ಕರಾವಳಿ

ಮಲ್ಪೆಯಲ್ಲಿ ಸಿಕ್ಕ 20 ಕೆ.ಜಿ. ತೂಕದ ಈ ಮೀನಿನ ಬೆಲೆ ಬರೋಬ್ಬರಿ 1.80 ಲಕ್ಷ ರೂ.!

Pinterest LinkedIn Tumblr

ಉಡುಪಿ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ ‘ಬಲರಾಮ್’ ಹೆಸರಿನ ಬೋಟಿಗೆ 20 ಕೆಜಿ ತೂಕದ ಘೋಲ್‌ ಮೀನು (ಗೋಲಿ ಮೀನು) ದೊರಕಿದ್ದು ಮಂಗಳವಾರ ಮಲ್ಪೆ ಬಂದರಿನಲ್ಲಿ ಹರಾಜಿನಲ್ಲಿ ಕೆ.ಜಿ.ಗೆ 9,000 ರೂ.ಗಳಂತೆ 1.80 ಲಕ್ಷ ರೂ.ಗೆ ಮಾರಾಟವಾಗಿದೆ.

ಸ್ಥಳೀಯವಾಗಿ ಗೋಲಿ ಮೀನು ಇದಕ್ಕೆ ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಘೋಲ್‌ ಫಿಶ್‌. ಈ ಮೀನಿನ ಹೊಟ್ಟೆಯನ್ನು ಬಂಗಾರವೆಂದು ಪರಿಗಣಿಸಲಾಗಿದ್ದು ಅದಕ್ಕೆ ಗೋಲ್ಡ್ ಫಿಶ್ ಎನ್ನಲಾಗುತ್ತದೆ.

ಔಷಧೀಯ ಗುಣವನ್ನು ಹೊಂದಿರುವ ಈ ಮೀನಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಕರಾವಳಿಯ ಅಳಿವೆಯ ಆಳಕ್ಕೆ ಇರುವ ಮೀನು ಅರಬ್ಬೀ ಸಮುದ್ರದ ಶ್ರೀಲಂಕಾ, ಆಸ್ಟ್ರೇಲಿಯಾ, ಪೆಸಿಪಿಕ್ ಸಾಗರದಲ್ಲಿ ಕಂಡುಬರುತ್ತದೆ. ಸುನಾರು 1.5 ಮೀಟರ್‌ ಉದ್ದ ಈ ಮೀನು ಬೆಳೆಯುತ್ತದೆ. ಈ ಮೀನಿನ ತೂಕ ಹೆಚ್ಚಾದಂತೆ ದರವೂ ಹೆಚ್ಚಾಗುತ್ತದೆ.

ಈ ಮೀನಿನ ಮಾಂಸ ಅತ್ಯಂತ ರುಚಿದಾಯಕ ಅಷ್ಟೇ ಅಲ್ಲದೆ ಅದರ ವಾಯು ಚೀಲವನ್ನು ಮುಖದ ಕಾಂತಿ ಹಚ್ಚಿಸುವ ಸೌಂದರ್ಯ ವರ್ಧಕ ವಸ್ತುಗಳಲ್ಲಿ ಉಪಯೋಗಿಸಲಾಗುತ್ತದೆ ಎಂದು ಹೇಳಲಾಗಿದೆ.

 

 

Comments are closed.