ಕರಾವಳಿ

ನಿದ್ರೆ ಅತಿಯಾದರೆ ದೇಹಕ್ಕೆ ಅಗುವ ಸಮಸ್ಯೆಗಳ ಬಗ್ಗೆ ತಿಳಿಯಿರಿ.

Pinterest LinkedIn Tumblr

ನಿದ್ರೆಯು ಅವಶ್ಯಕ! ಮತ್ತು ಅದು ಪ್ರತಿಯೊಂದು ಜೀವಿಗೂ ಬಹಳ ಪ್ರಮುಖವಾದ ಜೀವನದ ಒಂದು ಭಾಗವಾಗಿದೆ. ಸರಿಯಾದ ನಿದ್ರೆಯು ನಮ್ಮನ್ನು ಬೆಳಗಿನ ಸಮಯ ಜಾಗೃತರಾಗಿ ಇರುವಂತೆ, ಏಕಾಗ್ರತೆ ಇರುವಂತೆ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ಇದು ನಮ್ಮ ದೈನಂದಿನ ಚಟುವಟಿಕೆಗಳ ಆಯಾಸವನ್ನು ಬಗೆಹರಿಸಲು ಮತ್ತು ದೇಹಕ್ಕೆ ಶಕ್ತಿ ನೀಡಲು ನೆರವಾಗುತ್ತದೆ. ಇದರ ಜೊತೆಗೆ ಸರಿಯಾಗಿ ನಿದ್ರೆ ಮಾಡುವುದು, ಒಬೆಸಿಟಿ, ಮಧುಮೇಹ, ಅಕಾಲಿಕ ಸಾವು, ಹೃದಯ ಸಂಬಂಧಿ ಕಾಯಿಲೆ ಮುಂತಾದ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ.

ಆದರೆ, ಅತಿಯಾಗಿ ನಿದ್ರೆ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ, ಸರಿಯಾದ ಆರೋಗ್ಯಕರ ಗುಣಮಟ್ಟದ ನಿದ್ರೆ ಮಾಡುವುದು ಉತ್ತಮ. ಅತಿಯಾಗಿ ನಿದ್ರೆ ಮಾಡುವುದರಿಂದ ನಮ್ಮ ದೇಹಕ್ಕೆ ತೊಂದರೆಯಾಗುತ್ತದೆ.

“ರಾಷ್ಟ್ರೀಯ ನಿದ್ರಾ ಆಯೋಗದ ಪ್ರಕಾರ ಒಬ್ಬ ಮನುಷ್ಯ ಅವರ ವಯಸ್ಸಿನ ಆಧಾರದ ಮೇಲೆ ಎಷ್ಟು ಸಮಯ ನಿದ್ರೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ವಿವರಿಸಿದೆ.”

ಅತಿಯಾದ ನಿದ್ರೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ತಿಳಿಯಲು ಮುಂದೆ ಓದಿ.

೧.ಹೃದಯ ಸಂಬಂಧಿ ಕಾಯಿಲೆಗಳನ್ನು ಎದುರಿಸಬೇಕಾಗಬಹುದು
ಒಂದು ಅಧ್ಯಯನದ ಪ್ರಕಾರ ಅತಿ ಹೆಚ್ಚು ಅಥವಾ ಅತಿ ಕಡಿಮೆ ಸಮಯ ನಿದ್ರೆ ಮಾಡುವುದು, ಹೃದಯ ಇಲ್ಲದ ಸಮಸ್ಯೆಯನ್ನು ಎದುರಿಸಲು ಮತ್ತು ಒತ್ತಡವನ್ನು ಅನುಭವಿಸುವಂತೆ ಮಾಡುತ್ತದೆ ಎಂಬುವುದು ಇದರಲ್ಲಿ ಪ್ರಕಟವಾಗಿದೆ. ಕಡಿಮೆ ಸಮಯ ನಿದ್ರೆ ಮಾಡುವುದರಿಂದ ಲಕ್ವ ಹೊಡೆಯುವ ಸಾಧ್ಯತೆ ಶೇಕಡಾ18 ರಷ್ಟು ಹೆಚ್ಚಾಗುತ್ತದೆ.

೨.ಬೊಜ್ಜು ಬೆಳೆಯಲು ಸಹಾಯವಾಗುತ್ತದೆ
ಅತೀ ನಿದ್ರೆಗು ಮತ್ತು ಬೊಜ್ಜು ಬೆಳವಣಿಗೆಗು ಸಂಬಂಧವಿದೆ. ಹೆಚ್ಚು ಸಮಯ ನಿದ್ರೆ ಮಾಡುವಾಗ ಆ ಸಮಯದಲ್ಲಿ ನಿಮ್ಮ ದೈಹಿಕ ಚಟುವಟಿಕೆ ಸಂಪೂರ್ಣ ಇಲ್ಲವಾಗಿರುತ್ತದೆ. ಕಡಿಮೆ ಚಟುವಟಿಕೆ ಎಂದರೆ, ನಿಮ್ಮ ದೇಹ ಕ್ಯಾಲೊರಿಯನ್ನು ದಹಿಸಲು ಅಸಮರ್ಥವಾಗುತ್ತದೆ, ಇದು ನೀವು ತೂಕ ಪಡೆಯುವಂತೆ ಮಾಡುತ್ತದೆ.

೩.ಮಧುಮೇಹ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ
ಅತಿಯಾಗಿ ನಿದ್ರೆ ಮಾಡುವುದರಿಂದ ನಿಮ್ಮ ದೇಹದ ವ್ಯವಸ್ಥೆಯಲ್ಲಿ, ಗ್ಲುಕೋಸ್ ಪ್ರಮಾಣ ಹೆಚ್ಚಾಗಿ, ಮಧುಮೇಹ ಬರಲು ಕಾರಣವಾಗುತ್ತದೆ, ಮೊದಲೇ ಶುಗರ್ ಇದ್ದರೆ, ಟೈಪ್-2 ಗೆ ತಿರುಗಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಮೇಲೆ ಹೇಳಿರುವಂತೆ ಕಡಿಮೆ ದೈಹಿಕ ಚಟುವಟಿಕೆ, ನಿಮ್ಮ ದೇಹದಲ್ಲಿರುವ ಗ್ಲುಕೋಸ್ ಪ್ರಮಾಣ ಕರಗದೆ ಅಲ್ಲೇ ಉಳಿಯುವುದರಿಂದ ಶುಗರ್ ಹೆಚ್ಚಾಗುತ್ತದೆ.

೪.ನೀವು ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ
ಅತಿಯಾಗಿ ನಿದ್ರೆ ಮಾಡುವುದು, ನಿಮ್ಮ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಇದು ಖಿನ್ನತೆ ಒಳಗಾಗಲು ಒಂದು ಸಾಮಾನ್ಯ ಕಾರಣವಾಗಿದೆ. ಇದರಿಂದ ನಿಮ್ಮ ಮನಸ್ಥಿತಿಯಲ್ಲಿ ಏರುಪೇರಾಗುತ್ತದೆ ಮತ್ತು ಬೇಸರಕ್ಕೆ ಬೇಗನೆ ಒಳಗಾಗುವಿರಿ. ಹೆಚ್ಚು ಚುರುಕಾಗಿರಲು ಸರಿಯಾದ ನಿದ್ರೆ ಮಾಡುವುದು ತುಂಬಾನೇ ಸಹಾಯವಾಗುತ್ತದೆ. ಇದರಿಂದ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು.

೫.ತಲೆನೋವು ಮತ್ತು ಬೆನ್ನುನೋವು ಬರಲು ಕಾರಣವಾಗುತ್ತದೆ
ಮೆದುಳಿನ ನ್ಯೂಟ್ರೋ ಟ್ರ್ಯಾನ್ಸ್ ಮೀಟರ್ಸ್ ಗಳು ಅತಿಯಾದ ನಿದ್ರೆಯಿಂದ ಏರುಪೇರಾಗುತ್ತವೆ, ಇದು ನಮ್ಮ ಮನಸ್ಸಿನ ಮೇಲೆ ನೇರವಾಗಿ ಮತ್ತು ತಲೆನೋವು ಬರಲು ಕಾರಣವಾಗುತ್ತದೆ. ಅತಿಯಾಗಿ ನಿದ್ರೆ ಮತ್ತು ಕೆಲಸದ ಸಮಯದಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುವುದು, ನಂತರ ಬಂದು ಆಹಾರ ಸೇವಿಸಿ ಮಲಗುವುದು ಇದು ಕಡಿಮೆ ದೈಹಿಕ ಚಟುವಟಿಕೆ ಹೊಂದಿರುವುದರಿಂದ ಬೆನ್ನು ನೋವು ಬರಲು ಕಾರಣವಾಗುತ್ತದೆ.

Comments are closed.