ಕರಾವಳಿ

ಮೊಸರಲ್ಲಿ ಈ ಪದಾರ್ಥವನ್ನ ರಾತ್ರಿ ನೆನೆಸಿಟ್ಟು ಬೆಳ್ಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಲಾಭ ಬಲ್ಲಿರಾ…?

Pinterest LinkedIn Tumblr

ಮೆಂತ್ಯದಕಾಳನ್ನು ರಾತ್ರಿ ಮೊಸರಲ್ಲಿ ನೆನೆಸಿಟ್ಟು ಪ್ರಾತಃಕಾಲ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವಿಸುದರಿಂದ ಮಧುಮೇಹವು ನಿಯಂತ್ರಣದಲ್ಲಿರುವುದು. ಮೆಂತ್ಯ ಸೊಪ್ಪಿನಿಂದ ಪಲ್ಯ,ಹುಳಿ ಅಷ್ಟೇ ಅಲ್ಲದೆ ವಡೆ,ಪಕೋಡ,ತಂಬುಳಿ,ಪತ್ರೊಡೆ ಮುಂತಾದ ರುಚಿಕರ ಖಾದ್ಯಗಳನ್ನು ತಯಾರಿಸುತ್ತಾರೆ.

ನೀವು ಮೊದಲು ಮೆಂತ್ಯವನ್ನು ಚೆನ್ನಾಗಿ ನೀರಿನಲ್ಲಿ ನೆನಸಿ ನುಣ್ಣಗೆ ರುಬ್ಬಿ ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಎರಡು ಗಂಟೆಗಳ ಬಳಿಕ ಮುಖ ತೊಳೆದುಕೊಳ್ಳಬೇಕು.ಈ ರೀತಿ ಮಾಡುತ್ತಾ ಬಂದರೆ ಮುಖದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು. ಮೆಂತ್ಯದ ಸೊಪ್ಪನ್ನು ಆಗಾಗ ಆಹಾರದಲ್ಲಿ ಬಳಸುವುದರಿಂದ ಮೈ,ಕೈ ನೋವು,ಬೆನ್ನು ನೋವು,ಸೊಂಟ ನೋವು ಇತ್ಯಾದಿಗಳನ್ನು ನಿವಾರಿಸಿಕೊಳ್ಳಬಹುದು.

ಮೆಂತ್ಯದ ಸೊಪ್ಪಿನ ಪಲ್ಯ ತಯಾರಿಸಿ ಕ್ರಮವಾಗಿ ಸೇವಿಸುದರಿಂದ ಶ್ವಾಸಕೋಶ,ಹೃದಯ ಹಾಗೂ ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳು ವಾಸಿಯಾಗುವುವು. ಮೆಂತ್ಯದ ಕಾಳನ್ನು ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ಆರಿಸಿ ತಲೆಗೆ ಹಚ್ಚುತ್ತಾ ಬಂದರೆ ಅಪ್ರಾಪ್ತ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು ಅಥವಾ ಮೆಂತ್ಯವನ್ನು ತೆಂಗಿನ ಹಾಲಿನಲ್ಲಿ ನುಣ್ಣಗೆ ರುಬ್ಬಿ ತಲೆಗೆ ಹಚ್ಚಿಕೊಂಡು ಎರಡು ಗಂಟೆಗಳ ಬಳಿಕ ತಲೆಗೆ ಸ್ನಾನ ಮಾಡಿಕೊಂಡರೂ ಕೂದಲು ಕಪ್ಪಾಗಿರುವುದಲ್ಲದೆ ಸೊಂಪಾಗಿ ಬೆಳೆಯುವುದು.

Comments are closed.