ದೇಸೀಯ ಅಕ್ಕಿ ತಳಿಗಳು ಆಹಾರಕ್ಕೂ, ಔಷದಿಗೂ ಸೈ. ಕೆಲವೇ ದಶಕಗಳ ಹಿಂದೆ ಅನ್ನಕ್ಕೊಂದು, ಆವಲಕ್ಕಿಗೊಂದು, ಕುಚಲಕ್ಕಿಗೊಂದು ,ಕಜ್ಜಾಯಕ್ಕೊಂದು, ತಂಬಿಟ್ಟಿಗೊಂದು, ರೊಟ್ಟಿಗೊಂದು, ಬಾಣಂತಿಯರ ಊಟಕ್ಕೊಂದು, ಮಕ್ಕಳ ವಾಂತಿಭೇದಿಗೊಂದು, ಕೈಕಾಲು ನೋವಿಗೊಂದು, ಎದೆನೋವಿಗೆ ಮತ್ತೊಂದು, ಸರ್ಪಸುತ್ತಿಗೆ ಸಹ ದೇಸಿ ಅಕ್ಕಿಯೇ ಔಷಧವಾಗಿತ್ತು. ದೊಡ್ಡ ಬೈರನೆಲ್ಲು, ನವರ, ಕರಿಭತ್ತ ಮತ್ತು ದೊಡ್ಡಿ ಭತ್ತ ಸೇರಿದಂತೆ ಹಲವು ಕೆಂಪಕ್ಕಿ ತಳಿಗಳು ಅನೇಕ ಕಾಯಿಲೆಗಳಿಗೆ ಔಷಧಿ.
ಕೆಂಪಕ್ಕಿ ಆರೋಗ್ಯಕರ ಗುಣಗಳು ಗೊತ್ತಾದ್ಮೇಲೆ ಸಣ್ಣಗಾಗಬೇಕು ಅಂತ ಅನ್ನ ಬಿಟ್ಟವರೆಲ್ಲ ಕೆಂಪಕ್ಕಿ ಮೊರೆ ಹೋಗ್ತೀರಾ…..!
ಕೆಂಪಕ್ಕಿ ಮಧುಮೇಹ ತಡೆಯುತ್ತದೆ.
ಕೆಂಪು ಅಕ್ಕಿ ದಿನಕ್ಕೆ 100 ಕ್ಯಾಲಿಯನ್ನು ಕಡಿಮೆ ಮಾಡುತ್ತದೆ.
ಕೆಂಪು ಅಕ್ಕಿ ಕ್ಯಾನ್ಸರ್ ತಡೆಯುತ್ತದೆ.
ಕೆಂಪು ಅಕ್ಕಿ ಜೀರ್ಣಾಂಗ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ.
ಕೆಂಪು ಅಕ್ಕಿ ಕೂದಲು ಕಾಂತಿ ಹೆಚ್ಚಿಸುತ್ತದೆ.
ಕೆಂಪು ಅಕ್ಕಿ ಚಿಕ್ಕ ಮಕ್ಕಳ ಬೆಳವಣಿಗೆಗೆ ಸಹಾಯವಾಗುತ್ತೆ.

Comments are closed.