ಕರಾವಳಿ

ಕಾಫಿ ಹುಡಿಯಿಂದ ಟಾನ್ ನಿವಾರಣೆಯ ಅದ್ಭುತ ಹೋಂ ರೆಮೆಡಿ

Pinterest LinkedIn Tumblr

ಕತ್ತು, ಮೊಣಕೈ, ಮೊಣಕಾಲು ಭಾಗಗಳಲ್ಲಿ ಕಪ್ಪಗಾಗಿದೆ ಎಂದು ಚಿಂತಿಸುವವರಿಗೆ ಇದು ಉಪಕಾರಿ. ಹೀಗೆ ಕಪ್ಪಾಗುವುದನ್ನು ಟ್ಯಾನ್ ಎನ್ನುತ್ತಾರೆ. ಈ ಟ್ಯಾನ್ ಫಾರ್ಮೇಷನ್ ಇರುವ ಕಡೆ ಅದನ್ನು ತೊಲಗಿಸುವುದು ಹೇಗೆಂದು ತಿಳಿದುಕೊಳ್ಳೋಣ. ಈ ಸಹಜಸಿದ್ಧವಾದ ಹೋಂ ರೆಮೆಡಿಗಾಗಿ 3 ವಸ್ತುಗಳ ಅವಶ್ಯಕತೆ ಇದೆ. ಮುಖ್ಯವಾಗಿ ಯಾವುದಾದರೊಂದು ಕಾಫಿ ಪುಡಿ. ಎರಡನೆಯದು ನಿಂಬೆಹಣ್ಣು, ಮೂರನೆಯದಾಗಿ ರೋಜ್ ವಾಟರ್…ಈ ಮೂರು ವಸ್ತುಗಳನ್ನೂ ಬಳಸಿ ದೇಹದಲ್ಲಿರುವ ಕಪ್ಪು ಭಾಗವನ್ನೂ, ಟಾನ್ ಅನ್ನು ಸುಲಭವಾಗಿ ಹೋಗಲಾಡಿಸಬಹದು. ತಯಾರಿಸುವುದು ಹೇಗೆಂದರೆ….

ಒಂದು ಬಟ್ಟಲಿನಲ್ಲಿ 2 ಚಮಚ ಕಾಫಿ ಪುಡಿ, ಸ್ವಲ್ಪ ನಿಂಬೆರಸದಲ್ಲಿ 1 ಟೀ ಚಮಚ ರೋಜ್ ವಾಟರ್ ಅನ್ನು ಹಾಕಿ ಚೆನ್ನಾಗಿ ಬೆರಸಿ ಮಿಶ್ರಣವನ್ನು ತಯಾರಿಸಿಕೊಳ್ಳಬೇಕು. ನಿಂಬೆಹಣ್ಣಿನ ಸಿಪ್ಪೆಯಿಂದ ಮಿಶ್ರಣವನ್ನು ತೆಗೆದುಕೊಂಡು ಕತ್ತು, ಮೊಣಕೈ, ಮೊಣಕಾಲು ಹೀಗೆ ಎಲ್ಲೆಲ್ಲಿ ಟಾನ್ ಇರುತ್ತದೆಯೋ ಆ ಭಾಗಗಳಲ್ಲಿ ಸವರುತ್ತಿರಬೇಕು. ಹೀಗೆ 5-10 ನಿಮಿಷಗಳ ಕಾಲ ಮಸಾಜ್ ಮಾಡಿ 10 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ತೊಳೆಯಬೇಕು.

ಇದು ಹೆಚ್ಚು ಪರಿಣಾಮಕಾರಿ ಹೋಂ ರೆಮೆಡಿ, ಕಪ್ಪು ಕಲೆಗಳನ್ನು ತೊಲಗಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುವಂತೆ ಮಾಡುತ್ತದೆ. ಕಾಫಿ ಪುಡಿಯಲ್ಲಿ ಆಂಟಿ ಆಕ್ಸಿಡೆಂಟ್ಸ್ ಹೇರಳವಾಗಿದ್ದು, ರಕ್ತ ಚಲನೆಗೂ, ಟ್ಯಾನ್ ಅನ್ನು ನಿವಾರಿಸುವುದಕ್ಕೂ ಚೆನ್ನಾಗಿ ಸಹಾಯವಾಗುತ್ತದೆ.

ಮತ್ತೊಂದು ಅದ್ಭುತವಾದ ಹೋಂ ರೆಮೆಡಿಯನ್ನು ನೋಡೋಣ…
ಮುಖ ಹಾಗೂ ಕತ್ತಿನ ಭಾಗದಲ್ಲಿ ಆಗುವ ಕಪ್ಪು ಕಲೆಗಳಿಗೆ ಇದು ಹೆಚ್ಚಿನ ಉಪಯುಕ್ತ ಎಂದು ಇದನ್ನು ಉಪಯೋಗಿಸಿದವರು ಹೇಳುತ್ತಾರೆ. ಕಪ್ಪು ಕಲೆಗಳಾದ ಜಾಗದಲ್ಲಿ ಹಸಿ ಪಪ್ಪಾಯಿ ಹಣ್ಣಿನ ತಿರುಳನ್ನು ಲೇಪಿಸಿಕೊಂಡು ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ತೊಳೆಯುವುದರಿಂದ…ಸ್ವೇಧ ರಂಧ್ರಗಳನ್ನು ಸ್ವಚ್ಚಗೊಳಿಸಿ, ಆ ಭಾಗದಲ್ಲಿ ಏರ್ಪಟ್ಟಿರುವ ಕಪ್ಪು ಕಲೆಗಳು ಮಾಯವಾಗುತ್ತವೆ ಎಂದು ಅರೋಗ್ಯ ತಜ್ಞರು ತಿಳಿಸಿದ್ದಾರೆ.

Comments are closed.