ಕರಾವಳಿ

ಗೂಳಿಗಳಿಗೆ ಕೆಂಪು ಬಣ್ಣವನ್ನು ಕಂಡರೆ ಆಗುವುದಿಲ್ಲ ಯಾಕೆ..ಗೊತ್ತೆ.?

Pinterest LinkedIn Tumblr

ಕೆಂಪು ಬಣ್ಣ ಹಾಕಿದವರ ಮೇಲೆ ಗೂಳಿ ಹರಿಹಾಯುತ್ತದೆ ಏಕೆ ಅದಕ್ಕೆ ನಿಜವಾದ ಕಾರಣ ಇಲ್ಲಿದೆ ನೋಡಿ. ಸಾಮಾನ್ಯವಾಗಿ ಗೂಳಿಗೂ ಮತ್ತು ಕೆಂಪು ಬಣ್ಣಕ್ಕೂ ಆಗಿ ಬರುವುದಿಲ್ಲ ಎನ್ನುವುದು ನಿಮ್ಮೆಲರಿಗೂ ಗೊತ್ತಿರುವ ವಿಚಾರ ಕೆಂಪು ಬಟ್ಟೆ ಹಾಕಿ ಕೊಂಡಿರುವವರ ಮೇಲೆ ಗೂಳಿಗಳು ಹರಿಹಾಯುವುದನ್ನು ಸಿನಿಮಾಗಳಲ್ಲಿ ನೀವು ನೋಡಿರುತ್ತಿರ ಮತ್ತೆ ಗೂಳಿಗೆ ಏಕೆ ಕೆಂಪು ಬಣ್ಣವನ್ನು ಕಂಡರೆ ಆಗುವುದಿಲ್ಲ ಇದರ ಹಿಂದಿರುವ ಸತ್ಯ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಗೂಳಿಗಳಿಗೆ ಕೆಂಪು ಬಣ್ಣವನ್ನು ಕಂಡರೆ ಆಗುವುದಿಲ್ಲ ಎನ್ನುವ ಒಂದು ಕಲ್ಪನೆ ಹುಟ್ಟಿಕೊಂಡಿದ್ದು ಸ್ಪೇನ್ ನ ಅತ್ಯಂತ ಜನಪ್ರಿಯ ಕ್ರೀಡೆಯಾದ ಬುಲ್ ಫೈಟಿಂಗ್ ನಲ್ಲಿ ಈ ಗೂಳಿಕಾಳಗದಲ್ಲಿ ಒಟ್ಟು 3 ಹಂತಗಳಿರುತ್ತವೆ ಈ 3 ಹಂತಗಳಲ್ಲಿ ಮೆಟಾಡಾರ್ ಈತ ಮೊದಲ ಎರಡು ಹಂತಗಳಲ್ಲಿ ಬೇರೆ ಬೇರೆ ಬಣ್ಣದ ಬಟ್ಟೆಗಳನ್ನು ಬಳಸುತ್ತಾನೆ

ಆದರೆ ಕೊನೆ ಹಂತದಲ್ಲಿ ಮಾತ್ರ ಕೆಂಪು ಬಣ್ಣದ ಬಟ್ಟೆಯನ್ನು ಬಳಸುತ್ತಾನೆ ಇದಕ್ಕೆ ನಿಖರವಾದ ಕಾರಣ ಏನೆಂದರೆ ತನ್ನ ಕತ್ತಿಯಿಂದ ಗೂಳಿಗೆ ಆಗಾಗ ತಿವಿಯುತ್ತಿರುತ್ತಾನೆ ಆಗ ಆ ಗೂಳಿಯ ರಕ್ತವನ್ನು ಕೆಂಪು ಬಟ್ಟೆ ಮರೆಮಾಚುತ್ತದೆ ಎನ್ನುವ ಒಂದು ಕಾರಣಕ್ಕೆ ಆತ ಕೊನೆ ಹಂತದಲ್ಲಿ ಕೆಂಪುಬಟ್ಟೆ ಬಳಸುತ್ತಾನೆ ಆದರೆ ಆತ ಕೆಂಪು ಬಟ್ಟೆ ಬಳಸುವುದಕ್ಕೂ ಗೂಳಿಗೆ ಕೋಪ ಬರುವುದಕ್ಕೂ ಯಾವುದೇ ಕಾರಣವಿಲ್ಲ. ನಿಜವಾದ ಸತ್ಯ ಏನೆಂದರೆ ಗೂಳಿಗಳಿಗೆ ಕೆಂಪು ಬಣ್ಣ ಕಾಣುವುದಿಲ್ಲ ಹಾಗಾದರೆ ಏಕೆ ದಾಳಿ ಮಾಡುತ್ತವೆ ಎಂದು ನಿಮಗೆ ಅನಿಸಬಹುದು ಆದರೆ ಗೂಳಿಗಳಿಗೆ ಹಸುಗಳಿಗೆ ಎಲ್ಲ ಪ್ರಾಣಿಗಳಿಗೂ ಕೆಂಪು ಬಣ್ಣ ಕಪ್ಪು ಬಣ್ಣದ ತರ ಕಾಣಿಸುತ್ತದೆ ಮತ್ತೆ ಈ ಆಟಕ್ಕೆ ಬಳಸುವಂತಹ ಗೂಳಿಗಳು ಇವು ತುಂಬಾ ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿರುತ್ತವೆ

ಹಾಗಾಗಿ ಅವುಗಳಿಗೆ ಏನೇ ನೋಡಿದರು ಕೋಪ ಬರುತ್ತದೆ. ಈ ಪ್ರಕೃತಿಯಲ್ಲಿ ಎಲ್ಲ ಪ್ರಾಣಿಗಳಿಗೂ ಒಂದೊಂದು ರೀತಿಯ ಕೊಡುಗೆ ಮತ್ತು ಕೊರತೆಗಳು ಕೂಡ ಇದೆ ಹೇಳಬೇಕೆಂದರೆ ನಾವು ಬೆಳೆಕಿನ ಪ್ರಭಾವ ಇಲ್ಲದೆ ಕತ್ತಲಲ್ಲಿ ಯಾವ ವಸ್ತುವನ್ನು ಕೂಡ ನೋಡುವುದಕ್ಕೆ ಆಗುವುದಿಲ್ಲ ಆದರೆ ಬೆಕ್ಕು ಹುಲಿಯಂತಹ ಪ್ರಾಣಿಗಳು ಕತ್ತಲಲ್ಲೂ ಕೂಡ ತನ್ನ ಬೇಟೆಯನ್ನು ಹುಡುಕುವ ಸಮರ್ಥ ಹೊಂದಿವೆ. 2007 ರಲ್ಲಿ ಡಿಸ್ಕವರಿ ಚಾನೆಲ್ ಗೂಳಿ ಮತ್ತು 3 ಬಣ್ಣಗಳ ಜೊತೆ ಒಂದು ಪ್ರಯೋಗ ಮಾಡುತ್ತದೆ ಮೊದಲನೆಯದಾಗಿ ಗೂಳಿ ಮತ್ತು ಕೆಂಪು ನೀಲಿ ಬಿಳಿಯ ಮೂರು ಬಣ್ಣದ ಬಾವುಟಗಳನ್ನು ಗೂಳಿ ಮುಂದೆ ತಂದಿಡಲಾಗುತ್ತದೆ ಆಗ ಗೂಳಿ ಯಾವುದೇ ಬಣ್ಣದ ಬೇಧವಿಲ್ಲದೆ ಆ ಭಾವುಟಗಳ ಮೇಲೆ ನುಗ್ಗುತ್ತದೆ ಮತ್ತೆ ಎರಡನೆಯದಾಗಿ ಈ 3 ಬಣ್ಣದ ಅಂದರೆ ಕೆಂಪು ನೀಲಿ ಬಿಳಿ ಈ ಬಣ್ಣದ ಬಟ್ಟೆಯನ್ನು ತೋಟ್ಟಿರುವ ನಕಲಿ ವಸ್ತುಗಳನ್ನು ಗೂಳಿ ಮುಂದೆ ತಂದು ಇಡಲಾಗುತ್ತದೆ

ಆಗಲು ಗೂಳಿ ಯಾವುದೇ ಭೇದವಿಲ್ಲದೆ ಆ ವಸ್ತುಗಳ ಮೇಲೆ ಹಾಯುತ್ತದೆ. ಆದರೆ ಮೂರನೆಯದಾಗಿ ಅದೇ 3 ಬಣ್ಣದ ಬಟ್ಟೆಗಳನ್ನು ಮನುಷ್ಯರಿಗೆ ತೊಡಿಸಿ ಗೂಳಿಯ ಮುಂದೆ ನಿಲ್ಲಿಸಲಾಗುತ್ತದೆ ಆದರೆ ಗೂಳಿ ಕೆಂಪು ಬಣ್ಣದ ವ್ಯಕ್ತಿಯನ್ನು ಬಿಟ್ಟು ಮೊದಲು ಬಿಳಿ ಮತ್ತು ನೀಲಿ ಬಣ್ಣದ ವ್ಯಕ್ತಿಗಳ ಮೇಲೆ ಹಾಯ್ದು ನಂತರ ಕೆಂಪು ಬಣ್ಣದ ವ್ಯಕ್ತಿಯ ಮೇಲೆ ಹಾಯುತ್ತದೆ ಈ ಪ್ರಯೋಗದ ನಂತರ ಅವರ ಹೇಳಿಕೆ ಗೂಳಿಗಳಿಗೆ ಕೆಂಪು ಬಣ್ಣದ ಕುರುಡುತನ ಇದೆ ಆ ಬಣ್ಣದ ವಸ್ತು ಅಥವಾ ವ್ಯಕ್ತಿ ಅದರ ಮುಂದೆ ಬಂದು ನಿಂತಾಗ ಬೇರೆ ಬಣ್ಣಗಳ ಜೊತೆ ಈ ಕೆಂಪು ಬಣ್ಣ ಕಾಣದೆ ಇದ್ದಾಗ ಅದು ಗೊಂದಲಕ್ಕೀಡಾಗಿ ಅಥವಾ ಭಯಪಟ್ಟು ಆ ಬಣ್ಣದ ವಸ್ತುವಿನ ಮೇಲೆ ಹರಿಹಾಯ್ದು ಕೋಪವನ್ನು ತೋರಿಸುತ್ತದೆ ಇದನ್ನು ಬಿಟ್ರೆ ಗೂಳಿಗೆ ಕೆಂಪು ಬಣ್ಣದ ಮೇಲೆ ಯಾವುದೇ ದ್ವೇಷ ಇಲ್ಲ ಗೂಳಿಗಳು ಆ ರೀತಿ ನಡೆದುಕೊಳ್ಳಲು ನಿಜವಾದ ಕಾರಣ ಕೆಂಪು ಬಣ್ಣದ ಕುರುಡುತನ.

Comments are closed.