇರ್ ಪ್ಯಾಕ್ ಹಾಕಬೇಕು.

sweetlime_juice_pic

ನಿಂಬೆಹಣ್ಣಿನ ಸಿಪ್ಪೆ:
ಮೊಣಕಾಲು, ಮೊಣಕೈ ಕಪ್ಪಗೆ ಒರಟಾಗಿದ್ದರೆ ನಿಂಬೆಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಉಜ್ಜಿಕೊಳ್ಳಬೇಕು. `ಇದರಿಂದ ಆ ಭಾಗಗಳ ಚರ್ಮಕ್ಕೆ ಹೊಸಕಾಂತಿ ಮೂಡುವುದು, ಮೃದುವಾಗುವುದು.

castor_oil_1

ಹರಳಣ್ಣೆ
ರಾತ್ರಿ ಮಲಗುವ ಮುನ್ನ ಒಂದು ಹನಿ ಹರಳಣ್ಣೆ ತೆಗೆದುಕೊಂಡು ಕಣ್ಣಿನ ಮೇಲಿಂದ ಮಸಾಜ್ ಮಾಡಿದರೆ ಆಯಾಸ ಪರಿಹಾರವಾಗುವುದು. ಹಾಗೆಯೇ ಹುಬ್ಬುಗಳಿಗೂ ಹರಳಣ್ಣೆ ಮಸಾಜ್ ಮಾಡುವುದರಿಂದ ಹುಬ್ಬಿನ ಕೂದಲು ದಟ್ಟವಾಗುವುದಲ್ಲದೆ ಕಪ್ಪಾಗಿ ಹೊಳೆಯುತ್ತವೆ.

ಹೀಗೆ ಮನೆಯಲ್ಲೇ ಸಿಗುವ, ಕೆಗೆಟಕುವ ಪದಾರ್ಥಗಳಾದ ಸಕ್ಕರೆ, ಉಪ್ಪು, ಸೊಪ್ಪು, ಬೇವು, ಬೇಳೆ, ಅಕ್ಕಿಹಿಟ್ಟು, ಹಣ್ಣು-ತರಕಾರಿ, ಕಾಯಿಗಳನ್ನು ಉಪಯೋಗಿಸಿಕೊಂಡು ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದೆವು ಎಂದು ನಮ್ಮ ಅಜ್ಜಿಯಂದಿರು ಹೇಳುವಾಗ ದುಬಾರಿ ಕ್ರೀಮ್ ಗಳನ್ನು ಬಳಸುವ ನಮಗೆ ಆಶ್ಚರ್ಯವಾಗದೆ ಇರದು ಅಲ್ಲವೇ..?

Comments are closed.