ಕರ್ನಾಟಕ

ಮೈಸೂರು ದಸರಾವನ್ನು ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

Pinterest LinkedIn Tumblr

ಬೆಂಗಳೂರು: ಈ ಬಾರಿಯ ಮೈಸೂರು ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿ ಶನಿವಾರ ಹೇಳಿದರು.

ದಸರಾ ಸಿದ್ಧತೆ ಕುರಿತು ಈತ್ತಿಚೆಗೆ ಪೂರ್ವಭಾವಿ ನಡೆಸಲಾಗಿತ್ತು. ಸಭೆಯಲ್ಲಿ ಉದ್ಘಾಟಕರ ಆಯ್ಕೆಯ ನಿರ್ಧಾರವನ್ನು ಮುಖ್ಯಮಂತ್ರಿ ವಿವೇಚನೆಗೆ ಬಿಡಲಾಗಿತ್ತು. ಸುದೀರ್ಘವಾಗಿ ಯೋಚಿಸಿ ದೇಶದ ಪ್ರಥಮ ಪ್ರಜೆಯನ್ನು ಉದ್ಘಾಟನೆಗೆ ಕರೆಯಲು ತೀರ್ಮಾನಿಸಿ ಅವರ ಕಚೇರಿಗೆ ಪತ್ರ ಬರೆಯಲಾಗಿತ್ತು. ಸೆ.26ರಂದು ನಡೆಯುವ ದಸರಾ ಉದ್ಘಾಟನೆಗೆ ಬರುವುದಾಗಿ ಒಪ್ಪಿ ರಾಷ್ಟ್ರಪತಿ ಪತ್ರ ಬರೆದಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೈಸೂರು ದರಸಾ ಸೆಪ್ಟೆಂಬರ್ 26 ರಿಂದ ಆರಂಭಗೊಳ್ಳಲಿದ್ದು, ಅಕ್ಟೋಬರ್ 5 ವರೆಗೆ ನಡೆಯಲಿದೆ. ಪ್ರತಿಷ್ಠಿತ ಮೈಸೂರು ದಸರಾಗೆ ಸರ್ಕಾರ ಈಗಾಗಲೇ ಹಲವು ಸುತ್ತಿನ ಪೂರ್ವಭಾವಿ ಸಭೆ ನಡೆಸಿದೆ.

Comments are closed.