ಕರಾವಳಿ

ತ್ರಿಫಲಾ ಚೂರ್ಣವನ್ನುಸೇವಿಸುವುದರ ಪ್ರಯೋಜನಗಳು

Pinterest LinkedIn Tumblr

ತ್ರಿಫಲ ಚೂರ್ಣ ಅನ್ನೋದು ನೆಲ್ಲಿಕಾಯಿ, ತಾರೆಕಾಯಿ, ಹಾಗೂ ಅಳಲೆ ಈ ಮೂರು ಮೂಲಿಕೆಗಳನ್ನು ಪುಡಿ ಮಾಡಿ ಮಿಶ್ರಗೊಳಿಸಿದಾಗ ಸಿಗುವ ಚೂರ್ಣ. ತ್ರಿಫಲ ಚೂರ್ಣವನ್ನು ಮುಖ್ಯವಾಗಿ ತ್ರಿದೋಷಗಳಾದ ವಾತ, ಪಿತ್ತ ಮತ್ತು ಕಫದ ಸಮತೋಲನಕ್ಕಾಗಿ ಬಳಸಲಾಗುತ್ತದೆ.

ಉಗುರುಬೆಚ್ಚಗಿನ ನೀರು ಅಥವಾ ಹಾಲಿನ ಜೊತೆ ಚೂರ್ಣವನ್ನು ಸೇವಿಸಿದರೆ, ಉತ್ತಮ ಫಲಿತಾಂಶ ದೊರಕುತ್ತದೆ.

ತ್ರಿಫಲಾ ಚೂರ್ಣವನ್ನುಸೇವಿಸುವುದರ ಪ್ರಯೋಜನಗಳು..
– ತ್ರಿಫಲ ಚೂರ್ಣದ ಸೇವನೆಯಿಂದ ಅಜೀರ್ಣ, ಮಲಬದ್ಧತೆ, ಕರುಳಿನ ವೇದನೆಯಂಥ ಸಮಸ್ಯೆಗಳಲ್ಲಿ ಸಹಾಯವಾಗುತ್ತದೆ.
– ತ್ರಿಫಲ ಚೂರ್ಣ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ವಿವಿಧ ಬಗೆಯ ಜ್ವರಗಳೊಡನೆ ಹೋರಾಡಲು ಸಹಾಯ ಮಾಡುತ್ತದೆ.
– ತ್ರಿಫಲ ಚೂರ್ಣವು ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವ ಮೂಲಕ ಆಹಾರ ಉತ್ತಮವಾಗಿ ಜೀರ್ಣವಾಗುವಂತೆ ಮಾಡುತ್ತದೆ ಮತ್ತು ಕೊಬ್ಬಿನ ಅನಾವಶ್ಯಕ ಸಂಗ್ರಹವನ್ನು ತಡೆಯುತ್ತದೆ. ಹೀಗೆ ತೂಕ ಇಳಿಕೆಗೆ ಸಹಾಯವಾಗುತ್ತದೆ.
– ತ್ರಿಫಲ ಚೂರ್ಣದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಪುರುಷರು ಮತ್ತು ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ.
– ಈ ತ್ರಿಫಲ ಚೂರ್ಣ ಅಸ್ವಸ್ಥತೆಯಲ್ಲಿ ಸಹಾಯ ಮಾಡೋದು ಮಾತ್ರವಲ್ಲ, ಮಿದುಳನ್ನು ಚುರುಕುಗೊಳಿಸುತ್ತದೆ, ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಆತಂಕ ಮತ್ತು ಅಂಜಿಕೆಯನ್ನ ಕಡಿಮೆಗೊಳಿಸುತ್ತದೆ.
– ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನ ಕುಗ್ಗಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಸುತ್ತದೆ.
– ತ್ರಿಫಲ ಚೂರ್ಣದಲ್ಲಿರೋ ಉರಿಯೂತ ನಿವಾರಕ ಗುಣಗಳು ಸಂಧಿವಾತದಂಥ ಮೂಳೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.
– ಇದು ರಕ್ತವನ್ನು ಶುದ್ಧೀಕರಿಸಿ, ರಕ್ತ ಸಂಚಲನವನ್ನು ಉತ್ತಮಗೊಳಿಸುತ್ತದೆ. ಹೀಗೆ ಶ್ವಾಸಕೋಶ ಮತ್ತು ಲಿವರ್ ನ (ಯಕೃತ್ತ) ಶುಧ್ಧೀಕರಣಕ್ಕೆ ಸಹಾಯ ಮಾಡುವ ಮೂಲಕ, ಶ್ವಾಸಕೋಶ ಮತ್ತು ಲಿವರ್ ಸಂಬಂಧಿ ಹಲವು ಕಾಯಿಲೆಗಳನ್ನು ದೂರವಿಡುತ್ತದೆ.

Comments are closed.