ಕರಾವಳಿ

ಹೇಗೆಂದರೆ ಹಾಗೆ ಸೆಲ್ಫಿ ಪೋಟೋ ತೆಗೆಯುವ ಸೆಲ್ಪಿ ಪ್ರೀಯರಿಗಾಗಿ ಈ ಲೇಖನ… ಮಿಸ್ ಮಾಡ್‌ಕೊಳ್ಳಬೇಡಿ…!

Pinterest LinkedIn Tumblr

ಇವಾಗ ಸೆಲ್ಫಿ ಯುಗ.ನಮ್ಮ ಕೈನಲ್ಲಿ ಮೊಬೈಲ್ ಇದ್ದರೆ ಸಾಕು ಸೆಲ್ಫಿ ಪೋಟೋಗಳದ್ದೆ ಕಾರು ಬಾರು.ಈಗಂತೂ ಸೆಲ್ಫಿಗೆ ಇಂತದ್ದೇ ಸ್ಥಳ,ಜಾಗ,ಸಮಯ ಅಂತೇನೂ ಇಲ್ಲ. ಎಲ್ಲೆಂದರೆ ಅಲ್ಲೇ,ಹೇಗೆಂದರೆ ಹಾಗೆ ಸೆಲ್ಫಿ ಪೋಟೋ ತೆಗೆದುಕೊಳ್ಳುತ್ತಾರೆ.ಊಟಕ್ಕೆ, ಶಾಪಿಂಗ್‌ಗೆ, ಪಾರ್ಟಿಗೆ, ಅಥವಾ ಕಾರಣವೇ ಇಲ್ಲದೇ ಸುಮ್ಮನೇ ಸೆಲ್ಫಿ ಜೊತೆಗಿರಬೇಕು.

ಸೆಲ್ಫಿ ಭಯಾನಕತೆ…
ಈಗ ಸೆಲ್ಫಿ ಫೋಟೋಗಳಿಗಾಗಿಯೇ ಹೊಸ ಹೊಸ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ಫೋನ್’ಗಳು ಬರುತ್ತಿವೆ.ಈ ಸೆಲ್ಫಿ ಫೋಟೋ ತೆಗೆದುಕೊಳ್ಳುವುದು, ಎಷ್ಟು ರೋಮಾಂಚನವಾಗಿರುತ್ತೋ ಅಷ್ಟೇ ಭಯಾನಕತೆಯೂ ಇದೆ.ಈ ಸೆಲ್ಫಿ ಹುಚ್ಚಿನಿಂದಾಗಿ ವಿಶ್ವದಾದ್ಯಂತ ಸಾವಿರಾರು ಜನರು ಸಾವನಪ್ಪಿದ್ದಾರೆ.ಅಂಕಿ ಅಂಶಗಳ ಪ್ರಕಾರ ಶೇಕಡಾ 60ರಷ್ಟು ಪಾಲು ಭಾರತದಲ್ಲಿದೆ.

ಸೆಲ್ಫಿ ಮಾನಸಿಕ ರೋಗ…
ಈ ಮಧ್ಯೆ ನಡೆದ ಸಂಶೋಧನೆಯೊಂದು ಸೆಲ್ಫಿಯನ್ನು ಮಾನಸಿಕ ರೋಗ ಎಂದು ಘೋಷಣೆ ಮಾಡಿದೆ. ಯುಕೆ ನ ನಾಟ್ಟಿಂಗ್ಹ್ಯಾಮ್ ಟ್ರೆಂಟ್ ಯುನಿವರ್ಸಿಟಿ ಮ್ಯಾನೇಜ್ಮೆಂಟ್ ಶಾಲೆಯಲ್ಲಿ ಈ ಅಧ್ಯಯನ ಮಾಡಿದ್ದಾರೆ.ಅವಶ್ಯಕತೆಗಿಂತ ಹೆಚ್ಚು ಸೆಲ್ಫಿ ತೆಗೆಯುವುದು ಹಾಗೂ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದು ಒಂದು ರೋಗ. ಇದನ್ನು ಸೆಲ್ಫಿಟಿಸ್ ಎಂದು ಕರೆಯಲಾಗುತ್ತದೆ. ಸೆಲ್ಫಿಟಿಸ್ ಅನೇಕ ವರ್ಷಗಳಿಂದ ಕೇಳಿ ಬರುತ್ತಿರುವ ಶಬ್ಧ. ಆದರೆ ಇವಾಗ ವೈದ್ಯರು ಇದಕ್ಕೆ ಮಾನಸಿಕ ರೋಗದ ರೂಪ ಕೊಟ್ಟಿದ್ದಾರೆ.

ಸೆಲ್ಫಿ ರೋಗದ 3 ಹಂತಗಳು…
ಸಂಶೋಧನಕಾರರು ಇದನ್ನು ಸೆಲ್ಫಿಟಿಸ್ ಬಿಹೇವಿಯರ್ ಸ್ಕೇಲ್ ಎಂದು ಕರೆದಿದ್ದಾರೆ. ಇದರಲ್ಲಿ ಮೂರು ಹಂತವಿರುತ್ತದೆ. ಪ್ರಾರಂಭದಲ್ಲಿ ಈ ರೋಗಿಗಳು ದಿನಕ್ಕೆ ಮೂರು ಸಲ ಮಾತ್ರ ಫೋಟೋ ತೆಗೆದುಕೊಳ್ಳುತ್ತಾರೆ.ಆದರೆ ಸಾರ್ವಜನಿಕ ಜಾಲತಾಣಕ್ಕೆ ಹಾಕುವುದಿಲ್ಲ. ಎರಡನೇ ಹಂತದಲ್ಲಿ ಸೆಲ್ಫಿ ತೆಗೆಯುವ ಪ್ರಮಾಣ ಹೆಚ್ಚಾಗುವ ಜೊತೆಗೆ ಸಾರ್ವಜನಿಕ ಜಾಲತಾಣಕ್ಕೆ ಫೋಟೋ ಹಾಕುವ ಚಟ ಶುರುವಾಗುತ್ತದೆ. ದಿನದಲ್ಲಿ ಹೆಚ್ಚೆಚ್ಚು ಫೋಟೋ ಹಾಕಲು ಮನಸ್ಸು ಹೇಳುತ್ತದೆ . ಈ ಕ್ರಿಯೆ ತುಂಬಾ ಜಾಸ್ತಿ ಆದಲ್ಲಿ ಅದನ್ನು ಕೊನೆಯ ಹಂತವೆಂದು ಹೇಳಬಹುದು.

ಸೆಲ್ಫಿ ಹುಚ್ಚಿಗೆ ಸರಿಯಾದ ಕಾರಣ…
ಸೆಲ್ಫಿ ಹುಚ್ಚಿಗೆ ಬಲಿಯಾಗುತ್ತಿರುವ ಪ್ರಕರಣಗಳನ್ನು ಹಲವಾರು ದೇಶಗಳು ಗಹನವಾಗಿ ತೆಗೆದುಕೊಂಡಿವೆ. ಇದರ ವಿಚಾರವಾಗಿ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಆದರೆ ಅಷ್ಟೊಂದು ಸೆಲ್ಫಿ ಹುಚ್ಚಿಗೆ ಸರಿಯಾದ ಕಾರಣವನ್ನು ಕಂಡುಇಡಿಯಲು ಆಗುತ್ತಿಲ್ಲ. ಆತ್ಮವಿಶ್ವಾಸದ ಕೊರತೆ, ಗಮನ ಸೆಳೆಯಲು, ಬೇರೆಯವರಿಗಿಂತ ಮುಂದಿರಲು ಬಯಸುವವರು ಈ ಹುಚ್ಚು ಹಚ್ಚಿಕೊಳ್ತಾರೆ ಎಂದು ನಂಬಲಾಗಿದೆ. ದೃಢ ನಿರ್ಧಾರ ಮಾಡಿದಲ್ಲಿ ಈ ರೋಗದಿಂದ ಸುಲಭವಾಗಿ ಹೊರಗೆ ಬರಬಹುದಾಗಿದೆ.

ಸೋ ಸೆಲ್ಪಿ ಪ್ರೀಯರೇ ನೀವೇ ನಿರ್ಧಾರ ಮಾಡಿ ಉತ್ತಮ ಜೀವನ ಬೇಕೇ ಅಥವಾ ಸೆಲ್ಫಿಟಿಸ್ ಬಿಹೇವಿಯರ್ ಸ್ಕೇಲ್ ಬೇಕಾ…?

Comments are closed.