ಕರಾವಳಿ

ಈ ಸಮಸ್ಯೆಯು ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚು ಕಾಡುತ್ತೆ ಯಾಕೆ..?

Pinterest LinkedIn Tumblr

ನಾವು ಇಂದು ಈ ಲೇಖನದಲ್ಲಿ ಈ ಸಮಸ್ಯೆ ಯಾರಿಗೆ ಹೆಚ್ಚು ಕಾಡುತ್ತದೆ ಮತ್ತು ಅದಕ್ಕೆ ಪರಿಹಾರವೇನು ತಿಳಿಯೋಣ. ಮೈಗ್ರೇನ್ ಸಮಸ್ಯೆ ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚು ಕಾಡಿಸುತ್ತದೆ. ಅದು ಏಕೆಂದರೆ ನಿಮಗೆ ಈಗಾಗಲೇ ತಿಳಿದಿರಬಹುದು. ಒಂದು ಅಂಕಿ ಅಂಶದ ಪ್ರಕಾರ 35% ರಷ್ಟು ಹೆಚ್ಚಿನ ಮೈಗ್ರೇನ್ ಸಮಸ್ಯೆಯಿಂದ ನರಳುತ್ತಿರುವವರು ಅದು ಪುರುಷರಿಗಿಂತ ಮಹಿಳೆಯರೆ ಆಗಿರುತ್ತಾರೆ. ಒಂದು ಅಧ್ಯಯನದ ಪ್ರಕಾರ ಪ್ರತಿ 10 ಜನ ಮಹಿಳೆಯರಲ್ಲಿ ಕನಿಷ್ಟ ಮೂರರಿಂದ ನಾಲ್ಕು ಜನ ಮಹಿಳೆಯರೆ ಮೈಗ್ರೇನ್ ನಿಂದ ನಿರಂತರವಾಗಿ ಸಮಸ್ಯೆಗೆ ಒಳಪಡುತ್ತಿರುತ್ತಾರೆ. ಒಂದಾನೊಂದು ಕಾಲದಲ್ಲಿ ಒಂದು ಮಾತಿತ್ತು ಅದೇನೆಂದರೆ ಮಹಿಳೆಯರು ಒತ್ತಡವನ್ನು ತಡೆದುಕೊಳ್ಳುವದಿಲ್ಲ ಅದಕ್ಕೆ ಅವರಿಗೆ ಮೈಗ್ರೇನ್ ಬರುತ್ತದೆ ಎಂದು, ದಶಕಗಳ ಹಿಂದೆ ಈ ಮಾತನ್ನು ಹೇಳುತ್ತಿದ್ದರು. ಆದರೆ ಈ ಮಾತು ನಿಜಕ್ಕೂ ನಂಬಲು ಸಾಧ್ಯವಿಲ್ಲ.

ವೈದ್ಯಕೀಯ ತಂಡವು ಇದಕ್ಕೆ ಹಲವು ರೀತಿಯ ಉದಾಹರಣೆಗಳನ್ನು ಕೊಟ್ಟಿದೆ. ಪುರುಷರು ಅನುಭವಿಸುವ ಮೈಗ್ರೇನ್ ಗಿಂತ ಮಹಿಳೆಯರು ಅನುಭವಿಸುವ ಮೈಗ್ರೇನ್ ಅತಿ ಹೆಚ್ಚು ಯಾತನೆಯಾಗಿರುತ್ತದೆ. ಈಗಾಗಲೇ ಇದಕ್ಕೆ ಸಾಕಷ್ಟು ಅಧ್ಯಯನಗಳು ಸಹ ಬಂದಿವೆ. ಒಂದು ವೈಧ್ಯಕೀಯ ಸಂಸ್ಥೆಯ ಅಧ್ಯಯನದ ಪ್ರಕಾರ 90% ಮೈಗ್ರೇನ್ ಪ್ರಕರಣಗಳಲ್ಲಿ ಮಹಿಳೆಯರೆ ಹೆಚ್ಚಾಗಿರುತ್ತಾರೆ. ಅದರಲ್ಲೂ 20 ವಷ೯ ದಾಟಿದ ಹೆಣ್ಣು ಮಕ್ಕಳಲ್ಲಿ ಈ ಮೈಗ್ರೇನ್ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ. ಈ ಒಂದು ಮೈಗ್ರೇನ್ ಸಮಸ್ಯೆ ಬಂದಾಗ ಯಾವುದೇ ಕೆಲಸ ಮಾಡಲು ಸಹ ಸಾಧ್ಯವೇ ಆಗುವುದಿಲ್ಲ ಅಷ್ಟರಮಟ್ಟಿಗೆ ಈ ಮೈಗ್ರೇನ್ ಕಾಡುತ್ತದೆ.

ಈ ಒಂದು ಮೈಗ್ರೇನ್ ಸಮಸ್ಯೆ ಬರಲು ಮುಖ್ಯ ಕಾರಣ ಹೆಣ್ಣು ಮಕ್ಕಳಲ್ಲಿ ಆಗುತ್ತಿರುವ ಹಾಮೊ೯ನ ಬದಲಾವಣೆ ಎಂದು ಅಧ್ಯಯನಗಳು ತಿಳಿಸಿವೆ. ಹೆಚ್ಚಿನ ಮಹಿಳೆಯರಲ್ಲಿ ಮೈಗ್ರೇನ್ ಮುಟ್ಟು, ಗಭ೯ನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವದರಿಂದ ಮತ್ತು ಗಭಾ೯ವಸ್ಥೆ, ಮತ್ತು ಋತುಬಂಧಗಳೊಂದಿಗೆ ಒಳಗಾದಾಗ ಈ ಒಂದು ಸಮಸ್ಯೆ ಆರಂಭಿಕ ದಿನಗಳಲ್ಲಿ ಹಾಮೊ೯ನ್ ವ್ಯತ್ಯಾಸಗಳಿಂದ ಸ್ವಲ್ಪ ಮಟ್ಟಿಗೆ ಏರುತ್ತಾ ಏರುತ್ತಾ ದಿನ ದಿನ ದಿನಕ್ಕೂ ಹೆಚ್ಚುತ್ತಾ ಸಾಗುತ್ತದೆ. ಅಧ್ಯಯನದಲ್ಲಿ ತಿಳಿಸುವುದು ಏನೆಂದರೆ ಮೈಗ್ರೇನ್ 10 ವಷ೯ದ ಒಳಗಿನ ಬಾಲಕರಿಗೆ ಸಣ್ಣ ವಯಸ್ಸಿನಲ್ಲಿ ಕಾಡುತ್ತದೆ ಆ ನಂತರ ಹೆಚ್ಚು ಕಾಡುವುದು ಮಹಿಳೆಯರಿಗೆ ಮೈಗ್ರೇನ್ ಸಾಮಾನ್ಯವಾಗಿ ಕೆಲವು ಕಾರಣಗಳಿಂದ ಮೆದುಳಿನಲ್ಲಿ ರಕ್ತನಾಳಗಳು ಹಿಗ್ಗಿದಾಗ ಉಂಟಾಗುತ್ತದೆ.

ರಕ್ತನಾಳಗಳು ಮೆದುಳಿನ ಸುತ್ತಲಿನ ಒಂದು ಭಾಗವನ್ನು ಒತ್ತಿದಾಗ ಈ ಒಂದು ಹಿಗ್ಗುವಿಕೆಯು ನೋವನ್ನು ಹೆಚ್ಚು ಮಾಡುತ್ತದೆ ಹಾಗೆ ಮೈಗ್ರೇನ್ ಸಮಸ್ಯಯ ಲಕ್ಷಣಗಳು ಸಹ ಗೋಚರಿಸುತ್ತದೆ. ರಕ್ತನಾಳಗಳ ಹಿಗ್ಗುವಿಕೆ ಅಥವಾ ಕುಗ್ಗುವಿಕೆಯಲ್ಲಿ ಇಸ್ಟ್ರೋಜನ್ ಪ್ರಮುಖ ಪಾತ್ರವನ್ನು ಒಹಿಸಿಕೋಳ್ಳುತ್ತದೆ. ಈ ಒಂದು ಸಮಸ್ಯೆಯು ನಮ್ಮ ಪುರುಷರಿಗಿಂತಲು ಮಹಿಳೆಯರಲ್ಲಿ ಸಮಸ್ಯೆಯಾಗಿ ಕಾಡುತ್ತದೆ. ಮೈಗ್ರೇನ್ ಬಂದಾಗ ಹೆಣ್ಣು ಮಕ್ಕಳು ಆದಷ್ಟೂ ತಮ್ಮ ಕೆಲಸಗಳಿಗೆ ವಿರಾಮ ಹೇಳಿ ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಈ ಒಂದು ಮೈಗ್ರೇನ್ ಗೆ ಹೆಚ್ಚು ಮಾತ್ರೆಗಳನ್ನು ನುಂಗುವ ಬದಲು ಆಯುವೇ೯ದ ಮದ್ದು ಮತ್ತು ಧ್ಯಾನ ಮತ್ತು ಯೋಗಾಸದ ಮೂಲಕ ಸರಿಪಡಿಸಿಕೊಳ್ಳಲು ಸಾಕಷ್ಟು ದಾರಿಗಳಿವೆ. ಅವುಗಳನ್ನು ನೀವು ಸರಿಯಾದ ರೀತಿಯಲ್ಲಿ ಪಾಲಿಸಿದರೆ ನಿಮ್ಮ ಮೈಗ್ರೇನ್ ಸಮಸ್ಯೆ ಖಂಡಿತವಾಗಿಯೂ ಸರಿ ಹೊಗಲಿದೆ.

Comments are closed.