ಕರಾವಳಿ

ಬುದ್ಧ ಹೇಳಿರುವ ಈ 12 ವಿಷಯದಿಂದ ಜೀವನದಲ್ಲಿ ಖುಷಿ ಸಂತೋಷ ನೆಮ್ಮದಿ ಕಾಣಿರಿ.

Pinterest LinkedIn Tumblr

ಜೀವನದಲ್ಲಿ ನಿಮಗೆ ಖುಷಿ ಸಂತೋಷ ನೆಮ್ಮದಿ ಬೇಕೇ ಹಾಗಾದರೆ ಗೌತಮ ಬುದ್ಧ ಹೇಳಿದ ಈ 12 ವಿಷಯಗಳನ್ನು ತಿಳಿಯಿರಿ. ಗೌತಮ ಬುದ್ಧ ಹೇಳಿರುವ ಕೆಲವು ವಿಷಯಗಳು ಮಾನವನ ಜೀವನದಲ್ಲಿ ದಾರಿದೀಪವಾಗಿ ತೋರಿಸುತ್ತದೆ ಜೀವನ ಬೇಜಾರು ಸುಖ ಸಂತೋಷ ಇಲ್ಲ ಅನ್ನೋರು ಬುದ್ಧ ಹೇಳಿರುವ ಈ 12 ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು ಆ 12 ವಿಷಯಗಳು ಯಾವುವು ಎಂದರೆ. ಒಳ್ಳೆಯವರಾಗಿರಿ ಆದರೆ ಅದನ್ನು ಸಾಬೀತು ಪಡಿಸುವಲ್ಲಿಯೇ ನಿಮ್ಮ ಜೀವನವನ್ನು ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ. ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶವನ್ನು ಮಾಡಿಕೊಡಬೇಡಿ.

ಯಾವತ್ತೂ ಬೆರೆಯವರಲ್ಲಿ ಕ್ಷಮೆಯನ್ನು ಕೇಳಬೇಡಿ ಯಾಕೆ ಅಂದರೆ ಅವರು ನಿಮ್ಮ ಮಾತನ್ನು ತಪ್ಪು ಅರ್ಥ ಮಾಡಿಕೊಂಡರೆ ನೀವ್ಯಾಕೆ ಕ್ಷಮೆ ಕೇಳಬೇಕು. ನಾವು ಒಂಟಿಯಾಗಿದ್ದರೆ ಅದರ ಅರ್ಥ ನಾವು ಒಂಟಿಯಾಗಿದ್ದೇವೆ ಎಂದು ಅಲ್ಲ ಅದರ ಅರ್ಥ ನಾವು ಎಲ್ಲ ವಿಷಯವನ್ನು ಎದುರಿಸುವ ಸಾಮರ್ಥ್ಯ ನಮಗಿದೆಯೆಂದು ಅರ್ಥ. ಎಲ್ಲೆಯಾಗಲಿ ನೀವು ಒಂದೆತರದ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಒಂದೆತರನಾದ ವ್ಯಕ್ತಿಯಾಗಿರಿ ಅದು ನಿಮ್ಮ ಸ್ವಂತ ವಿಷಯದಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಅಥವಾ ಖಾಸಗಿಯಾಗಲಿ. ಹಣ ಮನುಷ್ಯರ ಜೀವನದ ಒಂದು ಅತಿ ಕೆಟ್ಟ ಸಂಶೋಧನೆ ಆದರೆ ಅದು ನಂಬಿಕೆಗೆ ಮನುಷ್ಯನು ಅರ್ಹನೋ ಅಲ್ಲವೋ ಎಂಬುದನ್ನು ಮತ್ತು ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ.

ಈ ಜಗತ್ತಿನ ತುಂಬೆಲ್ಲ ಅಧೀಕವಾಗಿ ರಾಕ್ಷಸರಂತೆ ಇರುವುದು ಆದರೆ ಸ್ನೇಹಿತರಂತೆ ಮುಖವಾಡವನ್ನು ಹಾಕಿಕೊಂಡಿದ್ದಾರೆ ಅಷ್ಟೇ. ನಿಮ್ಮ ಮಕ್ಕಳನ್ನು ಶ್ರೀಮಂತರನ್ನಾಗಿ ಮಾಡಿಸಲು ಶಿಕ್ಷಣ ಕೊಡಿಸಬೇಡಿ ಅದರ ಬದಲು ಜೀವನದಲ್ಲಿ ಹೇಗೆ ಖುಷಿಯಾಗಿರುವುದು ಎಂದು ಹೇಳಿಕೊಡಿ ಆಗ ಅವರು ಬೆಳೆದು ದೊಡ್ಡವರಾದಾಗ ವಸ್ತುಗಳ ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ನೀವೂ ಎಷ್ಟು ಕಡಿಮೆ ಕೆಟ್ಟ ವ್ಯಕ್ತಿಗಳಿಗೆ ಸ್ವಂದಿಸದೆ ಇರುತ್ತಿರೋ ಜೀವನದಲ್ಲಿ ಅಷ್ಟು ನೆಮ್ಮದಿಯಿಂದ ಇರುತ್ತೀರಿ. ಬಲಹಿನ ವ್ಯಕ್ತಿಗಳು ಪ್ರತಿಕಾರವನ್ನು ತೆಗೆದುಕೊಳ್ಳುತ್ತಾರೆ ಬಲವಾದ ವ್ಯಕ್ತಿಗಳು ಕ್ಷಮಿಸಿಬಿಡುತ್ತಾರೆ ಬುದ್ದಿವಂತ ವ್ಯಕ್ತಿಗಳು ನಿರ್ಲಕ್ಷಿಸುತ್ತಾರೆ.

ನೀವು ಸಂತೋಷದಿಂದ ಇರಬೇಕಾದರೆ ಹಿಂದೆ ನಿಮ್ಮ ಜೀವನದಲ್ಲಿ ಆದ ಘಟನೆಗಳನ್ನು ನೆನಸಿಕೊಂಡು ಕೊರಗಬೇಡಿ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿ ತಲೆ ಕೆಡಸಿಕೊಳ್ಳಬೇಡಿ ಈಗಿರುವ ಜೀವನದ ಬಗ್ಗೆ ಸಂಪೂರ್ಣವಾಗಿ ಹೇಗಿರಬೇಕೆಂದು ಯೋಚಿಸಿ. ನೀವು ನಿಮ್ಮ ಜೀವನದಲ್ಲಿ ಗಳಿಸುವ ಸಂತೋಷಕ್ಕೆ ನೀವೇ ಕಾರಣಕರ್ತರಾಗಬೇಕು ಬೇರೆಯವರು ನಿಮ್ಮನ್ನು ಸಂತೋಷ ಪಡಿಸುತ್ತಾರೆ ಎಂದು ಅಂದುಕೊಂಡರೆ ಅದು ಯಾವಾಗಲೂ ಕೊನೆಗೆ ನಿರಾಸೆಯಿಂದಲೇ ಕೊನೆಗೊಳ್ಳುತ್ತದೆ.

Comments are closed.