ಉಡುಪಿ: ಕೊರೋನ ಲಾಕ್‌ಡೌನ್‌ನಿಂದಾಗಿ ವ್ಯವಹಾರ ಸ್ಥಗಿತಗೊಂಡು ಪಾತಾಳಕ್ಕೆ ಕುಸಿದಿದ್ದ ಶಂಕರಪುರ ಮಲ್ಲಿಗೆ ಧಾರಣೆ ಶನಿವಾರ ಸಾವಿರ ರೂ. ಗಡಿ ದಾಟಿದ್ದು ಸುದೀರ್ಘ ಲಾಕ್‌ಡೌನ್ ಉಂಟು ಮಾಡಿದ್ದ ಆರ್ಥಿಕ ತಲ್ಲಣದಿಂದ ಹೊರಬಂದ ಹಾಗಿದೆ.

ಲಾಕ್‌ಡೌನ್ ಕಾಲದಲ್ಲಿ ಶಂಕರಪುರ ಮಲ್ಲಿಗೆ ಧಾರಣೆ ಪಾತಾಳಕ್ಕೆ ಕುಸಿದಿತ್ತು. ಈಗ ಅದು ಚೇತರಿಕೆ ಕಂಡು 5 ತಿಂಗಳ ಬಳಿಕ ಅಟ್ಟೆಗೆ ಸಾವಿರ ರೂ. ಗಡಿ ದಾಟಿದ್ದು, ಶನಿವಾರ ದರ 1,050 ರೂ. ತಲುಪಿದೆ. ನಾಲ್ಕೈದು ದಿನಗಳಿಂದ ಮಲ್ಲಿಗೆ ದರದಲ್ಲಿ ಏರಿಕೆ ಕಾಣುತ್ತಿರುವುದು ಬೆಳೆಗಾರರಲ್ಲಿ ಸಂತಸ ಉಂಟುಮಾಡಿದೆ.
ಪ್ರಸ್ತುತ ಮಳೆಯಿಂದಾಗಿ ಮಲ್ಲಿಗೆ ಹೂವಿನ ಇಳುವರಿ ಕಡಿಮೆಯಾಗಿದೆ. ಅಲ್ಲದೆ ಇದು ಶ್ರಾವಣ ಮಾಸವಾಗಿದ್ದು, ಹಬ್ಬ, ಶುಭ ಸಮಾರಂಭಗಳು ಪ್ರಾರಂಭವಾಗಿರುವುದರಿಂದ ಮಲ್ಲಿಗೆ ಹೂವಿಗೆ ಬೇಡಿಕೆ ಏರತೊಡಗಿದೆ. ಜು. 31ರಂದು 850 ರೂ. ತಲುಪಿದ್ದ ಮಲ್ಲಿಗೆ ದರ ಬಳಿಕ ಇಳಿಕೆ ಕಂಡಿತ್ತು. ಆ. 15ರ ಬಳಿಕ 400-560 ರೂ. ಆಸುಪಾಸಿಲ್ಲಿದ್ದ ದರ ಆ. 26ರಂದು 560 ರೂ., ಆ. 27ರಂದು 730 ರೂ., ಆ. 28 ರಂದು 950 ರೂ. ಇದ್ದು, ಶನಿವಾರ 1,050 ರೂ. ತಲುಪಿದೆ. ಸದ್ಯ ಮುಂಬಯಿಗೆ ಮಲ್ಲಿಗೆ ರವಾನೆಯಾಗುತ್ತಿಲ್ಲ; ಅದು ಆರಂಭವಾದರೆ ದರ ಇನ್ನಷ್ಟು ಏರುವ ನಿರೀಕ್ಷೆಯಿದೆ.
Comments are closed.