ಕರಾವಳಿ

ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಪುತ್ತೂರು ಗೆಲುವು

Pinterest LinkedIn Tumblr

ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್‌ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ನಿರೀಕ್ಷೆಯಂತೆ ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ (ಪುತ್ತೂರು) ಗೆಲುವು ಸಾಧಿಸಿದ್ದಾರೆ.

Kishor kumar mlc

ಕೋಟ ಶ್ರೀನಿವಾಸ ಪೂಜಾರಿ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅಕ್ಟೋಬರ್ 21 ರಂದು ಚುನಾವಣೆ ನಡೆದಿತ್ತು, ಅದರಂತೆ ಇಂದು ಗುರುವಾರ(ಅ.24) ಚುನಾವಣಾ ಫಲಿತಾಂಶ ಹೊರಬಿದ್ದಿದೆ.

ಒಟ್ಟು 5907ಮತಗಳಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು 3655 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ, ಅದರಂತೆ ಕಾಂಗ್ರೆಸ್ ನ ರಾಜು ಪೂಜಾರಿ 1958 ಮತಗಳನ್ನು ಗಳಿಸಿದರೆ, ಎಸ್ ಡಿಪಿಐ ಅಭ್ಯರ್ಥಿ 195, ದಿನಕರ್ ಉಲ್ಲಾಳ್ 9 ಮತಗಳನ್ನು ಪಡೆದರೆ 90 ಮತಗಳು ಅಮಾನ್ಯಗೊಂಡಿವೆ‌ ಎಂದು ತಿಳಿದುಬಂದಿದೆ.

Comments are closed.