ರಾಷ್ಟ್ರೀಯ

ಬಾಲಕನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಫಾ| ಕುರಿಯಾಕೋಸ್‌ಗೆ 14 ದಿನ ನ್ಯಾಯಾಂಗ ಬಂಧನ

Pinterest LinkedIn Tumblr

 rape

ಕೊಚ್ಚಿ : ಹತ್ತು ವರ್ಷ ಪ್ರಾಯದ ಬಾಲಕನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ನಿನ್ನೆ ಭಾನುವಾರ ಬಂಧಿಸಲ್ಪಟ್ಟಿದ್ದ ಇಲ್ಲಿನ ಕಿಂಗ್ಸ್‌ ಡೇವಿಡ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ ನ ಪ್ರಾಂಶುಪಾಲ ಫಾ| ಬಾಸಿಲ್‌ ಕುರಿಯಾಕೋಸ್‌ ಅವರನ್ನು ಇಂದು ಸೋಮವಾರ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.

ನಿನ್ನೆ ಭಾನುವಾರ ಕೊಚ್ಚಿಯ ಕುನ್ನತ್ತನಾಡ್‌ ಎಂಬಲ್ಲಿ 10 ವರ್ಷದ ಹುಡುಗನ ಜತೆಗೆ ಬಲವಂತದ ಸಂಭೋಗ ನಡೆಸಿದ್ದಕ್ಕಾಗಿ ಪೊಲೀಸರು ಫಾ| ಕುರಿಯಾಕೋಸ್‌ ಅವರನ್ನು ಬಂಧಿಸಿದ್ದರು. ಈ ಬಗ್ಗೆ ಬಾಲಕನ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು.

ಬಾಲಕನು ಇಲ್ಲಿನ ಬೋರ್ಡಿಂಗ್‌ ಶಾಲೆಯಲ್ಲಿ ಓದುತ್ತಿದ್ದ. ಫಾ| ಕುರಿಯಾಕೋಸು ಅವರು ತನ್ನ ಮೇಲೆ ಬಲವಂತದ ಸಂಭೋಗ ನಡೆಸಿದ ವಿಷಯವನ್ನು ಬಾಲಕನು ತನ್ನನ್ನು ಕಾಣಲು ಶಾಲೆಗೆ ಬಂದಿದ್ದ ತನ್ನ ಅಣ್ಣನಿಗೆ ಮೊದಲಾಗಿ ತಿಳಿಸಿದ್ದ. ಆ ಬಳಿಕ ವಿಷಯ ತಿಳಿದ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು.

Comments are closed.