ಕರಾವಳಿ

ಮಕ್ಕಳು, ವಯಸ್ಸಾದವರು ಕೂಡ ಬಯಸುವಂತ ಈ ಹಣ್ಣಿನಲ್ಲಿದೆ ಆರೋಗ್ಯಕರ ಗುಣ

Pinterest LinkedIn Tumblr

ಹೌದು ಆಪಲ್ ಹಲವು ರೋಗಗಳನ್ನು ನಿವಾರಿಸುವಂತ ಶಕ್ತಿಯನ್ನು ಹೊಂದಿದೆ. ಯಾವುದೇ ಒಬ್ಬ ಮನುಷ್ಯನಿಗೆ ಕಾಯಿಲೆಗಳು ಹಾಗು ರೋಗಗಳು ಬಂದಾಗ ವೈದ್ಯರು ಚಿಕಿತ್ಸೆ ಹೊಂದಿಗೆ ಹೇಳುವುದೇ ಆಪಲ್ ತಿನ್ನಲು ಹಾಗಾಗಿ ಚಿಕ್ಕೋರಿಂದ ವಯಸ್ಸಾದವರು ಕೂಡ ಬಯಸುವಂತ ಹಣ್ಣು ಇದು.

ಹಾಗಾದರೆ ಈ ಹಣ್ಣು ಯಾವೆಲ್ಲ ಬೇನೆಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ ..

ಗಟಲಿನ ಸಮಸ್ಯೆಗೆ ವಿನೆಗರ್..
ನೋಯುತ್ತಿರುವ ಗಂಟಲಿಗೆ ಈ ವಿನೆಗರ್ ಮನೆ ಔಷಧಿಯಂತೆ ಕೆಲಸ ಮಾಡುತ್ತದೆ. ಗಂಟಲು ಕಫ್, ಹಾಗೂ ಗಂಟಲಿನ ಸಮಸ್ಯೆಗೆ ಇದು ರಾಮಬಾಣವಿದ್ದಂತೆ. 1/4 ಕಪ್ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದರಲ್ಲಿ 1/4ರಷ್ಟು ಬೆಚ್ಚಗಿನ ನೀರು ಸೇರಿಸಿ ಬಾಯಿ ಮುಕ್ಕಳಿಸಬೇಕು.

ಉಸಿರುಗಟ್ಟಿಸುವ ಮೂಗು..
ಮೂಗು ಉಸಿರುಗಟ್ಟುತ್ತಿದ್ದರೆ ಆಪಲ್ ವಿನೆಗರ್ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲದ್ದು.. ಕೋಲ್ಡ್ ಆಗಿದ್ದರೆ ನಿಮ್ಮ ಹತ್ತಿರ ಆಪೆಲ್ ಸೈಡರ್ ವಿನೆಗರ್‌ನ್ನು ಇಟ್ಟುಕೊಂಡಿರಬೇಕು. ವಿನೆಗರ್‌ನಲ್ಲಿ ಪೋಟ್ಯಾಶಿಯಂ,

ತೂಕ ಇಳಿಕೆ
ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ತೂಕ ಇಳಿಕೆ ಮಾಡಲು ಸಹಾಯಕಾರಿಯಾಗುತ್ತದೆ. ವಿನೆಗರ್‌ನಲ್ಲಿ ಆ್ಯಸ್ಟಿಕ್ ಆ್ಯಸಿಡ್ ಎಂಬ ಅಂಶವಿರುವುದರಿಂದ ಪದೇ ಪದೇ ಹಸಿವು ಆಗುವುದನ್ನು ಇದು ನಿವಾರಿಸುತ್ತದೆ. ನಿಮ್ಮ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ.

ಬಿಕ್ಕಳಿಕೆ ನಿವಾರಿಸಬಲ್ಲದು ಆಪಲ್ ವಿನೆಗರ್
ಬಿಕ್ಕಳಿಕೆ ಸಮಸ್ಯೆ ಎದುರಾದ್ರೆ ಆಪಲ್ ವಿನೆಗರ್ ಔಷಧಿಯಂತೆ ಚಿಕಿತ್ಸೆ ನೀಡುತ್ತದೆ. ಅಲ್ಲದೇ ಜೀರ್ಣಕ್ರಿಯೆಗೂ ಇದು ಪರಿಣಾಮ ಬೀರಬಲ್ಲದ್ದು. ಬಿಕ್ಕಳಿಕೆ ಸಮಸ್ಯೆ ನಿಮಗಿದ್ರೆ ವಿನೆಗರ್ ಸೇವಿಸುವುದು ಉತ್ತಮ.

ಹೊಟ್ಟೆ ಸಮಸ್ಯೆಗೆ..
ಹೊಟ್ಟೆ ಅಪ್ಸೆಟ್ ಆಗಿದ್ದರೆ ಆಪಲ್ ವಿನೆಗರ್ ಅತ್ಯಂತ ಪರಿಣಾಮಕಾರಿ ಔಷಧಿಗಳಲ್ಲಿ ಒಂದು. ಇದರಲ್ಲಿ ಆಂಟಿಬಯೋಟಿಕ್ ಗುಣಗಳು ಇರುವುದರಿಂದ ಶೀರ್ಘದಲ್ಲೇ ಹೊಟ್ಟೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೇ ಹೊಟ್ಟೆಯಲ್ಲಿರುವ ಬ್ಯಾಕ್ಟೇರಿಯಾಗಳ ಸೋಂಕನ್ನು ಸಹ ನಿವಾರಿಸುವ ಗುಣ ಹೊಂದಿದೆ.

Comments are closed.