ಕರಾವಳಿ

ಬೇಸಿಗೆಯ ಬೇಗೆಗೆ ಸಿಯಾಳಕ್ಕೆ ಬಹು ಬೇಡಿಕೆ: ಊರು ಬೊಂಡಕ್ಕೂ ಬಂತು ಬರಗಾಲ..!

Pinterest LinkedIn Tumblr

ಕುಂದಾಪುರ: ಬೇಸಿಗೆ ಭೂಮಂಡಲದಲ್ಲಿ ವರ್ಷಂಪ್ರತಿಯಂತೆ ಬರುವ ಕಾಲ. ಕಾವು ಕೂಡಾ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಈ ಬಾರಿ ರಣಬಿಸಲಿಗೆ ಸೆಕೆ ವಿಪರೀತ. ಮನುಷ್ಯ ದಾಹ ತೀರಿಸಿಕೊಳ್ಳಲು ಪ್ರಕೃತಿ ದತ್ತ ಕೊಡೆಗೆ ಹೆಚ್ಚಿ ನೆಚ್ಚಿಕೊಂಡಿದ್ದು, ಪ್ರಕೃತಿದತ್ತವಾದ ಎಳನೀರು ಬೇಸಿಗೆ ನೆಚ್ಚಿನ ಪೇಯವಾಗಿಸಿದೆ. ಎಳನೀರು ಮನುಷ್ಯನ ಜೀವಕ್ಕೆ ಅತೀ ಅಗತ್ಯ ಹಾಗೂ ಯಾವುದೇ ಹಾನಿಕರವಲ್ಲದ ಪಾನೀಯಗಳಲ್ಲೊಂದಾಗಿದೆ. ಮಳೆಗಾಲಕ್ಕಿಂತ ಬೇಸಿಗೆಗಾಲದಲ್ಲಿ ಬೊಂಡಕ್ಕೆ ಹೆಚ್ಚಿನ ಡಿಮ್ಯಾಂಡ್.

ಎಳನೀರು ಮಾತ್ರ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗಿ ಎಳನೀರಿನ ಬೆಲೆ ಗಗನಕ್ಕೆರತೋಡಗಿದೆ. ಎಷ್ಟೆ ದರ ಏರಿದರು ಅದರ ಬೇಡಿಕೆ ಪ್ರಮಾಣ ಮಾತ್ರ ಕುಸಿದಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ಸಮೀಪದಲ್ಲಿ ಎಳನೀರು ರಾಶಿ ಹಾಕಿಕೊಂಡು ವ್ಯವಹರಿಸುವ ವ್ಯವಹಾರಸ್ಥರು ದಾರಿಹೊಕರಿಗೆ ತಂಪೆರೆಯುತ್ತಾರೆ. ಅಲ್ಲದೆ ಹೆಚ್ಚಿನ ಗೂಡಾ ಅಂಗಡಿಗಳಲ್ಲೂ ಎಳನೀರು ಕಾಣಸಿಗುತ್ತದೆ. ಈಗ ಅಲ್ಲೊಂದು ಇಲ್ಲೊಂದು ಇದ್ದು ಅಗಂಡಿ ಕೂಡಾ ಬಿಕೋ..

ಗ್ರಾಮೀಣ ಭಾಗಗಳ ಎಳನೀರಿಗೆ ಬಾರಿ ಬೇಡಿಕೆ ಇರುತ್ತದೆ ಅದರ ದರ ಕೂಡಾ ಅಷ್ಟೆ ಪ್ರಮಾನದಲ್ಲಿರುತ್ತದೆ ಸುಮಾರು ೩೫ ರಿಂದ೪೦ ರೂ. ವರೆಗೆ ದರ ಕಾಯ್ದಿರಿಸುತ್ತಾರೆ. ತರೀಕೆರೆ, ಬೀರೂರು, ಕಡೂರು ಬೊಂಡಗಳು ಘಟ್ಟ ಇಳಿದರೂ ಊರು ಬೊಂಡದಷ್ಟು ರುಚಿಯಿಲ್ಲ. ಅದರಲ್ಲಿ ಕೆಂದಳ್ಕ ಬೊಂಡಕ್ಕೆ ಬಾರೀ ಬೇಡಿಕೆ.

ತೆಂಗಿನ ಮರದಿಂದ ಎಳನೀರು ತೆಗೆಯುವವರಿಗೆ ಬಾರಿ ಬೇಡಿಕೆ ಇದೆ. ಹಾಗೇ ತೋಟ ಇರುವವರಿಗೆ ಅಷ್ಟೆ ಪ್ರಮಾಣದಲ್ಲಿ ಬೇಡಿಕೆ ಇದೆ. ಒಂದು ವ್ಯಾಪ್ತಿಯಲ್ಲಿ ಮರವೆರುವ ವ್ಯಕ್ತಿ ತಾನು ವಹಿಸಿಕೊಂಡ ತೋಟದಲ್ಲಿ ಎಳನೀರಿನ ದರವು ಅವನೆ ನಿರ್ಧರಿಸುತ್ತಾನೆ. ಇದರಿಂದ ಅದರ ದರ ಅಂಗಡಿಗೆ ಬರುವಾಗ ದುಬಾರಿಯಾಗಿ ಕಂಡು ಬರುತ್ತದೆ. ಅಬ್ಬಾಬ್ಬಾ ಎಂದರೂ ೨೫ ರೂ ಕಡಿಮೆ ಸಿಯಾಳ ಸಿಗೋದಿಲ್ಲ. ಒಂದು ಲೀ ನೀರಿಗೆ ೨೦ ರೂ ಇರಬೇಕಿದ್ದರೆ, ಆರೋಗ್ಯ ಪೂರ್ಣ ಎಳೆನೀರು ಅಷ್ಟು ದುಬಾರಿ ಅನ್ನಿಸೋದಲ್ಲ. ರೈತರ ದೃಷ್ಟಿಯಲ್ಲಿ ಬೇರೆ ಬೇರೆ ಬಾಟಲಿ ಪಾಯೀಯಕ್ಕೆ ಹೋಲಸಿದರೆ ಎಳೆನೀರು ದುಬಾರಿಯಲ್ಲ ಎಂದು ಗ್ರಾಹಕರು ಹೇಳುತ್ತಾರೆ. ಹಿಂದಿಗಿಂತಲೂ ಎಳೆನೀರಿಗೆ ಹೆಚ್ಚು ಡಿಮ್ಯಾಂಡ್ ಇದ್ದು, ಇರದ ಪ್ರತಿಫಲ ಮಧ್ಯವರ್ತಿಗಲ್ಲದೆ ರೈತರಿಗೆ ಸಿಗಬೇಕು ಎನ್ನುತ್ತಾರೆ ಎಳೆನೀರು ಪ್ರಿಯರು.

ಇತ್ತೀಚಿಗಿನ ದಿನಗಳಲ್ಲಿ ತೆಂಗಿನ ಮರಗಳಿಗೆ ಅತೀಯಾಗಿ ಆಕ್ರಮಿಸಿಕೊಂಡಿರುವ ವೈಟ್ ಪ್ಲೇ ರೋಗದಿಂದ ಮರದಲ್ಲಿ ಇಳುವರಿ ಕುಂಠಿತವಾಗಿದೆ. ಕುಂಭಾಶಿ ಅಂಗಡಿ ಎಂದೆ ಪ್ರಸಿದ್ಧಿ ಪಡೆದಿರುವ ಮಹೇಶ್ ಪೈ ಅಂಗಡಿಯಲ್ಲಿ ಎಳನೀರಿಗೆ ಬಾರೀ ಬೇಡಿಕೆ ಹಾಗೂ ಹೆಸರುವಾಸಿ ಪಡೆದಿದೆ. ಇಲ್ಲಿ ವರ್ಷಂಪ್ರತಿ ಎಳನೀರು ಇಲ್ಲ ಎನ್ನುವ ದಿನಗಳಿಲ್ಲ. ಪೈ ಹೇಳುವ ಪ್ರಕಾರ ಎಳ ನೀರಿನ ಅಭಾವದಿಂದ ನಾವು ಸಹ ಗಾಟಿ ಎಳನೀರಿಗೆ ಮಾರು ಹೋಗಿದ್ದೇವೆ ಅಲ್ಲದೆ ದರ ಕೂಡಾ ಅಷ್ಟೆ ಪ್ರಮಾಣದಲ್ಲಿ ಏರುಗತಿ ಕಂಡಿದೆ ನಮ್ಮಲ್ಲಿಗೆ ದೂರದೂರಿನಿಂದ ಎಳನೀರಿಗೊಸ್ಕರ ಇಲ್ಲಿಗೆ ಬಂದು ಕೊಂಡು ಹೋಗುತ್ತಾರೆ. ಬೊಂಡದ ಅಭಾವದಿಂದ ಪೂರೈಕೆ ಕಷ್ಟವಾಗುತ್ತಿದೆ.
ಹಿಂದೆ ಅಂಗಡಿ ಮುಂದೆ ರಾಶಿ ರಾಶಿ ಮಂಡದ ಅಟ್ಟಿಯಿದ್ದರೆ, ಈಗ ಅದ ಪ್ರಮಾಣ ಕಡಿಮೆಯಾಗಿದೆ. ಊರು ಬೊಂಡದ ನೀರು ಸಿಹಿಯಾಗಿ ಟೇಸ್ಟಿಯಾಗಿ ಇರುವುದರಿಂದ ಡಿಮ್ಯಾಂಡ್ ಜಾಸ್ತಿ.

Comments are closed.