ವಿಚಾರಗಳ ಸಂವಹನೆಗೆ ಸಾವಿರಾರು ಭಾಷೆಗಳಿರಬಹುದು, ಆದರೆ ಮಾನವನ ಭಾವನೆಗಳನ್ನು ಅರ್ಥೈಸಿಕೊಳ್ಳಲಿಕ್ಕೆ ಯಾವುದೇ ಭಾಷೆಯ ಅವಶ್ಯಕತೆ ಇರುವುದಿಲ್ಲ…ಏಕೆಂದರೆ ಪ್ರಪಂಚದಲ್ಲಿ ವಿಭಿನ್ನ ಜನರ ವಿಭಿನ್ನ ಭಾಷೆಗಳು ಇರಬಹುದು ಆದರೆ ಈ ಎಲ್ಲಾ ಮಾನವರಲ್ಲಿ ಉಂಟಾಗುವ ಭಾವನೆಗಳು ಮಾತ್ರ ಒಂದೇ ಆಗಿರುತ್ತದೆ..!
ಅಂತೆಯೇ ಮದುವೆಗೂ ಸಹ ಪ್ರಪಂಚದ ವಿವಿಧ ದೇಶಗಳ ವಿವಿಧ ಧರ್ಮಗಳ ಆಚಾರ ವಿಚಾರಗಳಲ್ಲಿ ಭಿನ್ನವಿರಬಹುದಾದರೂ ಅದರಲ್ಲಿನ ಮೂಲ ಆಶಯಗಳು ಮಾತ್ರ ಒಂದೇ ಆಗಿದೆ..!!
ನಾವೆಲ್ಲರೂ ತಿಳಿದಿರುವಂತೆ ಮಾನವನು ಹೋಮೋಸೆಫಿಯನ್ಸ್ ಎಂಬ ಪ್ರಾಣಿಯ ಪ್ರಭೇದವಾದರೂ ಪ್ರಾಣಿಗಳಿಗಿಂತಲೂ ತುಂಬಾ ಸೂಕ್ಷ್ಮ ಭಾವನೆಗಳ ಆಗರ, ಜ್ಞಾನದ ತಿಳುವಳಿಕೆಯ ಸಾಗರ..!
ಇತರ ಪ್ರಾಣಿ ಪ್ರಭೇದಗಳಲ್ಲಿರದ ಯೋಚಿಸುವ, ಚಿಂತಿಸುವ, ಉನ್ನತಿಯ ಶ್ರೇಯೋಭಿವ್ರೃದ್ಧಿಗಾಗಿ ಶ್ರಮಿಸುವ ಇತ್ಯಾದಿ ಗುಣಗಳಿವೆ.. ಇವೆಲ್ಲದರಿಂದಾಗಿ ಮನುಷ್ಯನು ಇತರ ಪ್ರಾಣಿಗಳಿಗಿಂತಲೂ ಮಿಗಿಲಾಗಿದ್ದಾನೆ..
ಇದಲ್ಲದೆ ಮಾನವನನ್ನು ಇತರ ಪ್ರಾಣಿಗಳಿಗಿಂತಲೂ ಅತಿ ಭಿನ್ನವಾಗಿಸಿದ್ದು ಮದುವೆಯೆಂಬ ಅವಶ್ಯಕತೆ..!ಮದುವೆ ಎಂಬುದು ಸಹ ಸೈಕಾಲಜಿ ಗೆ ಸಂಬಂಧ ಪಟ್ಟ ವಿಷಯಗಳಲ್ಲೊಂದು..!
ಪ್ರತಿಯೊಂದು ಸಂಶೋಧನೆಗು ಅವಶ್ಯಕತೆಯೇ ಮೂಲ ಕಾರಣ..!ಅಂತೆಯೇ ಮಾನವನ ಮನಸ್ಸಿನಲ್ಲಿ ಪ್ರಾಣಿಗಳಿಗಿರದ ಶೀಲ, ಮರ್ಯಾದೆ ಅವಮಾನ ಖಿನ್ನತೆ ಮುಂತಾದ ವಿಚಾರಶೀಲತೆ ಗುಣಗಳೇ ಮಾನವನ ಮದುವೆಯ ಮೂಲ ಶೋಧಕ್ಕೆ ಕಾರಣವಾಗಿದೆ..!!
ಅಂದರೆ ಪ್ರಪಂಚದ ಯಾವ ಪ್ರಾಣಿಯ ಸಂತತಿಯ ಮುಂದುವರಿಕೆಗೂ ಮದುವೆ ಎಂಬುದು ಅವಶ್ಯಕತೆಯಿಲ್ಲ..ಆದರೆ,ಮದುವೆ ಎಂಬುದಿಲ್ಲದೆ ಮಾನವನು ತನ್ನ ಸಂತತಿಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ..!ಇದರಿಂದಾಗಿಯೇ ಮಾನವನ ಸಂತತಿಗೆ ಮದುವೆ ಎಂಬುದು ಅತ್ಯಾವಶ್ಯಕ..!!
ಏಕೆಂದರೆ ಮಾನವನು ಪ್ರಾಣಿಯೇ ಆದರೆ ಇತರ ಪ್ರಾಣಿಗಳಂತೆ ಬದುಕಲಾರ!
ಸಂಗ್ರಹ ಮಾಹಿತಿ

Comments are closed.