ಕರಾವಳಿ

‘ಕೈಯಲ್ಲಿ ಐಫೋನ್, ರೋಲೆಕ್ಸ್ ವಾಚ್ ಇಲ್ಲ’; ಸಾಮಾನ್ಯರಂತೆ ಕೆಎಸ್ಆರ್‌ಟಿಸಿ ನಿಲ್ದಾಣದಲ್ಲಿ ಕೂತ ಎಂ.ಎಲ್‌.ಸಿ. ಶಾಂತರಾಮ ಸಿದ್ಧಿ ಸರಳತೆಗೆ ಶ್ಲಾಘನೆ

Pinterest LinkedIn Tumblr

ಬೆಂಗಳೂರು: ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಸಾಮಾನ್ಯ ಪ್ರಯಾಣಿಕರಂತೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡು ಸರಳತೆಗೆ ಸಾಕ್ಷಿಯಾಗಿದ್ದಾರೆ.

ಶಾಂತಾರಾಮ್ ಸಿದ್ಧಿ ವಿಧಾನ ಪರಿಷತ್ ಸದಸ್ಯರಾದ ಬಳಿಕವೂ ತಮ್ಮ ಸಂಚಾರಕ್ಕೆ ಸಾರ್ವಜನಿಕ ಸಂಪರ್ಕ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ರಾಷ್ಟ್ರೀಯ ಪಕ್ಷವೊಂದರ ವಿಧಾನ ಪರಿಷತ್ ಸದಸ್ಯರಾದರೂ ಕೂಡ ಕಾರು ಮೊದಲಾದ ಐಷಾರಾಮಿ ಸವಲತ್ತುಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.

ಇತ್ತೀಚೆಗೆ ಶಾಂತಾರಾಮ್ ಸಿದ್ಧಿಯವರು ರಾಣೆಬೆನ್ನೂರಿನ ಕೆಎಸ್ಆರ್‌ಟಿಸಿ ನಿಲ್ದಾಣದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಕುಳಿತು ಬಸ್ ಗಾಗಿ ಕಾಯುತ್ತಿದ್ದರು. ಶಾಂತಾರಾಮ್ ಸಿದ್ದಿ ರಾಣೆಬೆನ್ನೂರಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕುಳಿತಿರುವ ಪೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಇಷ್ಟು ಸರಳ ವ್ಯಕ್ತಿತ್ವ ಹಾಗೂ ಇಷ್ಟು ಸರಳ ಯಾವುದೇ ಶ್ರೀಮಂತ ಹಿನ್ನೆಲೆ ಇಲ್ಲದ ವ್ಯಕ್ತಿಯನ್ನು ವಿಧಾನಪರಿಷತ್ ಸ್ಥಾನಕ್ಕೆ ಆರಿಸುವಂತಹದ್ದು ಕೂಡಾ ಬಿಜೆಪಿ ಪಕ್ಷದಲ್ಲಿ ಮಾತ್ರ ಸಾದ್ಯ ಎಂದು ಬಿಜೆಪಿ ಬೆಂಬಲಿಗರು ಟ್ವೀಟ್ ,ಪೋಸ್ಟ್ ಮಾಡ್ತಿದ್ದಾರೆ.

ಇಂದು ರಾಣೇಬೆನ್ನೂರ ಬಸ್ ಸ್ಟಾಪ್ ನಲ್ಲಿ ಎಮ್ ಎಲ್ ಸಿ ಶಾಂತರಮ್ ಸಿದ್ದಿ ಜೀ…ಸರಕಾರದಲ್ಲಿ ಅತೀ ದೊಡ್ಡ ಹುದ್ದೆ ದೊರಕಿದ ಮೇಲು ಸಹ ಕೈಯಲ್ಲಿ ರೋಲೆಸ್ಸ್ ವಾಚ್ ಇಲ್ಲ, ಕಾಲಿಗೆ ಪುಮಾ ಶೂ ಇಲ್ಲ, ಕೊರಳಲ್ಲಿ ಆಭರಣ ಇಲ್ಲ, ಕಣ್ಣಿಗೆ ರೇಬಾನ್ ಕೂಲಿಂಗ್ ಗ್ಲಾಸ್ ಇಲ್ಲ, ಹಸ್ತದಲ್ಲಿ ಐಫೋನ್ ಇಲ್ಲ…ಅಷ್ಟೇ ಅಲ್ಲದೆ ಓಡಾಡಲು ಸರಕಾರಿ ಕಾರು ಬಳಸಲ್ಲ.. ಸಾಮಾನ್ಯವಾಗಿ ಬಸ್ ನಲ್ಲಿ ಓಡಾಡುತ್ತಾರೆ..ಈ ತರಹ ಸಂಸ್ಕೃತಿ ಬಿಜೆಪಿಯಲ್ಲಿ ಮಾತ್ರ ಸಾಧ್ಯ… ಲೂಟಿ ಹೊಡೆದವರು ಎಲ್ಲೆಡೆ ಕಾಣ ಸಿಗುತ್ತಾರೆ. ಆದರೆ ಇಂತಹ ಸಜ್ಜನರು ಸಿಗುವುದು ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರಲ್ಲಿ ಮಾತ್ರ..ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ…#shantaramsiddi” ಎಂದು ಪೊಸ್ಟ್ ಶೇರ್ ಮಾಡಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರಾದ ಶಾಂತಾರಾಮ್ ಸಿದ್ದಿ ಯಲ್ಲಾಪುರದ ಹಿತ್ಲಳ್ಳಿಯ ಸಣ್ಣ ನಿವಾಸದಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ವಾಸವಾಗಿದ್ದಾರೆ. ಮೂರು ದಶಕಗಳಿಂದ ಸಮಾಜ ಸೇವೆ ಹಾಗೂ ಪರಿಸರ ರಕ್ಷಣೆಯಲ್ಲಿ ದುಡಿಯುತ್ತಿರುವ ಶಾಂತಾರಾಮ್ ಸಿದ್ಧಿ, ಮಲೆನಾಡು ಕರಾವಳಿಯಲ್ಲಿರುವ ಸಿದ್ದಿ, ಗೌಳಿ, ಕುಣಬಿ, ಗೊಂಡ, ಹಾಲಕ್ಕಿ ಮುಂತಾದ ಬುಡಕಟ್ಟು ಸಮುದಾಯಗಳ ಆರ್ಥಿಕ ಹಾಗೂ ಸಾಮಾಜಿಕ ,ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.
ಮೂಲವಾಸಿಗಳ ವಸತಿ ಶಾಲೆ, ಸಮುದಾಯ ಶಿಕ್ಷಣ,ಆರೋಗ್ಯ ಶಿಬಿರ,ಕೌಶಲ್ಯ ತರಬೇತಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು,ಹಳ್ಳಿಗರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಆರಂಭದಿಂದಲೂ ಬಿಜೆಪಿ ಹಾಗೂ ಆರ್.ಎಸ್.ಎಸ್ ನಲ್ಲಿ ಗುರುತಿಸಿಕೊಂಡ ಶಾಂತಾರಾಮ್ ಸಿದ್ಧಿಯವರನ್ನು ಬಿಜೆಪಿ ಗುರುತಿಸಿ ಪರಿಷತ್ ಗೆ ನಾಮನಿರ್ದೇಶನಗೊಳಿಸಿತ್ತು. ವಿಧಾನ ಪರಿಷತ್ ಸದಸ್ಯರಾದ ಬಳಿಕವೂ ಶಾಂತಾರಾಮ್ ಸಿದ್ಧಿ ತಮ್ಮ ಸರಳ ಜೀವನ ಕ್ರಮ ಮುಂದುವರೆಸಿಕೊಂಡು ಬಂದಿದ್ದು ಶ್ಲಾಘನೆಗೆ ಪಾತ್ರವಾಗಿದೆ.

 

Comments are closed.