ಕರಾವಳಿ

ಗುಂಗುರು ಕೂದಲಿನ ಆರೈಕೆಗೆ ಕೆಲವೊಂದು ಸಲಹೆಗಳು

Pinterest LinkedIn Tumblr

curly_hair_photo

ಮಂಗಳೂರು: ಗುಂಗುರು ಕೂದಲು ಇರುವವರಿಗೆ ಅದನ್ನು ಸರಿಯಾಗಿ ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿಬಿಡುತ್ತದೆ. ಗುಂಗುರು ಕೂದಲು ಯಾವಾಗಲೂ ಒಣಗಿದಂತೆ, ಸತ್ವವಿಲ್ಲದಂತೆ ಕಾಣುತ್ತಾ ಇರುತ್ತದೆ. ಇದಕ್ಕೆ ಯಾವುದೇ ಶಾಂಪೂ ಬಳಸಿದರೂ ಅಷ್ಟೇ. ಮರುದಿನ ಮತ್ತೆ ಅದೇ ರೀತಿ ಕಾಣುತ್ತಾ ಇರುತ್ತದೆ.

ಆದರೆ ಪ್ರತೀ ದಿನ ಇದನ್ನು ಸರಿಯಾಗಿ ಆರೈಕೆ ಮಾಡುವುದರಿಂದ ಕೂದಲು ಸುಂದರವಾಗಿ ಕಾಣಿಸಬಹುದು. ಹರಳೆಣ್ಣೆಯನ್ನು ಬಳಸಿದರೆ ನಿಮ್ಮ ಕೂದಲಿಗೆ ಪೋಷಕಾಂಶ ಲಭ್ಯವಾಗಿ ಅದು ಹೊಳೆಯುತ್ತಾ ಇರುತ್ತದೆ. ಹರಳೆಣ್ಣೆಯು ಕೂದಲಿನ ಮೇಲ್ಭಾಗದಲ್ಲಿ ಒಂದು ಪದರವನ್ನು ನಿರ್ಮಿಸಿ ತೇವಾಂಶವು ಉಳಿದುಕೊಳ್ಳುವಂತೆ ಮಾಡುವುದು.

ಗುಂಗುರು ಕೂದಲಿನ ಆರೈಕೆಗೆ ನೀಡಲಾಗಿರುವ ಕೆಲವೊಂದು ಸಲಹೆಗಳು ಇಲ್ಲಿವೆ. ಇದನ್ನು ಪಾಲಿಸಿ:

ಶಾಂಪೂ ಹಾಕಿಕೊಳ್ಳುವ ಮೊದಲು ಸುಮಾರು 15 ನಿಮಿಷಗಳ ಕಾಲ ಕೂದಲನ್ನು ಹರಳೆಣ್ಣೆಯಿಂದ ಸರಿಯಾಗಿ ಮಸಾಜ್ ಮಾಡಿಕೊಳ್ಳಿ.
ಕೆಲವು ಹನಿ ಹರಳೆಣ್ಣೆಯನ್ನು ಕಂಡೀಷನರ್ ಜತೆ ಮಿಶ್ರಣ ಮಾಡಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ.ಸ್ವಲ್ಪ ಹರಳೆಣ್ಣೆ, ಅಲೋವೆರಾ ಜೆಲ್, ಜೇನು ಮತ್ತು ನಿಂಬೆಯನ್ನು ಮಿಶ್ರಣ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ.ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

apple_cider_vinegar

ಆಪಲ್ ಸೀಡರ್ ವಿನೇಗರ್ ಅನ್ನು ನಿಮ್ಮ ಮೇಕಪ್ ಕಿಟ್ನಲ್ಲಿ ಯಾವಾಗಲೂ ಇಟ್ಟುಕೊಳ್ಳಿ. ಆಪಲ್ ಸೀಡರ್ ವಿನೇಗರ್‪ನಲ್ಲಿ ತೇವಾಂಶ ನೀಡುವ ಗುಣವಿದೆ. ಇದು ಕೂದಲನ್ನು ನುಣ್ಣಗೆ ಮಾಡುವುದು.

ಒಂದು ಕಪ್ ಆಪಲ್ ಸೀಡರ್ ವಿನೇಗರ್ ಮತ್ತು ¼ ಕಪ್ ನೀರು ಹಾಕಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಕೂದಲನ್ನು ಹಾಗೆ ಬಿಟ್ಟುಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.

ಆಪಲ್ ಸೀಡರ್ ವಿನೇಗರ್ ಅನ್ನು ಚರ್ಮ ಹಾಗೂ ಕೂದಲಿಗೆ ಬಳಸುವ ಇತರ ಹಲವಾರು ವಿಧಾನಗಳು ಇಲ್ಲಿವೆ.

Aloe_Vera_pic

*ಅಲೋವೆರಾದಿಂದ ತೇವಾಂಶ ನೀಡಿ
*ಅಲೋವೆರಾ ಕೂದಲಿಗೆ ಕಾಂತಿಯನ್ನು ನೀಡುವುದು ಮಾತ್ರವಲ್ಲದೆ ಲಗಾಮು ಇಲ್ಲದೆ ವರ್ತಿಸುವಂತಹ ಗುಂಗುರು ಕೂದಲನ್ನು ನಿಮ್ಮ ನಿಯಂತ್ರಣಕ್ಕೆ ಬರುವಂತೆ ಮಾಡುವುದು. ಇದರಲ್ಲಿ ತೇವಾಂಶ ನೀಡುವ ಗುಣವಿದೆ. ಮೊಸರಿನಂತಹ ಇತರ ಸಾಮಗ್ರಿಗಳೊಂದಿಗೆ ಇದನ್ನು ಬಳಸಿದಾಗ ಒಳ್ಳೆಯ ಫಲಿತಾಂಶ ಸಿಗುವುದು.

ಬಳಸುವ ವಿಧಾನ
*ಒಂದು ಚಮಚ ತೆಂಗಿನ ಎಣ್ಣೆ, ನಾಲ್ಕು ಚಮಚದಷ್ಟು ಅಲೋವೆರಾದ ಜೆಲ್ ಮತ್ತು ಮೂರು ಚಮಚದಷ್ಟು ಮೊಸರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಕೂದಲಿಗೆ ಹಚ್ಚಿಕೊಂಡ ಬಳಿಕ ಅರ್ಧಗಂಟೆ ಬಿಟ್ಟು ತಂಪು ನೀರಿನಿಂದ ತೊಳೆಯಿರಿ.
*ಇನ್ನೊಂದು ವಿಧಾನವೆಂದರೆ ದಾಸವಾಳದ ಕೆಲವು ಹೂಗಳನ್ನು ತೆಗೆದು ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಅರ್ಧಕಪ್ ಅಲೋವೆರಾದ ಜೆಲ್ ಮತ್ತು ಒಂದು ಚಮಚ ಆಲಿವ್ ತೈಲ ಹಾಕಿ ಮಿಶ್ರಣ ಮಾಡಿಕೊಳ್ಳಿ.
*ಹತ್ತು ನಿಮಿಷಗಳ ಕಾಲ ಹಾಗೆ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.

Comments are closed.