ಅಂತರಾಷ್ಟ್ರೀಯ

ಈ ಮಹಿಳೆಯ ಕಾರ್ಖಾನೆಯಲ್ಲಿತ್ತು ಲಕ್ಷಾಂತರ ಕಾಂಡೋಮ್​ಗಳು : ಸಂಗ್ರಹಿಸಿಟ್ಟ ರಹಸ್ಯ ತಿಳಿದರೆ ಬೆಚ್ಚಿ ಬೀಳುತ್ತಿರಿ!

Pinterest LinkedIn Tumblr

ಮಹಿಳೆಯೊಬ್ಬರ ಮಾಲಕತ್ವದ ಈ ಕಾರ್ಖಾನೆಯಲ್ಲಿ ಲಕ್ಷಾಂತರ ಕಾಂಡೋಮ್​ಗಳು ಪತ್ತೆಯಾಗಿ ದ್ದು, ಈ ಎಲ್ಲಾ ಕಾಂಡೋಮ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಚ್ಚರಿಯೆಂದರೆ ವಶಪಡಿಸಿಕೊಂಡಿರುವ ಈ ಎಲ್ಲಾ ಕಾಂಡೋಮ್​ಗಳು ಬಳಸಿ ಬೀಸಾಡಿದ್ದ ಕಾಂಡೋಮ್​ಗಳಾಗಿವೆ. ಬಳಸಿ ಬೀಸಾಡಿದ್ದ ಕಾಂಡೋಮ್​ಗಳನ್ನು ಸಂಗ್ರಹಿಸಿಟ್ಟಿದ್ದ ಕಾರ್ಖಾನೆ ಮೇಲೆ ವಿಯೆಟ್ನಾಂ ಪೊಲೀಸರು ದಾಳಿ ಮಾಡಿ 324,000ಕ್ಕೂ ಹೆಚ್ಚು ಕಾಂಡೋಮ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಉಪಯೋಗಿಸಿದ್ದ ಕಾಂಡೋಮ್​ಗಳನ್ನು ಸಂಗ್ರಹಿಸಿ ರಾಸಯನಿಕಯುಕ್ತ ನೀರಿನಲ್ಲಿ ಶುಚಿಗೊಳಿಸಿ, ಪುರುಷರ ಮರ್ಮಾಂಗ ಮಾದರಿಯ ಕೋಲಿನಲ್ಲಿ ಮರುರೂಪಕೊಟ್ಟು ಮರು ಮಾರಾಟ ಮಾಡಲು ಸಂಗ್ರಹಿಸಿಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಈ ಅಕ್ರಮ ಕೆಲಸವು ದಕ್ಷಿಣ ವಿಯೆಟ್ನಾಂನ ಬಿನ್ಹ್​ ಡೌಂಗ್​ ಪ್ರಾಂತ್ಯದ ಗೋದಾಮು ಒಂದರಲ್ಲಿ ನಡೆಯುತ್ತಿತ್ತು. ಈ ಕೆಲಸಕ್ಕಾಗಿ ದಿನಗೂಲಿ ನೌಕರರನ್ನು ಬಳಸಿಕೊಳ್ಳಲಾಗಿತ್ತು.ಮರು ಪ್ಯಾಕೇಜ್​ ಮಾಡಿ ಸಾರ್ವಜನಿಕ ಪ್ರದೇಶಗಳಲ್ಲಿ ಬಳಕೆಗೆ ಯೋಗ್ಯವಲ್ಲದ ಮತ್ತು ಸುರಕ್ಷಿತವಲ್ಲದ ಕಾಂಡೋಮ್​ಗಳನ್ನು ಮಾರಾಟ ಮಾಡಲಾಗುತ್ತಿತ್ತು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಳೆದ ಶನಿವಾರ ದಾಳಿ ನಡೆಸಿದ ವಿಯೆಟ್ನಾಂ ಪೊಲೀಸರು ಕಾಂಡೋಮ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಖಾನೆಯ ಮಾಲಕಿ ಥಿ ಥಾನ್ಹ್​ ಗೋಕ್​ (33)ಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ವಶಪಡಿಸಿಕೊಂಡಿದ್ದ ಕಾಂಡೋಮ್​ಗಳನ್ನು ಅಪಾಯಕಾರಿ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಲಾಗಿರುವುದರಿಂದ ತಕ್ಷಣ ವಿಲೇವಾರಿ ಮಾಡಲಾಗಿದೆ.

ಈ ಮಹಿಳೆ ಅಪರಿಚಿತ ವ್ಯಕ್ತಿಯೊಬ್ಬರಿಂದ ತಿಂಗಳ ಹಿಂದೆ ಗೋಕ್​ ಕಾಂಡೋಮ್​ಗಳನ್ನು ಸ್ವೀಕರಿಸಿ, ತಮ್ಮ ಕಾರ್ಖಾನೆಯಲ್ಲಿಟ್ಟಿದ್ದಳು ಎಂದು ತಿಳಿದುಬಂದಿದ್ದು, ಈಗಾಗಲೇ ಒಂದಿಷ್ಟು ಪ್ರಮಾಣ ಕಾಂಡೋಮ್​ಗಳು ಮಾರಾಟವಾಗಿವೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

Comments are closed.