ಕರಾವಳಿ

ಕುಂದಾಪುರದ ಮಲ್ಯಾಡಿಯಲ್ಲಿ ಭರ್ಜರಿ ಮತ್ಸ್ಯ ಬೇಟೆ-200 ಕೆ.ಜಿ.ಗೂ ಅಧಿಕ ಕಾಟ್ಲಾ ಮೀನು ಶಿಕಾರಿ!

Pinterest LinkedIn Tumblr

ಕುಂದಾಪುರ: ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು ಉತ್ತಮ ಮಳೆಯಾಗುತ್ತಿದೆ. ಈಗಾಗಲೇ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧವಿರುವ ಕಾರಣ ಗ್ರಾಮೀಣ ಭಾಗದಲ್ಲಿ ಒಗೆ (ಉಬೇರ್) ಮೀನು ಹಿಡಿಯುವುದು, ಗಾಳ ಹಾಗೂ ಬಲೆ ಮೂಲಕ ಮೀನು ಹಿಡಿಯುವ ಹವ್ಯಾಸ ಮುಂದುವರೆದಿದೆ.

ಅಂತೆಯೇ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಮಲ್ಯಾಡಿ ಎಂಬಲ್ಲಿ ಕಳೆದ ಕೆಲ ದಿನಗಳಿಂದ ಯುವಕರ ತಂಡವೊಂದು ಮೀನು ಹಿಡಿಯುವ ಕಾಯಕದಲ್ಲಿ ತೊಡಗಿದ್ದು ಬುಧವಾರ ಭರ್ಜರಿ ಮೀನು ಶಿಕಾರಿ ಮಾಡಿದ್ದಾರೆ. ಬುಧವಾರ ಮಧ್ಯಾಹ್ನದ ಬಳಿಕ ಉತ್ತಮ ಮಳೆಯಾಗಿದ್ದು ಈ ವೇಳೆ ಗದ್ದೆ, ತೋಡು ಹಾಗೂ ಹೊಳೆಸಾಲು ಭಾಗದಲ್ಲಿ ಮೀನುಗಳು ಇರುವುದು ಗಮನಕ್ಕೆ ಬರುತ್ತಲೇ ಸ್ಥಳೀಯ ಯುವಕರ ತಂಡ ಮೀನು ಬೇಟೆಗೆ ಮುಂದಾಗಿದ್ದು ಬಲೆಗಳಲ್ಲಿ ಮೀನು ಹಿಡಿಯಲು ತೆರಳಿದ್ದಾರೆ.

ಕೆ.ಜಿ.ಗಟ್ಟಲೇ ಮೀನು ಶಿಕಾರಿ!
ಏಳೆಂತು ಮಂಡಿ ಯುವಕರ ತಂಡಕ್ಕೆ ಸುಮಾರು 200 ಕೆ.ಜಿ.ಗೂ ಅಧಿಕ ಕಾಟ್ಲಾ ಜಾತಿಯ ಮೀನುಗಳು ಸಿಕ್ಕಿದೆ. ಒಂದೊಂದು ಮೀನುಗಳು 6-7 ಕೆ.ಜಿ. ತೂಕದ್ದಾಗಿದ್ದು ಬೇಡಿಕೆಯಿರುವ ಹಿನ್ನೆಲೆಯಲ್ಲಿ 600-700 ರೂಪಾಯಿಗೆ ಮಾರಾಟವಾಗಿದೆ.

ಮಲ್ಯಾಡಿಯ ಯುವಕರಾದ ಹರೀಶ್, ಪ್ರಶಾಂತ್, ಶ್ರೀನಿವಾಸ್, ರಾಘವೇಂದ್ರ, ಮಾಧವ, ಪ್ರಶಾಂತ್ ಹಾಗೂ ನವೀನ್ ಮೊದಲಾದವರು ಉತ್ಸಾಹಿ ತಂಡ ಈ ಮೀನು ಶಿಕಾರಿ ಮಾಡಿದೆ.

(ವರದಿ-ಯೋಗೀಶ್ ಕುಂಭಾಸಿ)

Comments are closed.