ಕರಾವಳಿ

ಮರಳು ದಿಬ್ಬಗಳ ತೆರವು ಅವಧಿ ಮುಕ್ತಾಯ

Pinterest LinkedIn Tumblr

ಉಡುಪಿ: ಫೆಬ್ರವರಿ 4, 2019 ರಂದು ಕೆಎಸ್‍ಸಿಝಡ್‍ಎಂಎ ಯಿಂದ ನೀಡಲಾದ ನಿರಾಕ್ಷೇಪಣಾ ಪತ್ರದನ್ವಯ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿನ ಮರಳು ದಿಬ್ಬಗಳನ್ನು ತೆರವುಗೊಳಿಸಲಾಗಿದ್ದು, ಫೆಬ್ರವರಿ 3 ರಂದು ಸದರಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ನೀಡಿರುವ ಅವಧಿಯು ಮುಕ್ತಾಯಗೊಂಡಿರುತ್ತದೆ.

ಈಗಾಗಲೇ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿನ 10 ಮರಳು ದಿಬ್ಬಗಳನ್ನು ಗುರುತಿಸಿ, ಅನುಮೋದನೆಗಾಗಿ ಕೆಎಸ್‍ಸಿಝಡ್‍ಎಂಎ ಗೆ ಕಳುಹಿಸಲಾಗಿರುತ್ತದೆ. ಕೆಎಸ್‍ಸಿಝಡ್‍ಎಂಎ ಯಿಂದ ಅನುಮೋದನೆ ದೊರೆತ ನಂತರ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಪ್ರಸ್ತುತ ಮರಳು ದಿಬ್ಬಗಳನ್ನು ತೆರವುಗೊಳಿಸುವ ಕಾರ್ಯ ಸ್ಥಗಿತಗೊಂಡಿರುವುದರಿಂದ ಕರಾವಳಿ ನಿಯಂತ್ರಣ ವಲಯ ಪ್ರದೇಶದ ವ್ಯಾಪ್ತಿಯಲ್ಲಿ ಉಡುಪಿ ಇ-ಸ್ಯಾಂಡ್ ಆ್ಯಪ್ (Udupi e-Sand APP)ಮುಖಾಂತರ ಮರಳು ಪೂರೈಕೆ ಮಾಡಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.