ಕರಾವಳಿ

ಒಣಗಿದ ತೆಂಗಿನಕಾಯಿ ಬಳಕೆಯಿಂದ ಉಂಟಾಗುವ ಪ್ರಯೋಜನಗಳು

Pinterest LinkedIn Tumblr

ಒಣಗಿದ ತೆಂಗಿನಕಾಯಿ ತಿನ್ನುವುದರಿಂದ ಅನೇಕ ರೋಗಗಳಿಗೆ ಮನೆ ಮದ್ದು, ಹಸಿ ತೆಂಗಿನಕಾಯಿಯಿಂದ ಎಷ್ಟು ಪ್ರಯೋಜನ ಪಡೆಯಬಹುದೋ ಅಷ್ಟೇ ಉಪಯೋಗಗಳನ್ನು ಒಣಗಿದ ತೆಂಗಿನಕಾಯಿಯಿಂದ ಪಡೆದುಕೊಳ್ಳ ಬಹುದು. ತೆಂಗಿನ ಎಣ್ಣೆಯಿಂದ ತುಟಿಗಳ ಆರೈಕೆ ಪ್ರಪಂಚದಾದ್ಯಂತ ಉಪಯೋಗಿಸುವ ಈ ತೆಂಗಿನಕಾಯಿಯಲ್ಲಿ ಆರೋಗ್ಯಕರ ಅಂಶ ಹಲವಾರಿವೆ. ಒಣಗಿದ ತೆಂಗಿನಕಾಯಿಯು ಆಹಾರದ ನಾರು, ತಾಮ್ರ, ಮ್ಯಾಂಗನೀಸ್, ಮತ್ತು ಸೆಲೆನಿಯಮ್ ನಂತರ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದರ ಬಳಕೆಯಿಂದ ಉಂಟಾಗುವ ಪ್ರಯೋಜನಗಳು ಇಲ್ಲಿವೆ ನೋಡಿ…

* ರಕ್ತ ಹೀನತೆಯ ನಿಯಂತ್ರಣ
ಒಂದು ನಿರ್ದಿಷ್ಟ ವಯಸ್ಸಿನ ನಂತರ ದೇಹದಲ್ಲಿ ರಕ್ತಹೀನತೆಯ ಸಮಸ್ಯೆ ಕಾಣಿಸುಕೊಳ್ಳುವುದು ಸಹಜ. ಕಬ್ಬಿಣಂಶದ ಕೊರತೆಯಿಂದ ರಕ್ತ ಹೀನತೆ ಉಂಟಾಗಿ ತೀವ್ರತರದ ಅರೋಗ್ಯ ಸಮಸ್ಯೆ ಉಂಟಾಗಬಹುದು. ಒಣ ತೆಂಗಿನಕಾಯಿ ಹೆಚ್ಚು ಕಬ್ಬಿಣಂಶ ನೀಡಿ ಆರೋಗ್ಯವನ್ನು ಕಾಪಾಡುತ್ತದೆ. । ಇದನ್ನೂ ಓದಿ : ರಾತ್ರಿ ಮಲಗುವ 5 ನಿಮಿಷಕ್ಕೂ ಮುನ್ನ ಹೀಗೆ ಮಾಡಿ ನೋಡಿ… ಆರೋಗ್ಯಕ್ಕೆ ಎಷ್ಟೆಲ್ಲ ಲಾಭ ಆಗುತ್ತೆ ಗೊತ್ತಾ…!

* ಕ್ಯಾನ್ಸರ್ ತಡೆಯುವುದು
ಒಣ ತೆಂಗಿನಕಾಯಿಯಲ್ಲಿರುವ ಅನೇಕ ಪೋಷಕಾಂಶಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ. ಒಣತೆಂಗಿನ್ಕಾಯಿ ಸೇವನೆಯಿಂದ ಕೊಲೆನ್ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಸೇರಿದಂತೆ ಅನೇಕ ಬಗೆಯ ಕ್ಯಾನ್ಸರ್‌ಗಳನ್ನು ತಡೆಯಬಹುದು.

* ಪುರುಷರಲ್ಲಿ ಬಂಜೆತನದ ನಿಯಂತ್ರಣ
ಒಣತೆಂಗಿನಕಾಯಿಯ ಸೇವನೆಯಿಂದ ಸಮೃದ್ಧವಾದ ಸೆಲೆನಿಯಮ್ ಅನ್ನು ಪಡೆಯಬಹುದು. ಇದು ಪುರುಷರಲ್ಲಿ ಉಂಟಾಗುವ ಬಂಜೆತನವನ್ನು ನಿಯಂತ್ರಿಸುತ್ತದೆ.

* ರೋಗನಿರೋಧಕ ಶಕ್ತಿ ಹೆಚ್ಚಳ
ಒಣ ತೆಂಗಿನಕಾಯಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವಲ್ಲಿ ಸಹಾಯಮಾಡುತ್ತದೆ. ಇದು ಸೆಲೆನಿಯಂ ಸೆಳೇನೋ ಪ್ರೊಟೀನ್ ಗಳನ್ನೂ ಉತ್ಪಾದಿಸಿ ಅನೇಕ ರೋಗಗಳನ್ನು ತಡೆಗಟ್ಟುತ್ತದೆ.

* ಸಂದಿವಾತ ತಡೆಯುವುದು.
ಪತಿದಿನ ತೆಂಗಿನಕಾಯಿಯ ಸೇವನೆಯಿಂದ ಸಂದಿವಾತ ಹಾಗು ಆಸ್ಟಿಯೊಪೊರೋಸಿಸ್ ನಂತಹ ತೊಂದರೆಯನ್ನು ತಡೆಯುವುದು. ಜೊತೆಗೆ ಸಂಯೋಜಕ ಅಂಗಾಂಶಗಳನ್ನು ಬಲಪಡಿಸಲು ಇದು ಸಹಾಯಮಾಡುತ್ತದೆ.

Comments are closed.