ಕರಾವಳಿ

ಬಿಳಿ ಬಟ್ಟೆಗಳ ಶುಭ್ರತೆಯನ್ನು ಮರಳಿ ತರಲು ಹೀಗೆ ಮಾಡಿ..

Pinterest LinkedIn Tumblr

ಹಿಂದಿನ ಕಾಲದಲ್ಲಿ ಈಗಿನ ರೀತಿ ಯಾವುದೇ ಕೆಲಸಕ್ಕೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುತ್ತಿದ್ದಿಲ್ಲ ಬದಲಾಗಿ ಮನುಷ್ಯರೇ ತಮ್ಮ ಕೈಯಾರೆ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು ಆದರೆ ಈಗ ಕಾಲ ಬದಲಾದಂತೆ ಮನುಷ್ಯರು ಸಹ ಬದಲಾಗಿ ತಮ್ಮ ದೇಹಕ್ಕೆ ಸಂಪೂರ್ಣ ವಿರಾಮ ನೀಡುತ್ತಿದ್ದಾರೆ ಹೀಗಾಗಿ ಪ್ರತಿಯೊಂದು ಕೆಲಸಕ್ಕೂ ಸಹ ಯಂತ್ರಗಳನ್ನು ಬಳಸುತ್ತಿದ್ದಾರೆ ಹಾಗೇನೇ ಈ ಬಟ್ಟೆ ತೊಳೆಯುವುದು ಕೂಡ ಹೌದು ಮೊದಲು ಕೈಯಲ್ಲಿ ಬಟ್ಟೆ ಮನುಷ್ಯರೇ ತೊಳೆಯುತ್ತಿದ್ದರು ಆದರೆ ಈಗ ಬಟ್ಟೆ ತೊಳೆಯಲು ಸಹ ಯಂತ್ರಗಳು ಬಂದಿವೆ ಅದರೊಳಗೆ ಎಲ್ಲ ಬಣ್ಣದ ಬಟ್ಟೆನೀರು ಸೋಪಿನ ಪುಡಿ ಹಾಕಿ ಗುಂಡಿ ಒತ್ತಿದರೆ ಎಲ್ಲ ಬಟ್ಟೆಗಳು ಸ್ವಚ್ಛ ಆಗುವುದರ ಜೊತೆಗೆ ಬಣ್ಣ ಮಿಶ್ರಿತ ಬಟ್ಟೆಗಳು ಆಗುತ್ತವೆ

ಹೀಗೆ ಬಿಳಿ ಬಟ್ಟೆ ಹಳದಿ ಕಪ್ಪು ನೀಲಿ ಬಣ್ಣವನ್ನು ಪಡೆಯುತ್ತವೆ ಅಂತಹ ಬಟ್ಟೆಗಳನ್ನು ಸ್ವಚ್ಛ ಮಾಡಲು ಇಲ್ಲಿದೆ ಸುಲಭ ಮನೆಮದ್ದು ಹಾಗಾದರೆ ಆ ಮನೆಮದ್ದನ್ನು ಹೇಗೆ ಬಳಸುವುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ವಾಷಿಂಗ್ ಮಷಿನ್ ನಲ್ಲಿ ಎಲ್ಲ ಬಟ್ಟೆಗಳನ್ನು ಹಾಕಿದಾಗ ಆ ಬಟ್ಟೆಗಳ ಬಣ್ಣ ಎಲ್ಲ ಬಟ್ಟೆಗಳಿಗೂ ತಾಗಿ ಬಿಳಿ ಬಟ್ಟೆ ಬೇರೆ ಬಣ್ಣದ ಬಟ್ಟೆಯಾಗುತ್ತದೆ ಕೆಲವೊಮ್ಮೆ ನೀರು ಗಡಸು ಇದ್ದರು ಸಹ ಬಿಳಿ ಬಟ್ಟೆಗಳು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತವೆ ಇದಕ್ಕೆ ಹೀಗೆ ಮಾಡಿ ಒಂದು ಬಕೆಟ್ ನಲ್ಲಿ ಸ್ವಲ್ಪ ತಣ್ಣೀರನ್ನು ತೆಗೆದುಕೊಳ್ಳಿ ಇದರಲ್ಲಿ ಜಾಸ್ತಿ ಬಿಸಿ ಮಾಡಿದ ನೀರನ್ನು ಹಾಕಿಕೊಳ್ಳಿ. ಇದರಲ್ಲಿ ಎರಡು ದೊಡ್ಡ ಚಮಚ ಬಟ್ಟೆ ತೊಳೆಯುವ ಸೋಪಿನ್ ಪುಡಿಯನ್ನು ಹಾಕಿಕೊಳ್ಳಿ ಹಾಗೇನೇ ಇದರಲ್ಲಿ ಬೋರಿಕ್ ಆಸಿಡ್ ಹಾಕಿಕೊಳ್ಳಿ ಇದು ಎಲ್ಲ ಔಷಧಿ ಅಂಗಡಿಗಲ್ಲಿ ಸಿಗುತ್ತದೆ ಒಂದುವೇಳೆ ನಿಮಗೆ ಬೋರಿಕ್ ಆಸಿಡ್ ಸಿಗದಿದ್ದರೆ ನೀವು ಅಡುಗೆ ಸೋಡಾ ಕೂಡ ಬಳಸಬಹುದು.

ಇದರ ಜೊತೆಗೆ ನೀವು ವಿನೆಗರ್ ನ್ನು ಬಳಸಬೇಕು ಈ ವಿನೆಗರ್ ಕೂಡ ಸಿಗದೆ ಇದ್ದರೆ ನೀವು ನಿಂಬೆ ಹಣ್ಣನ್ನು ಬಳಸಬೇಕು. ಈಗ ಬಿಸಿ ನೀರಿಗೆ ಬೋರಿಕ್ ಆಸಿಡ್ ಎರಡು ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಇದಕ್ಕೆ ಒಂದೂವರೆ ಚಮಚ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದರಲ್ಲಿ ಬಿಳಿ ಬಟ್ಟೆಯನ್ನು ಹಾಕಿ ಇದನ್ನು ಎರಡು ಗಂಟೆ ಅಥವಾ ಇಡೀ ರಾತ್ರಿ ನೆನೆಯಲು ಇಡೀ ಮರುದಿನ ಇದನ್ನು ಚೆನ್ನಾಗಿ ತಿಕ್ಕಿ ತೊಳೆದು ಬಿಸಿಲಿಗೆ ಒಣಗಿಸಿ ಆಗ ನಿಮ್ಮ ಬಿಳಿ ಬಟ್ಟೆ ಚೆನ್ನಾಗಿ ಸ್ವಚ್ಛವಾಗುತ್ತದೆ ಹಾಗೇನೇ ಅದರ ಶುಭ್ರತೆಯನ್ನು ಕೂಡ ತೋರಿಸುತ್ತದೆ. ಹಾಗೇನೇ ನೀವು ಮಜ್ಜಿಗೆಯಲ್ಲಿ ಬಣ್ಣ ತಾಕಿದ ಬಿಳಿ ಬಟ್ಟೆಯನ್ನು ಇಡೀ ರಾತ್ರಿ ನೆನಸಿಟ್ಟರೆ ಬೆಳಿಗ್ಗೆ ನೀವು ತೊಳೆದಾಗ ಅದು ಚೆನ್ನಾಗಿ ಸ್ವಚ್ಛವಾಗಿರುತ್ತದೆ. ಬೋರಿಕ್ ಆಸಿಡ್ ಬಳಸುವುದರಿಂದ ಬಟ್ಟೆ ಹಾಳಾಗಲ್ಲ ಸ್ವಚ್ಛವಾಗುತ್ತದೆ.

Comments are closed.