ಕರಾವಳಿ

“ರಾಬರ್ಟ್” ಸಿನಿಮಾದ ನಾಯಕಿಯ ಫಸ್ಟ್ ಲುಕ್​ ಬಿಡುಗಡೆಗೆ ದಿನ ನಿಗದಿ : ಯಾವಾಗ? ಇಲ್ಲಿದೆ ವಿವರ

Pinterest LinkedIn Tumblr

ಬೆಂಗಳೂರು, ಸೆಪ್ಟಂಬರ್.04:ಸೋಷಿಯಲ್​ ಮೀಡಿಯಾಗಳಲ್ಲಿ ಹತ್ತಾರು ಫೋಟೋಗಳು ವೈರಲ್​ ಆಗುವ ಮೂಲಕ ಗಮನ ಸೆಳೆದಿದ್ದ ರಾಬರ್ಟ್ ಸಿನಿಮಾದ ನಾಯಕಿಯ ಫಸ್ಟ್ ಲುಕ್​ ಬಿಡುಗಡೆಗೆ ದಿನ ನಿಗದಿಯಾಗಿದೆ.

ತರುಣ್​ ಸುಧೀರ್​ ನಿರ್ದೇಶನದ ಉಮಾಪತಿ ಶ್ರೀನಿವಾಸ್ ನಿರ್ಮಾಣದ ಚಾಲೆಂಜಿಂಗ್​ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿರುವ ರಾಬರ್ಟ್ ಸಿನಿಮಾದ ನಾಯಕಿಯ ಒಂದೇ ಒಂದು ಲುಕ್​ ಹೇಗಿರಲಿದೆ ಎಂಬುದನ್ನು ಚಿತ್ರತಂಡ ಇದುವರೆಗೆ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಇದೀಗ ಆ ಕಾಲ ಬಂದಿದೆ.

ಸಿನಿಮಾ ಶುರುವಾಗುವುದಕ್ಕೂ ಮುನ್ನ ಮತ್ತು ಶೂಟಿಂಗ್​ ಬಳಿಕ ಚಿತ್ರಕ್ಕೆ ಸಂಬಂಧಿಸಿದ ಅವರ ಹತ್ತಾರು ಫೋಟೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದವು. ಆದರೆ, ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಬಗ್ಗೆ ಯಾವೂದೇ ಸುಳಿವನ್ನು ಚಿತ್ರತಂಡ ನೀಡಿರಲಿಲ್ಲ.

ಇದೀಗ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್​ ಅವರ ಫಸ್ಟ್ ಲುಕ್​ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದ್ದು, ಯಾವಾಗ ರಿಲೀಸ್​ ಎಂಬುದನ್ನೂ ಹೇಳಿಕೊಂಡಿದೆ.

ಸೆಪ್ಟಂಬರ್ 5, ಶನಿವಾರದಂದು ಅಂದರೆ ನಾಳೆ ಆಶಾ ಭಟ್​ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10ಗಂಟೆಗೆ ಚಿತ್ರದಲ್ಲಿನ ಅವರ ಲುಕ್​ ಹೇಗಿರಲಿದೆ ಎಂಬುದನ್ನು ಚಿತ್ರತಂಡ ಬಿಡುಗಡೆಗೊಳಿಸಲಿದೆ.

ಚಿತ್ರೀಕರಣ ಮುಗಿಸಿರುವ ರಾಬರ್ಟ್ ಸಿನಿಮಾ ಏಪ್ರಿಲ್ 9ರಂದು ಬಿಡುಗಡೆ ಆಗಿರಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸ್ಥಗಿತಗೊಂಡಿದ್ದರಿಂದ ರಾಬರ್ಟ್ ಬಿಡುಗಡೆಗೆ ಕಾಲ ಕೂಡಿ ಬಂದಿರಲಿಲ್ಲ. ಇದೀಗ ಡಿಸೆಂಬರ್​ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬ ಸುದ್ಧಿ ಹಬ್ಬಿದ್ದರೂ, ಈ ಬಗ್ಗೆ ಚಿತ್ರತಂಡ ಮಾತ್ರ ಯಾವೂದೇ ಮಾಹಿತಿಯನ್ನು ಇದುವರೆಗೆ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.

Comments are closed.