ಕರಾವಳಿ

ಹೊಸನಗರದಿಂದ ಶಿರೂರು: 10 ರೂ. ಕೋಳಿ‌ಮರಿಗೆ 52 ರೂ. ಅರ್ಧ ಟಿಕೆಟ್ ಪಡೆದ ಕೆಎಸ್‌ಆರ್‌ಟಿಸಿ ಕಂಡಕ್ಟರ್..!

Pinterest LinkedIn Tumblr

ಶಿವಮೊಗ್ಗ: 10 ರೂಪಾಯಿಗೆ ಖರೀದಿಸಿ ತಂದ ಪುಟ್ಟ ಕೋಳಿ ಮರಿಗೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ 52 ರೂಪಾಯಿಗೆ ಅರ್ಧ ಟಿಕೆಟ್ (ಹಾಫ್ ಟಿಕೆಟ್‌) ನೀಡಿದ್ದಾರೆ.

ಅಲೆಮಾರಿ ಕುಟುಂಬವೊಂದು ಶಿರಸಿಯಲ್ಲಿ 10 ರೂಪಾಯಿ ನೀಡಿ ಕೋಳಿ ಮರಿ ಖರೀದಿಸಿತ್ತು. ಶಿರಸಿಯಿಂದ ಹೊಸನಗರಕ್ಕೆ ಖಾಸಗಿ ಬಸ್ಸಿನಲ್ಲಿ ಬಂದಿಳಿದ ಅಲೆಮಾರಿ ಕುಟುಂಬ, ಹೊಸನಗರದಿಂದ ಬೈಂದೂರಿನ ಶಿರೂರಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿತ್ತು. ಈ ವೇಳೆ ಕೋಳಿ‌ಮರಿ ಕೂಗುವುದನ್ನು ಗಮನಿಸಿದ ಬಸ್ ಕಂಡಕ್ಟರ್ ಕೋಳಿ ಮರಿಗೂ ಟಿಕೆಟ್ ಖರೀದಿಸಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ ಅಲೆಮಾರಿ ಕುಟುಂಬ ಕೋಳಿ ಮರಿಗಾಗಿ 52 ರೂಪಾಯಿ ಅರ್ಧ ಟಿಕೆಟ್ ನೀಡಿ ಶಿರೂರಿನಲ್ಲಿ ಇಳಿದಿದೆ.

ಸದ್ಯ ಈ‌ ವಿಡಿಯೋ ವೈರಲ್ ಆಗಿದೆ.

Comments are closed.