ಕರಾವಳಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿದರೆ ಅರೋಗ್ಯಕರ…!

Pinterest LinkedIn Tumblr

ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿದರೆ ಆರೋಗ್ಯದ ಜೊತೆಗೆ ಸುಖ, ಸಂಪತ್ತು ಲಭಿಸಲಿದೆ ಮತ್ತು ತಾಮ್ರದ ಪಾತ್ರೆಯಲ್ಲಿಟ್ಟ ನೀರು ಅಮೃತಕ್ಕೆ ಸಮಾನ ಎನ್ನುವುದನ್ನು ಶಾಸ್ತ್ರದಲ್ಲಿಯೇ ಹೇಳಲಾಗಿದೆ. ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದ ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಪಥ್ಯಕರ ಎಂಬುದು ಸಾಬೀತಾಗಿದೆ. ರಾತ್ರಿ ತಾಮ್ರದ ಪಾತ್ರೆ ಅಥವಾ ಚಂಬಿನಲ್ಲಿ ನೀರನ್ನು ಶೇಖರಣೆ ಮಾಡಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಲಾಭ.

ಪಚನಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ದೇಹದ ಮೇಲಿನ ಗಾಯವನ್ನು ಬೇಗ ಗುಣಪಡಿಸುತ್ತದೆ.
ಚರ್ಮ ಆರೋಗ್ಯಕರವಾಗಿರುವಂತೇ ಮಾಡುತ್ತದೆ.
ಮೆದುಳು ಚುರುಕಾಗುತ್ತದೆ. ನೆನಪಿಗೆ ಶಕ್ತಿ ಬೆಳವಣಿಗೆಗೂ ಸಹಕಾರಿ.

ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ: ತಾಮ್ರವನ್ನು ಸ್ವಭಾವದಲ್ಲಿ ಒಲಿಗೊಡೈನಾಮಿಕ್ ಎನ್ನಲಾಗುತ್ತದೆ ಮತ್ತು ಇದು ಬ್ಯಾಕ್ಟೀರಿಯಾವನ್ನು ತುಂಬಾ ಪರಿಣಾಮಕಾರಿಯಾಗಿ ಕೊಲ್ಲುತ್ತದೆ. ಇದರಿಂದಾಗಿ ಸಾಮಾನ್ಯ ನೀರಿನಿಂದ ಬರುವ ಭೇದಿ, ಆಮಶಂಕೆ ಮತ್ತು ಕಾಮಾಲೆಯನ್ನು ತಡೆಯುತ್ತದೆ. ನೀರು ಕಲುಷಿತವಾಗಿದೆಯೆಂದು ನಿಮಗನಿಸಿದರೆ ಆಗ ಅದನ್ನು ಕುಡಿಯುವ ಮೊದಲು ತಾಮ್ರದ ಪಾತ್ರೆಯಲ್ಲಿಡಿ ಮತ್ತು ಇದರ ಬಳಿಕ ಆರೋಗ್ಯಕರ ಮತ್ತು ಸ್ವಚ್ಛ ನೀರನ್ನು ಕುಡಿಯಿರಿ.

ಥೈರಾಯ್ಡ್ ಗ್ರಂಥಿಗಳ ಕಾರ್ಯ ನಿಯಂತ್ರಣ: ಥೈರಾಯ್ಡ್ ಕಾಯಿಲೆ ಎದುರಿಸುವ ಹೆಚ್ಚಿನ ಜನರಲ್ಲಿ ಕಾಣಿಸುವ ಸಾಮಾನ್ಯ ಸಮಸ್ಯೆಯೆಂದರೆ ಅವರ ದೇಹದಲ್ಲಿ ತಾಮ್ರದ ಮಟ್ಟ ತುಂಬಾ ಕಡಿಮೆಯಿರುತ್ತದೆ. ತಾಮ್ರದ ಕೊರತೆಯಿಂದಾಗಿ ಗ್ರಂಥಿಗಳ ಕಾರ್ಯಕ್ಕೆ ತೊಂದರೆಯಾಗಬಹುದು. ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟಿರುವ ನೀರನ್ನು ಕುಡಿದರೆ ಈ ಸಮಸ್ಯೆ ನಿವಾರಣೆಯಾಗಿ, ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಥೈರಾಯ್ಡ್ ಕಾಯಿಲೆ ಬಗ್ಗೆ ಮತ್ತಷ್ಟು ತಿಳಿಯಿರಿ

ಸಂಧಿವಾತ ಮತ್ತು ಊತ ಕೀಲುಗಳ ಶಮನ: ತಾಮ್ರದಲ್ಲಿ ಉರಿಯೂತ ವಿರೋಧಿ ಗುಣಗಳು ಹೆಚ್ಚಾಗಿವೆ. ಈ ವಿಶೇಷ ಗುಣದಿಂದ ಗಂಟುಗಳಲ್ಲಿ ಸಂಧಿವಾತ ಮತ್ತು ರೂಮಟಾಯ್ಡ್ ಆರ್ಥ್ರೈಟಿಸ್ ನಿಂದ ಉಂಟಾಗುವ ಸೆಳೆತ, ನೋವನ್ನು ಕಡಿಮೆ ಮಾಡುತ್ತದೆ. ತಾಮ್ರದ ಪಾತ್ರೆಯಲ್ಲಿ ಶೇಖರಿಸಿರುವ ನೀರನ್ನು ಕುಡಿದರೆ ಸೆಳೆತ, ನೋವನ್ನು ಕಡಿಮೆ ಮಾಡಬಹುದು. ಸಂಧಿವಾತ ಹಾಗೂ ರೂಮಟಾಯ್ಡ್ ಆರ್ಥ್ರೈಟಿಸ್ ಬಗ್ಗೆ ಮತ್ತಷ್ಟು ತಿಳಿಯಿರಿ.

ಚರ್ಮದ ಆರೋಗ್ಯ: ಆಯುರ್ವೇದ ತಜ್ಞರು ಹೇಳುವ ಪ್ರಕಾರ ತಾಮ್ರದ ಪಾತ್ರೆಯಲ್ಲಿ ಹಾಕಿರುವ ನೀರನ್ನು ನಿಯಮಿತವಾಗಿ ಬೆಳಗಿನ ಜಾವ ಕುಡಿಯುದರಿಂದ ಮೊಡವೆ ಮುಕ್ತ ಮತ್ತು ಸುಂದರ ತ್ವಚೆ ಪಡೆಯಬಹುದು.

ವಯಸ್ಸಾಗುವುದನ್ನು ನಿಧಾನವಾಗಿಸುತ್ತದೆ: ನಿಮ್ಮ ಮುಖದಲ್ಲಿ ನೆರಿಗೆಗಳು ಕಾಣಿಸಿಕೊಂಡರೆ ಆಗ ತಾಮ್ರವು ನೈಸರ್ಗಿಕ ಪರಿಹಾರವಾಗಿದೆ. ಆ್ಯಂಟಿ ಆಕ್ಸಿಡೆಂಟ್ ಗುಣ ಮತ್ತು ಜೀವಕೋಶ ಬೆಳೆಸುವ ಗುಣದಿಂದಾಗಿ ಮುಕ್ತ ರಾಡಿಕಲ್ ವಿರುದ್ಧ ತಾಮ್ರವು ಹೋರಾಡುತ್ತದೆ. ನೆರಿಗೆ ಉಂಟಾಗುವುದನ್ನು ತಡೆದು ಹೊಸ ಹಾಗೂ ಆರೋಗ್ಯಕರ ತ್ವಚೆ ನಿರ್ಮಿಸಿ, ಹಳೆಯ ಮತ್ತು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ.

ಜೀರ್ಣಾಂಗವ್ಯೂಹವು ಉತ್ತಮವಾಗಿ ಕಾರ್ಯನಿರ್ವಹಿಸಲು: ಆ್ಯಸಿಡಿಟಿ, ಗ್ಯಾಸ್ ಅಥವಾ ಕೆಲವೊಂದು ಆಹಾರಗಳು ಜೀರ್ಣವಾಗದೆ ಇರುವುದು ಸಾಮಾನ್ಯ ಸಮಸ್ಯೆಗಳು. ಇಂತಹ ಸಮಸ್ಯೆಗಳಿದ್ದರೆ ತಾಮ್ರವು ನಿಮಗೆ ನೆರವಾಗುತ್ತದೆ. ಆಯುರ್ವೇದದ ಪ್ರಕಾರ ಹೊಟ್ಟೆಯನ್ನು ವಿಷ ಪದಾರ್ಥಗಳಿಂದ ಮುಕ್ತಗೊಳಿಸಬೇಕೆಂದರೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟಿರುವ ನೀರನ್ನು ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ತೂಕ ಇಳಿಸಲು: ತೂಕ ಇಳಿಸಲು ನೀವು ಅನುಸರಿಸುತ್ತಿರುವ ಆಹಾರಕ್ರಮವು ಕೆಲಸ ಮಾಡುತ್ತಿಲ್ಲವೆಂದಾದರೆ ಆಗ ನೀವು ತಾಮ್ರದ ಪಾತ್ರೆಯಲ್ಲಿ ಶೇಖರಿಟ್ಟಿಸಿರುವ ನೀರನ್ನು ನಿಯಮಿತವಾಗಿ ಕುಡಿಯಲು ಪ್ರಯತ್ನಿಸಿ. ನಿಮ್ಮ ಜೀರ್ಣಕ್ರಿಯೆಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದಲ್ಲದೆ ತಾಮ್ರವು ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸಿ ಅದು ತುಂಬಾ ಪರಿಣಾಮಕಾರಿ ಯಾಗಿ ಹೊರಹಾಕುತ್ತದೆ. ನಿಮ್ಮ ದೇಹಕ್ಕೆ ಬೇಕಾಗಿರುವುದನ್ನು ಮಾತ್ರ ಉಳಿಸಿ, ಬಾಕಿಯಿರುವುದನ್ನು ಹೊರಹಾಕುತ್ತದೆ.

ರಕ್ತಹೀನತೆ ತಡೆಯುತ್ತದೆ: ನಮ್ಮ ದೇಹದಲ್ಲಿ ನಡೆಯುವ ಹೆಚ್ಚಿನ ಕಾರ್ಯಗಳಿಗೆ ತಾಮ್ರವು ಬೇಕಾಗುತ್ತದೆ ಎನ್ನುವುದು ಅತ್ಯಂತ ಮಹತ್ವದ ವಿಚಾರ. ಜೀವಕೋಶ ನಿರ್ಮಾಣದಿಂದ ಹಿಡಿದು, ಕಬ್ಬಿಣ ಹೀರುವಿಕೆ ಸಹಿತ ನಿಮ್ಮ ದೇಹಕ್ಕೆ ತಾಮ್ರವು ಪ್ರಮುಖ ಖನಿಜಾಂಶವಾಗಿದೆ. ಈ ಕಾರಣದಿಂದಾಗಿ ರಕ್ತಹೀನತೆ ಬರದಂತೆ ತಡೆಯುತ್ತದೆ.

ಹೃದಯದ ಆರೋಗ್ಯ ಮತ್ತು ಅಧಿಕ ರಕ್ತದೊತ್ತಡ ತಡೆಯುತ್ತದೆ: ಅಮೆರಿಕಾ ಕ್ಯಾನ್ಸರ್ ಸೊಸೈಟಿಯ ಪ್ರಕಾರ ತಾಮ್ರದಲ್ಲಿ ರಕ್ತದೊತ್ತಡ ಹೃದಯ ಬಡಿತ ನಿಯಂತ್ರಿಸುವ ಮತ್ತು ಕೊಲೆಸ್ಟ್ರಾಲ್ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಲೋಳೆಯ ಕ್ರೋಢೀಕರಣ ತಡೆಗಟ್ಟಲು ಸಹಕಾರಿ ಮತ್ತು ರಕ್ತನಾಳಗಳು ಹಿಗ್ಗುವಂತೆ ಮಾಡಿ ಹೃದಯಕ್ಕೆ ರಕ್ತವು ಸರಿಯಾಗಿ ಪೂರೈಕೆಯಾಗುವಂತೆ ಮಾಡುತ್ತದೆ. ಅತ್ಯುತ್ತಮ ಫಲಿತಾಂಶಕ್ಕಾಗಿ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟಿರುವ ನೀರನ್ನು ಕುಡಿಯಿರಿ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಹೆಚ್ಚಿಗೆ ತಿಳಿಯಿರಿ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ: ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವಂತಹ ಕ್ಯಾನ್ಸರ್, ರೋಗಿಗೆ ಮತ್ತು ಅವರ ಮನೆಯವರಿಗೆ ತುಂಬಾ ಸಂಕಷ್ಟವನ್ನು ಉಂಟುಮಾಡುತ್ತದೆ. ಇದಕ್ಕೆ ತಾಮ್ರವು ಹೇಗೆ ನೆರವಾಗುತ್ತದೆ? ತಾಮ್ರದಲ್ಲಿ ತುಂಬಾ ಬಲಿಷ್ಠವಾದ ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ. ಇದು ಮುಕ್ತ ರಾಡಿಕಲ್ ವಿರುದ್ಧ ಹೋರಾಡುತ್ತದೆ ಮತ್ತು ಅದರ ಕೆಟ್ಟ ಪರಿಣಾಮಗಳು ಇಲ್ಲದಂತೆ ಮಾಡುತ್ತದೆ. ಅಮೆರಿಕಾ ಕ್ಯಾನ್ಸರ್ ಸೊಸೈಟಿಯ ಪ್ರಕಾರ ತಾಮ್ರವು ಕ್ಯಾನ್ಸರ್ ನ್ನು ನಿಯಂತ್ರಿಸಲು ಎಷ್ಟು ನೆರವಾಗುತ್ತದೆ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ತಾಮ್ರದ ಕೆಲವೊಂದು ಸಂಕೀರ್ಣಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ.

Comments are closed.