ಕರಾವಳಿ

ಯಾವ ಯಾವ ರೋಗಗಳನ್ನು ವಾಸಿ ಮಾಡುತ್ತೆ ಈ ಗುಲ್ಕನ್ ಗೋತ್ತೆ?

Pinterest LinkedIn Tumblr

ಚಿಕ್ಕ ವಯಸಿನಲ್ಲಿ ಹೆಚ್ಚಾಗಿ ತಿನ್ನುವ ಈ ಗುಲ್ಕನ್ ಹಲವು ರೋಗಗಳನ್ನು ಹೋಗಲಾಡಿಸುತ್ತೆ ಮತ್ತು ನಿಮ್ಮ ದೇಹಕ್ಕೆ ಇದರಿಂದ ಆಗುವ ಲಾಭಗಳು ಯಾವ ಯಾವ ಅನ್ನೋದು ಇಲ್ಲಿದೆ ನೋಡಿ.

ದೇಹಕ್ಕೆ ತಂಪು ನೀಡುತ್ತದೆ: ಗುಲ್ಕಂದ್​​ ದೇಹದ ತಾಪವನ್ನು ಕಡಿಮೆ ಮಾಡಿ , ಸನ್​ ಸ್ಟ್ರೋಕ್​ಗಳಿಂದ ದೇಹವನ್ನು ಕಾಪಾಡುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಹುಣ್ಣಾಗುವ ಸಮಸ್ಯೆ ಶಮನವಾಗುತ್ತದೆ. ಜೊತೆಗೆ ಹೊಟ್ಟೆಯಲ್ಲಿನ ಆ್ಯಸಿಡ್​ ಅಂಶವನ್ನು ಸರಿದೂಗಿಸಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.

ರಕ್ತ ಶುದ್ದಿಗೊಳಿಸುತ್ತದೆ: ಗುಲ್ಕಂದ್​​ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ರಕ್ತವನ್ನು ಶುದ್ದಿಗೊಳಿಸುತ್ತದೆ. ಈ ಮೂಲಕ ತ್ವಚೆಯ ಸಮಸ್ಯೆಗಳಾದ ಮೊಡವೆ, ಕೆಂಪು ಕಲೆಗಳು, ಬ್ಲ್ಯಾಕ್​ಹೆಡ್ಸ್​ನ್ನು ತೊಲಗಿಸುತ್ತದೆ, ಮತ್ತು ಬಾರದಂತೆ ತಡೆಯುತ್ತದೆ.

ಒತ್ತಡವನ್ನು ಶಮನಮಾಡುತ್ತದೆ: ಗುಲ್ಕಂದ್​ ದೇಹಕ್ಕೆ ತಂಪು ನೀಡುವುದಲ್ಲದೇ ದೇಹದಲ್ಲಿನ ನರಗಳ ಮೇಲೆ ಬೀಳುವ ಒತ್ತಡವನ್ನು ನಿವಾರಿಸಿ ಪೋಷಿಸುತ್ತದೆ.

ಋತುಚಕ್ರ ಆರಂಭದ ದಿನಗಳ ನೋವು ನಿವಾರಿಸುತ್ತದೆ: ಋತುಚಕ್ರ ಆರಂಭದ ದಿನಗಳಲ್ಲಿ ಕಾಡುವ ಅತಿಯಾದ ಹೊಟ್ಟೆ ಮತ್ತು ಬೆನ್ನು ನೋವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಅತಿ ರಕ್ತಸ್ರಾವವನ್ನು ತಡೆದು ಅನೇಮಿಯಾ ಸಮಸ್ಯೆಯಿಂದ ದೂರವಿರಿಸುತ್ತದೆ.

ಮೂಗಿನಲ್ಲಿ ರಕ್ತಬರುವುದನ್ನು ತಡೆಯುತ್ತದೆ: ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಮಕ್ಕಳಲ್ಲಿ ಈತರಹ ಮೂಗಿನಲ್ಲಿ ರಕ್ತ ಬರುವ ಸಮಸ್ಯೆ ಕಾಣಿಸುತ್ತದೆ. ನಿಯಮಿತವಾಗಿ ಗುಲ್ಕಂದ್​ ಸೇವನೆಯಿಂದ ಈ ಸಮಸ್ಯೆಯನ್ನು ತಡೆಯಬಹುದು.

Comments are closed.