ಕರಾವಳಿ

ಯುವತಿಯರೇ ಮೊಬೈಲ್‌‌ಗೆ ಕರೆನ್ಸಿ ಹಾಕುವ ಮೊದಲು ಯೋಚಿಸಿ : ಎಚ್ಚರ ತಪ್ಪಿದರೆ ಅಪಾಯ ಖಂಡಿತ

Pinterest LinkedIn Tumblr

ಮಂಗಳೂರು /ಮಡಿಕೇರಿ, ಸೆಪ್ಟೆಂಬರ್ 17: ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಕರೆನ್ಸಿ ಹಾಕಿಸಲು ಬರುವ ಮಹಿಳೆಯರಿಗೆ ಕಿರುಕುಳಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಯುವತಿಯರು ಅಗತ್ಯವಾಗಿ ಕೆಲವು ಮುನ್ನೆಚ್ಚರಿಕೆ ವಹಿಸಬೇಕಾದ ಅನಿವಾರ್ಯ ಸ್ಥಿತಿ ಒದಗಿ ಬಂದಿದೆ.

ದ.ಕ.ಜಿಲ್ಲೆ ಕೆಲವು ಭಾಗಗಳಲ್ಲಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಲವೊಂದು ಮೊಬೈಲ್ ಅಂಗಡಿಯ ಮಾಲಕರು ಅಥವಾ ಕೆಲಸಗಾಗರು ಮೊಬೈಲ್‌ ಕರೆನ್ಸಿ ಹಾಕಿಸಲು ಬರುವ ಯುವತಿಯರ ಹಾಗೂ ವಿವಾಹಿತ ಮಹಿಳೆಯ ನಂಬ್ರಗಳನ್ನು ಸೇವ್ ಮಾಡಿಟ್ಟುಕೊಂಡು ಬಳಿಕ ಅಶ್ಲೀಲ ಚಿತ್ರ, ವೀಡಿಯೋ, ಅಶ್ಲೀಲ ಮೆಸೇಜ್ ಗಳನ್ನು ಕಳಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ.

ಇಂತದೇ ಒಂದು ಪ್ರಕರಣ ಮಡಿಕೇರಿಯಲ್ಲಿ ನಡೆದಿದ್ದು, ಮೊಬೈಲ್‌ ಕರೆನ್ಸಿ ಹಾಕಿಸಲು ಬರುವ ಯುವತಿಯರ ಮತ್ತು ವಿವಾಹಿತ ಮಹಿಳೆಯರ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಗಳನ್ನು ಕಳಿಸುತ್ತಿದ್ದವನಿಗೆ ಸಾರ್ವಜನಿಕರು ಧರ್ಮದೇಟು ಕಾಕಿದ ಘಟನೆ ನಡೆದಿದೆ.

ಸಾರ್ವಜನಿಕರಿಂದ ಧರ್ಮದೇಟು ತಿಂದ ವ್ಯಕ್ತಿಯನ್ನು ಮಡಿಕೇರಿಯ ಖಾಸಗಿ ಬಸ್‌ ನಿಲ್ದಾಣದ ಬಳಿ ಮೊಬೈಲ್‌ ಅಂಗಡಿ ಹೊಂದಿರುವ ಮೊಹಮದ್ ಮುದಾಸಿರ್ ಎಂದು ಹೆಸರಿಸಲಾಗಿದೆ.

ಮೊಹಮದ್ ಮುದಾಸಿರ್ ಮಹಿಳೆಯರಿಗೆ ಮೊಬೈಲ್ ನಲ್ಲಿ ಮೆಸೇಜ್ ಕಳುಹಿಸಿ ಕಿರುಕುಳ ನೀಡುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ. ಹದಿನೈದು ದಿನಗಳ ಹಿಂದೆ ವಿವಾಹಿತ ಮಹಿಳೆಯೊಬ್ಬರ ಮೊಬೈಲ್‌ ನಂಬರ್‌ ತಿಳಿದುಕೊಂಡಿದ್ದ ಈತ ರಾತ್ರಿ ಹೊತ್ತಿನಲ್ಲಿ ಅಶ್ಲೀಲ ಮೆಸೇಜ್‌ ಕಳಿಸಿ ಮಾನಸಿಕ ಹಿಂಸೆ ನೀಡಿದ್ದ.

ಈ ಬಗ್ಗೆ ಮಹಿಳೆಯು ಮಡಿಕೇರಿ ನಗರ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು, ಕಾರ್ಯಕರ್ತರ ಸೂಚನೆಯಂತೆ ಮಹಿಳೆಯ ಮೊಬೈಲ್‌ ನಿಂದ ಬುಧವಾರ ಬೆಳಿಗ್ಗೆ ಹಳೆ ಆರ್‌ ಟಿಒ ಕಚೇರಿಯ ಬಳಿ ಬರುವಂತೆ ಮೊಹಮದ್ ಮುದಾಸಿರ್‌ಗೆ ಮೆಸೇಜ್‌ ಕಳಿಸಲಾಯಿತು.

ಮೆಸೇಜ್‌ ಓದಿದ ಮೊಹಮದ್ ಮುದಾಸಿರ್‌ ಸಂಭ್ರಮದಿಂದ ಯುವತಿ ಸೂಚಿಸಿದ ಸ್ಥಳಕ್ಕೆ ಬಂದಾಗ ಈತನಿಗೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಲಾಗಿದ್ದು, ಮುದಾಸಿರ್‌ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಈತ ಫೇಸ್‌ ಬುಕ್‌ ಮೂಲಕವೂ ಕೆಲವು ಮಹಿಳೆಯರಿಗೆಅನುಚಿತ ಮೆಸೇಜ್‌ ಗಳನ್ನು ಕಳಿಸುತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.

ಮೊಬೈಲ್‌‌ಗೆ ಕರೆನ್ಸಿ ಹಾಕುವ ಮೊದಲು ಮುನ್ನೆಚ್ಚರಿಕೆ ವಹಿಸಿ :

ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿರುವುದರಿಂದ ಯುವತಿಯರು ಹಾಗೂ ವಿವಾಹಿತ ಮಹಿಳೆಯರು ಮೊಬೈಲ್‌‌ಗೆ ಕರೆನ್ಸಿ ಹಾಕುವ ಮೊದಲು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು.

ಈ ಬಗ್ಗೆ ಇಲ್ಲಿದೆ ಕೆಲವು ಟಿಪ್ಸ್ : ಯುವತಿಯರು ಸಾಧ್ಯವಾದಷ್ಟು ತಮ್ಮ ಮನೆಯಲ್ಲಿರುವ ಅಣ್ಣ, ತಮ್ಮ, ತಂದೆ ಅಥಾವ ಮಾವ ಈ ರೀತಿ ಪುರುಷರ ಮೂಲಕ ತಮ್ಮ ಮೊಬೈಲ್‌‌ಗೆ ಕರೆನ್ಸಿ ಹಾಕಿದರೆ ಉತ್ತಮ.

ಈಗ ಎಲ್ಲಾ ಬಿಲ್ ಗಳನ್ನು ಇಂಟರ್ ನೆಟ್ ಮೂಲಕವೇ ಕಟ್ಟಲು ಸಾಧ್ಯ. ಅದೇ ರೀತಿ ಮೊಬೈಲ್‌ ರಿಚಾರ್ಜ್ ಕೂಡ ನಾವು ಇರುವಲ್ಲಿಯೇ ಯಾಪ್ ಗಳ ಮೂಲಕ ಮಾಡ ಬಹುದು.

ಇದೆಲ್ಲಾ ಸಾಧ್ಯವಿಲ್ಲದಿದ್ದರೆ ನಮಗೆ ತುಂಬಾ ಪರಿಚಯವಿರುವ ವ್ಯಕ್ತಿಗಳ ಅಂಗಡಿಗಳಲ್ಲಿ ಮಾತ್ರ ರಿಚಾರ್ಜ್ ಮಾಡುವುದು. ಈ ರೀತಿ ಮಾಡುವುದರಿಂದ ಇಂತಹ ಅಪಾಯಗಳಿಂದ ತಪ್ಪಿಸಿಕೊಳ್ಳ ಬಹುದು.

Comments are closed.