ಕರಾವಳಿ

ಆಪಲ್ ಕಂಪನಿಯಿಂದ ನೂತನ ಹೆಡ್ ಫೋನ್ ಬಿಡುಗಡೆ : ಇದರ ಬೆಲೆ ಎಷ್ಟು ಗೊತ್ತೆ?..

Pinterest LinkedIn Tumblr

ನವದೆಹಲಿ: ಗುಣಮಟ್ಟದ ಪ್ರಾಡಕ್ಟ್​​ಗಳನ್ನ ಮಾರುಕಟ್ಟೆಗೆ ಪರಚಯಿಸುತ್ತ ಬಂದಿರುವ ಟೆಕ್​ ಲೋಕದ ದೈತ್ಯ ಕಂಪನಿ ಆಪಲ್ ಕಂಪನಿ ಇದೀಗ ತನ್ನ ಹೊಸ ಏರ್​ಪೋಡ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. 

ಆಪಲ್ ನಿಂದ ಡಿಸೆಂಬರ್ 8ನೇ ತಾರೀಕು ಏರ್ ಪಾಡ್ಸ್ ಮ್ಯಾಕ್ಸ್ ವೈರ್ ಲೆಸ್ ಹೆಡ್ ಫೋನ್ ಗಳನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಹೆಡ್ ಫೋನ್ ಸೀರೀಸ್ ಅನ್ನು Airpods Max ಎಂದು ಕರೆಯಲಾಗಿದೆ.
ಸುಧಾರಿತ ಸಾಫ್ಟ್ ವೇರ್ ತಂತ್ರಾಂಶವನ್ನು ಹೊಂದಿರುವ ಈ ಹೆಡ್ ಫೋನ್ ನಲ್ಲಿ ಆಡಿಯೋ ಗುಣಮಟ್ಟ ಅತ್ಯುತ್ತಮವಾಗಿದೆ.

ಆಯಡಾಪ್ಟಿವ್ ಈಕ್ಯೂ ಹೊಂದಿರುವ ಏರ್ ಪಾಡ್ಸ್ ಮ್ಯಾಕ್ಸ್ ನಲ್ಲಿ ಆಡಿಯೋ ಅತ್ಯಧ್ಬುತವಾಗಿ ಕೇಳಿಬರಲಿದೆ. ಈ ಏರ್​ ಪೋಡ್​ಗಳು ನಾಯ್ಸ್​ ಕ್ಯಾನ್ಸಲೇಶನ್, ಟ್ರಾನ್ಸರೆಸಿ ಮೋಡ್​ (Active Noise Cancellation, Transparency mode, and spatial audio) ಸೇರಿದಂತೆ ಹಲವಾರು ಆಯ್ಕೆಗಳನ್ನ ಹೊಂದಿವೆ. ಈ ಹೆಡ್ ಫೋನ್ ಸ್ಪೇಸ್ ಗ್ರೇ, ಸಿಲ್ವರ್, ಸ್ಕೈ ಬ್ಲೂ, ಗ್ರೀನ್ ಮತ್ತು ಪಿಂಕ್ ಕಲರಿನಲ್ಲಿ ಲಭ್ಯವಿದೆ.

ಏರ್ ಪಾಡ್ ಮ್ಯಾಕ್ಸ್, ಬಳಕೆದಾರರಿಗೆ ಆರಾಮದಾಯಕ ಅನುಭವ ನೀಡಲಿದೆ. ಫ್ಲೆಕ್ಸಿಬಿಲಿಟಿ ಇರುವುದರಿಂದ ಇದರ ಬಳಕೆ ಸುಲಭ. ಹೆಡ್ ಪೋನ್ ನಲ್ಲಿ ವಾಲ್ಯೂಮ್ ಕಂಟ್ರೋಲ್, ಪ್ಲೇ ಮತ್ತು Pause, ಸ್ಕಿಪ್ ಬಟನ್, ಸಿರಿ ಆಕ್ಟಿವೇಟ್ ಬಟನ್, ಫೋನ್ ಕರೆಗಳನ್ನು ಆನ್ ಮತ್ತು ಎಂಡ್ ಮಾಡುವ ಫೀಚರ್ ಗಳನ್ನು ನೀಡಲಾಗಿದೆ.ಮಾತ್ರವಲ್ಲದೆ ಹೆಡ್ ಪೋನ್ ನಲ್ಲಿ ಆಟೋಮ್ಯಾಟಿಕ್ ಸೆನ್ಸಾರ್ ಆಯ್ಕೆ ನೀಡಲಾಗಿದ್ದು, ಒಮ್ಮೆ ಧರಿಸಿದ ಕೂಡಲೇ ಸ್ಮಾರ್ಟ್ ಪೋನ್, ವಾಚ್ ಅಥವಾ ‘ಸಿರಿ’ಗೆ ಕನೆಕ್ಟ್ ಆಗುವುದು.

ಬೆಲೆ ಕೇಳಿದರೆ…

ಆಪಲ್​ ತನ್ನ ಹೊಸ ಶ್ರೇಣಿಯ ಏರ್​ಪೋಡ್​ಗಳಿಗೆ ನಿಗದಿ ಮಾಡಿದ ಬೆಲೆ ಕಂಡು ನೆಟ್ಟಿಗರು ಹೌಹಾರಿದ್ದಾರೆ. ಏರ್​ಪೋಡ್​ನ ಗುಣಮಟ್ಟದ ಬಗ್ಗೆ ಮಾತನಾಡುವುದಕ್ಕಿಂತಲೂ ಅದರ ಬೆಲೆ ಕುರಿತು ಹೆಚ್ಚು ಚರ್ಚೆ ಆರಂಭಗೊಂಡಿದೆ.

ಭಾರತದಲ್ಲಿ ಈ ಏರ್​ಪೋಡ್​ಗಳ ಬೆಲೆ ಬರೋಬ್ಬರಿ 59,900 ರೂಪಾಯಿಗಳು ಅಂದರೆ ನೀವು ನಂಬಲೇಬೇಕು. ಇದರ ಬೆಲೆ $549 (ಭಾರತ-59,900) ಎಂದು ವರದಿಯಾಗಿದ್ದು, ಡಿಸೆಂಬರ್ 15ರಿಂದ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಯುಎಸ್ ನಲ್ಲಿ ಏರ್ ಪಾಡ್ಸ್ ಮ್ಯಾಕ್ಸ್ 549 ಅಮೆರಿಕನ್ ಡಾಲರ್ ಗೆ ಡಿಸೆಂಬರ್ 8ರಿಂದ ಆರ್ಡರ್ ಮಾಡಬಹುದಾಗಿದ್ದು, 15ನೇ ತಾರೀಕಿನಿಂದ ತಲುಪಿಸಲು ಆರಂಭಿಸಲಾಗುತ್ತದೆ.

ಕೇವಲ ಏರ್​ಪೋಡ್​ ಮಾತ್ರವಲ್ಲದೇ, ಇದನ್ನ ಎಲ್ಲೆಂದರಲ್ಲಿ ಆರಾಮಾಗಿ ತೆಗೆದುಕೊಂಡು ಹೋಗಲು ಆಪಲ್​ ಸಂಸ್ಥೆ ಕವರ್​ನ್ನೂ ನಿರ್ಮಾಣ ಮಾಡಿದೆ. ಆದರೆ, ಈ ಏರ್​ಪೋಡ್​ ಕವರ್​ಗಳು ಥೇಟ್​ ಮಹಿಳೆಯರು ಧರಿಸುವ ಬ್ರಾ ಆಕೃತಿಯನ್ನ ಹೊಂದಿದ್ದು ಸಾಕಷ್ಟು ಟೀಕೆಗೆ ಒಳಗಾಗುತ್ತಿದೆ.

ಏರ್ ಪಾಡ್ಸ್ ಮ್ಯಾಕ್ಸ್ ನಿಂದ ಆಪಲ್ ನ ಡಿವೈಸ್ ಗಳು ಐಒಎಸ್ 14.3 ಅಥವಾ ಅದಕ್ಕಿಂತ ಮೇಲ್ಪಟ್ಟಿದ್ದು, ಐಪ್ಯಾಡ್ ಒಎಸ್ 14.3 ಅಥವಾ ನಂತರದ್ದು, ಮ್ಯಾಕ್ ಒಎಸ್ Big Sur 11.1 ಅಥವಾ ಮೇಲ್ಪಟ್ಟು, ವಾಚ್ ಒಎಸ್ 7.2 ಅಥವಾ ಮೇಲ್ಪಟ್ಟು, ಅಥವಾ ಟಿವಿಒಎಸ್ 14.3 ಅಥವಾ ಮೇಲ್ಪಟ್ಟದ್ದಕ್ಕೆ ಸಪೋರ್ಟ್ ಮಾಡುತ್ತದೆ ಎಂಬ ಮಾಹಿತಿ ಲಭಿಸಿದೆ.

Comments are closed.