ಕರಾವಳಿ

ವಕ್ವಾಡಿ: 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, ರಜತ ಮಹೋತ್ಸವ; ವಿವಿಧ ಕಾರ್ಯಕ್ರಮ

Pinterest LinkedIn Tumblr

ಕುಂದಾಪುರ: ತಾಲೂಕಿನ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಾರಂಭ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಬೆಳಿಗ್ಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಕುಂದಾಪುರದಿಂದ ಕಾರು, ಬೈಕ್ ರ್‍ಯಾಲಿ ಮೂಲಕ ಪುರಮೆರವಣಿಗೆಯಲ್ಲಿ ವಕ್ವಾಡಿಯಲ್ಲಿ ಬರಮಾಡಿಕೊಳ್ಳಲಾಯಿತು. ಇಲ್ಲಿನ ನೂತನ ಮುಖಮಂಟಪದ ಹಾದಿ ಮೂಲಕವಾಗಿ ಪೂರ್ಣ ಕುಂಭ ಸ್ವಾಗತದೊಂದಿಗೆ ದೇವಸ್ಥಾನ ತಲುಪಿದ ಗಣಪನನ್ನು ಸಕಲ ಧಾರ್ಮಿಕ ವಿಧಿವಿದಾನದೊಂದಿಗೆ ಪ್ರತಿಷ್ಟಾಪಿಸಲಾಯಿತು.

 

ಈ ಸಂದರ್ಭ ದಾನಿಗಳಾದ ವಕ್ವಾಡಿ ಗಣೇಶ್ ಆಚಾರ್ಯ ಸಾಗರ, ದುಬೈ ಫಾರ್ಚೂನ್ ಗ್ರೂಫ್ಸ್ ಆಪ್ ಹೋಟೇಲ್ ಆಡಳಿತ ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಆಡಳಿತ ಮೊಕ್ತೇಸರ ವಿ. ಲಕ್ಷ್ಮೀನಾರಾಯಣ ಹೊಳ್ಳ ಕಟ್ಕೆರೆ, 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಕೆ. ನಾರಾಯಣ ಶೆಟ್ಟಿ, ಅಧ್ಯಕ್ಷ ವಕ್ವಾಡಿ ಮಧುಸೂದನ್ ಆಚಾರ್ ಸಾಗರ, ಉಪಾಧ್ಯಕ್ಷ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಉಪಕಾರ್ಯದರ್ಶಿ ಮನೋಹರ್ ಆಚಾರ್ಯ ವಕ್ವಾಡಿ, ಕೋಶಾಧಿಕಾರಿ ಜಗದೀಶ್ ಆಚಾರ್, ಉಪಕೋಶಾಧಿಕಾರಿ ಗಣೇಶ್ ದೇವಾಡಿಗ ಹಾಗೂ ಪದಾಧಿಕಾರಿಗಳಿದ್ದರು.

ರಜತ ಮಹೋತ್ಸವ ಪ್ರಯುಕ್ತ ಇಂದಿನಿಂದ ಆರಂಭಗೊಳ್ಳುವ ವಿವಿಧ ಕಾರ್ಯಕ್ರಮವೂ ಸೆ.17ರವರೆಗೂ ನಡೆಯಲಿದೆ. ನಾಳೆ (ಶುಕ್ರವಾರ) ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದ್ದು ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಸೇವಾಕರ್ತರಾಗಿದ್ದಾರೆ. ಇನ್ನು ನಿತ್ಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು, ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ. ಸೆ.17 ಸೋಮವಾರ 2.30ಕ್ಕೆ ಗಣಪತಿಯ ವಿಸರ್ಜನಾ ಮೆರವಣಿಗೆ ವಿಶೇಷ ಆಕರ್ಷಣೆಯೊಂದಿಗೆ ನಡೆಯಲಿದೆ.

Comments are closed.