ಕರಾವಳಿ

ಪಡ್ಡೆ ಹುಡುಗರಿಂದ ಹಿಡಿದು ಎಲ್ಲ ವಯಸ್ಸದವರೆಗೂ ಈ ಟಿಪ್ಸ್​ ವರ್ಕೌಟ್​ ಆಗುತ್ತೆ…!

Pinterest LinkedIn Tumblr

ಗಡ್ಡ ಪೊಗರ್​ದಸ್ತ್​ ಆಗಿರಬೇಕು, ಮೀಸೆ ಜಬರ್​ದಸ್ತ್​ ಆಗಿರಬೇಕು. ಹಂಗಿದ್ರೆ ನೋಡಿ, ನಾಲ್ಕೈದು ಹುಡುಗಿಯರು ಕಣ್ಣಸನ್ನೆ ಮಾಡಿ, ಪ್ರಿಯಾ ವಾರಿಯರ್​ ಸ್ಟೈಲ್​ನಲ್ಲಿ ಶೂಟ್​ ಮಾಡೋದು. ಅಲ್ವಾ ಮಚ್ಚಾ ಅಂತಾ ಹುಡುಗುರು ತಮ್ಮತಮ್ಮಲ್ಲೇ ಮಾತಾಡ್ಕೊಳ್ತಾ ಇರ್ತಾರೆ. ಆದರೆ, ಹಲ್ಲಿದ್ದವರಿಗೆ ಕಡಲೆ ಇರೋಲ್ಲ ಅನ್ನೋಹಾಗೇ ಕೆಲವರು ತಿಪ್ಪರಲಾಗ ಹಾಕಿದ್ರೂ ಅವರಿಗೆ ಬರೋದು ಮೇಕೆ ಗಡ್ಡ, ಜಿರಳೆ ಮೀಸೆ. ಅಷ್ಟಕ್ಕೇ ಬೇಸರ ಮಾಡ್ಕೊಳ್ಳೋ ಹುಡುಗ್ರು ಇದ್ದಾರೆ. ಅವರಿಗಂತಾನೇ ಇಲ್ಲೊಂದಿಷ್ಟು ಟಿಪ್ಸ್​ ಇದೆ..

ವರ್ಷ 30 ಆದ್ರೂ, ಸರಿಯಾಗಿ ದಾಡಿ ಮೂಡಿಲ್ಲ ಅಂತಾ ನಾಚಿಕೆ ಪಟ್ಕೊಳ್ಳೋರಿಂದ ಹಿಡಿದು, ಅರ್ಜೆಂಟ್​ ಆಗಿ ಗಡ್ಡ ಮೀಸೆ ಬರಲಿ ಅಂತಾ ಅಪ್ಪಂದಿರ ಶೇವಿಂಗ್​ ಬ್ಲೇಡ್​ ತಗೊಂಡು ಶೇವ್​ ಮಾಡ್ಕೊಳ್ಳೂ ಟೀನೆಜ್​ ಪಡ್ಡೆ ಹುಡುಗರವರೆಗೂ ಎಲ್ಲರಿಗೂ ಈ ಟಿಪ್ಸ್​ ವರ್ಕೌಟ್​ ಆಗುತ್ತೆ.

ಮುಖವನ್ನು ಸ್ವಚ್ಛವಾಗಿಡಿ: ಮುಖವನ್ನು ಆದಷ್ಟು ದೂಳಿನಿಂದ ಸಂರಕ್ಷಿಸಿ.ಯಾಕೆಂದ್ರೆ, ಎಲ್ಲೋ ಶೇವ್​ ಮಾಡ್ದಾಗ ಗಾಯ ಆಗಿ, ಆ ಗಾಯದ ಮೇಲೆ ಧೂಳು ಕುಳಿತು, ಆ ಧೂಳು ಇರಿಟೇಶನ್​ ಮಾಡಿ, ಅದನ್ನ ನೀವು ಕೆರ್ಕೊಂಡು ಕೆರ್ಕೊಂಡು ಗಲ್ಲದ ತುಂಬ ಗುಂಡಿಬಿದ್ದು, ಮುಖ ಅಸಹ್ಯ ಆಗಬೇಕಾ ಹೇಳಿ? ಅದರ ಬದಲು ಮುಖವನ್ನು ಧೂಳಿನಿಂದ ಮುಕ್ತವಾಗಿರಿಸಿ. ತಲೆಹೊಟ್ಟು ನಿವಾರಿಸುವ ಶ್ಯಾಂಪೂ ಬಳಸಿ ವಾರದಲ್ಲಿ ಎರಡು ಬಾರಿ ಗಡ್ಡವನ್ನು ತೊಳೆದು ಕೊಳ್ಳಿ. ಆಗ, ಮುಖವೂ ಕ್ಲೀನ್​ ಆಗಿರುತ್ತೆ. ಅಲ್ಲದೇ ಗಡ್ಡವೂ ಪೋಗರ್​ದಸ್ತಾಗಿ ಬೆಳೆಯುತ್ತೆ.

ಮೊಟ್ಟೆ: ಮೊಟ್ಟೆಯ ವೈಟ್​ ನೊಂದಿಗೆ ವಿಟಮಿನ್ ಬಿ7 ಎಣ್ಣೆಯನ್ನು ಮಿಕ್ಸ್​ ಮಾಡಿ ಹಚ್ಕೊಳ್ಳಿ. ಆಗ ಗಡ್ಡ, ಮೀಸೆ ಹಂತ-ಹಂತವಾಗಿ ಬೆಳೆಯುತ್ತೆ ಅಂತಾರೆ ಎಕ್ಸ್​ಪರ್ಟ್ಸ​. ಮೊಟ್ಟೆಯ ಬಿಳಿ ಅಂಶದಲ್ಲಿ ಅಧಿಕವಾಗಿ ಬಯೋಟಿನ್ ಇರುತ್ತೆ. ಇದು ಗಡ್ಡ, ಮೀಸೆ ಬೇಗನೇ ಬೆಳೆಯಲು ಸಹಾಯಮಾಡುತ್ತದೆ. ಸೋ , ಇದನ್ನ ನಿತ್ಯ ಟ್ರೈ ಮಾಡ್ತಾ ಬಂದರೇ, ವಾರಾಂತ್ಯದಲ್ಲಿ ಡಿಫೆರೆನ್ಸ್​ ಗೊತ್ತಾಗುತ್ತೆ ಅನ್ನುವುದು ತಜ್ಞರ ಅಭಿಪ್ರಾಯ. .

ತೆಂಗಿನ ಎಣ್ಣೆ: ಮುಖದ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸೋದಕ್ಕೆ ತೆಂಗಿನ ಎಣ್ಣೆ ತುಂಬಾನೆ ಇಂಪಾರ್ಟೆಂಟ್. ತೆಂಗಿನ ಎಣ್ಣೆಯನ್ನು ರೋಸ್ಮರಿ ಎಣ್ಣೆ ಜೊತೆಗೆ ಮಿಕ್ಸ್​ ಮಾಡಿ, ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ 15 ನಿಮಿಷ ಮಸಾಜ್​ ಮಾಡಿ, ಆಮೇಲೆ ತಣ್ಣೀರಿನಲ್ಲಿ ನಿಮ್ಮ ಮುಖ ತೊಳೆದುಕೊಳ್ಳಿ. ಇಷ್ಟೆ ಸಿಂಪಲ್​. ವಾರದಲ್ಲಿ ಮೂರು ಸಲ ಹೀಗೆ ಮಾಡಿದ್ರೆ, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ ಅಂತಾ ಸಾಂಗ್​ ಹಾಡ್ಬಹುದು

ವ್ಯಾಯಾಮ: ಇವೆಲ್ಲದರ ಜೊತೆಗೆ ಡೈಲಿ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನೀಟ್​ ಆಗಿ ನಡೆಯುತ್ತಾ ಕೂದಲು ಬೆಳವಣಿಗೆಗೆ ಪ್ರಚೋದನೆ ಸಿಗುತ್ತೆ ಅಂತಾ ಎಕ್ಸ್​ಪರ್ಟ್​​ ಹೇಳುತ್ತಾರೆ. ಸಾಲದಕ್ಕೆ ವ್ಯಾಯಾಮ ಮಾಡಿದರೇ ಹೆಲ್ತು ಕೂಡ ಹೆಲ್ತಿಯಾಗಿರುತ್ತೆ. ಮತ್ಯಾಕೆ ತಡ ನಿತ್ಯ 20 ನಿಮಿಷ ವ್ಯಾಯಾಮ ಮಾಡಿ,ಮೇಲಿನ ಟಿಪ್ಸ್​ ಫಾಲೋ ಮಾಡಿ, ಗಡ್ಡ ಮೀಸೆ ಬೆಳಸಿಕೊಳ್ಳಿ..

Comments are closed.