ಕರಾವಳಿ

ಹೊಟ್ಟೆ, ಬೆನ್ನು, ಸೊಂಟದ ಸುತ್ತಲಿನ ಕೊಬ್ಬು ಕರಗಿಸಬಲ್ಲ ವ್ಯಾಯಮ

Pinterest LinkedIn Tumblr

ಇಂದು ಸ್ಥೂಲಕಾಯ ಸಮಸ್ಯೆ ಬಹಳಷ್ಟು ಮಂದಿಯನ್ನು ತೊಂದರೆಗೆ ಗುರಿಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಇದರ ಮೂಲವಾಗಿ ನಾನಾ ಅವಸ್ಥೆಗಳನ್ನು ಎದುರಿಸುವಂತಾಗಿದೆ. ಅಧಿಕ ತೂಕ ಇರುವವರ ಬೆನ್ನು, ಪಕ್ಕದ ಭಾಗಗಳಲ್ಲಿ ಕೊಬ್ಬು ಹೆಚ್ಚಾಗಿ ಸಂಗ್ರಹವಾಗಿ ಸುತ್ತಲೂ ಪದರಗಳ ತರಹ ಸೇರಿಕೊಳ್ಳುತ್ತದೆ. ಅದನ್ನು ನೋಡಲು ಅಸಹ್ಯವಾಗಿ ಸಹ ಕಾಣಿಸುತ್ತವೆ. ಆದರೆ ಕೆಳಗೆ ತಿಳಿಸಿದ ಸರಳ ವ್ಯಾಯಾಮಗಳನ್ನು ಮಾಡಿದರೆ ಅದರಿಂದ ಈ ಪದರಗಳು ನಿವಾರಣೆಯಾಗುತ್ತವೆ. ಅದೇ ರೀತಿ ಕೊಬ್ಬು ಕರಗಿ ಅಧಿಕ ತೂಕ ಸಹ ಕಡಿಮೆಯಾಗುತ್ತಾರೆ. ಹಾಗಿದ್ದರೆ ಆ ವ್ಯಾಯಮಗಳು ಏನು ಎಂದು ಈಗ ತಿಳಿದುಕೊಳ್ಳೋಣ..!

1. ಫಾರ್ವರ್ಡ್ ಬೆಂಡ್ಸ್
ಕಾಲುಗಳನ್ನು ನೇರವಾಗಿ ಇಟ್ಟು ನಿಂತುಕೊಳ್ಳಬೇಕು. ಮೊಣಕಾಲುಗಳನ್ನು ಬಗ್ಗಿಸದೆ ಮುಂದೆ ಬಾಗಬೇಕು. ಬಳಿಕ ಇನ್ನಷ್ಟು ಬಗ್ಗಿ ಕೈಗಳನ್ನು ನೆಲಕ್ಕೆ ತಾಗಿಸಬೇಕು. ಮೊಣಕಾಲುಗಳನ್ನು ಮಾತ್ರ ಬಗ್ಗಿಸಬಾರದು. ಈ ರೀತಿ ಒಂದು ಸೆಟ್‌ನಲ್ಲಿ 10ರಿಂದ 15 ಸಲ ಮಾಡಬೇಕು. ಒಟ್ಟು 2 ರಿಂದ 3 ಸೆಟ್ಸ್ ಮಾಡಬೇಕು.

2. ಸೈಡ್ ಬೆಂಡ್ಸ್
ಕಾಲುಗಳನ್ನು ಸ್ವಲ್ಪ ಎಡಕ್ಕೆ ಇಟ್ಟು ನೇರವಾಗಿ ನಿಲ್ಲಬೇಕು. ಒಂದು ಕೈ ಮೇಲೆತ್ತಿ ಅದನ್ನು ತಲೆ ಹಿಂದೆ ಅಂಗೈಯಲ್ಲಿ ಬರುಂವಂತೆ ಹಿಡಿದುಕೊಳ್ಳಬೇಕು. ಇನ್ನೊಂದು ಕೈಯಿಂದ ಡಂಬಲ್ ತೆಗೆದುಕೊಂಡು ಅದನ್ನು ಕೆಳಗೆ ಇಳಿಸಬೇಕು. ಡಂಬಲ್ ಇರುವ ಕೈ ಕಡೆಗೆ ಸ್ವಲ್ಪ ಬಾಗಬೇಕು. ಈ ರೀತಿ ಒಂದು ಸೆಟ್‌ನಲ್ಲಿ 15 ರಿಂದ 20 ಸಲ ಮಾಡಬೇಕು. ಒಟ್ಟು 3 ಸೆಟ್ಸ್ ಮಾಡಬೇಕು.

3. ಫುಷಪ್ಸ್
ನೆಲದ ಮೇಲೆ ಬೋರಲು ಮಲಗಿ ಅಂಗೈಗಳು, ಪಾದಗಳ ಸಹಾಯದಿಂದ ದೇಹವನ್ನು ಮೇಲೆತ್ತಬೇಕು. ಕೇವಲ ಆ ಭಾಗಗಳನ್ನು ಮಾತ್ರ ನೆಲಕ್ಕೆ ತಾಗಿಸಬೇಕು. ಉಳಿದ ದೇಹವನ್ನು ಒಟ್ಟು ಮೇಲಕ್ಕೆ ಎತ್ತಬೇಕು. ಮತ್ತೆ ದೇಹವನ್ನು ನೆಲಕ್ಕೆ ತಾಕಬೇಕು. ಈ ರೀತಿ ಒಂದು ಸೆಟ್‌ನಲ್ಲಿ 20 ರಿಂದ 30 ಪುಷಪ್ಸ್ ಮಾಡಬಹುದು. ಒಟ್ಟು 2 ರಿಂದ 3 ಸೆಟ್ಸ್ ಮಾಡಬೇಕು.

4. ಧನುರಾಸನ
ನೆಲದ ಮೇಲೆ ಬೋರಲು ಮಲಗಕೊಳ್ಳಬೇಕು. ಕೈಗಳನ್ನು ಮುಂದೆ ಚಾಚಬೇಕು. ತಲೆಮೇಲೆತ್ತುತ್ತಾ ಅದೇ ಸಮಯದಲ್ಲಿ ಬೆನ್ನನ್ನು ಹಿಂದಕ್ಕೆ ಬಾಗಿಸುತ್ತಾ ಹಿಂಬದಿಯಲ್ಲಿ ಕಾಲುಗಳನ್ನು ಮೇಲಕ್ಕೆತ್ತಬೇಕು. ಬಳಿಕ ಕೈಗಳನ್ನು ಹಿಂದಕ್ಕೆ ತಂದು ಎರಡು ಕಾಲುಗಳನ್ನು ಹಿಡಿದುಕೊಳ್ಳಬೇಕು. ಜೋರಾಗಿ ಗಾಳಿಯನ್ನು ಒಳಗೆ ಎಳೆದುಕೊಳ್ಳಬೇಕು. ಈ ಭಂಗಿಯಲ್ಲಿ ಕೆಲವು ಸೆಕೆಂಡ್‌ಗಳ ಕಾಲ ಇರಬೇಕು. ಬಳಿಕ ಉಸಿರನ್ನು ನಿಧಾನಕ್ಕೆ ಬಿಡುತ್ತಾ ಸಾಮಾನ್ಯ ಸ್ಥಿತಿಗೆ ಬರಬೇಕು. ಈ ಭಂಗಿಯನ್ನು ನಿತ್ಯ ಒಂದು ಸಲ ಮಾಡಬಹುದು. ಮಾಡಿದಾಗ 20 ರಿಂದ 60 ಸೆಕೆಂಡ್‌ಗಳ ಕಾಲ ಇರಬಹುದು.

5. ಸೂಪರ್ ಮ್ಯಾನ್
ನೆಲದ ಮೇಲೆ ಬೋರಲು ಮಲಗಬೇಕು. ಕೈಗಳನ್ನು ಮುಂದೆ ಚಾಚುತ್ತಾ ಮೇಲೆತ್ತಬೇಕು. ಅದೇ ಸಮಯದಲ್ಲಿ ಕಾಲುಗಳನ್ನು ಮೇಲೆತ್ತಬೇಕು. ಬೆನ್ನನ್ನು ಕದಲಿಸಬಾರದು. ಈ ಭಂಗಿಯಲ್ಲಿ ಕೆಲವು ಸೆಕೆಂಡ್‌ಗಳ ಕಾಲ ಇರಬೇಕು. ಈ ರೀತಿ ಒಂದು ಸೆಟ್‍ನಲ್ಲಿ 15 ರಿಂದ 20 ಸಲ ಮಾಡಬೇಕು. ಒಟ್ಟು 3 ರಿಂದ 4 ಸೆಟ್ ಮಾಡಬೇಕು.

6. ಸ್ಬೆಬಿಲಿಟಿ ಬಾಲ್
ಸ್ಟೆಬಿಲಿಟಿ ಬಾಲ್ ಮೇಲೆ ಹೊಟ್ಟೆಯನ್ನು ಇಟ್ಟು ಬೋರಲು ಮಲಗಬೇಕು. ಕೈಗಳನ್ನು ತಲೆಯ ಹಿಂದೆ ಇಟ್ಟುಕೊಳ್ಳಬೇಕು. ಹೊಟ್ಟೆ ಮೇಲ್ಭಾಗವನ್ನು ಎಂದರೆ ಎದೆಯಿಂದ ತಲೆವರೆಗಿನ ಭಾಗವನ್ನು ಕೆಳಕ್ಕೂ ಮೇಲಕ್ಕೂ ಮಾಡಬೇಕು. ಅದೇ ಸಮಯದಲ್ಲಿ ಕಾಲುಗಳನ್ನು ಫಿಕ್ಸ್‌ಡ್ ಆಗಿ ಇಟ್ಟುಕೊಳ್ಳಬೇಕು. ಕದಲಿಸಬಾರದು. ಈ ರೀತಿ ಒಂದು ಸೆಟ್‌ನಲ್ಲಿ 12 ರಿಂದ 15 ಸಲ ಮಾಡಬೇಕು. ಒಟ್ಟು 1 ರಿಂದ 2 ಸೆಟ್ಸ್ ಮಾಡಬಹುದು.

7. ಬ್ರಿಡ್ಜ್
ನೆಲದ ಮೇಲೆ ಅಂಗಾತ ಮಲಗಬೇಕು. ಕೈಗಳನ್ನು ನೆಲದ ಮೇಲೆ ಊರಿ ನಿಧಾನಕ್ಕೆ ಸೊಂಟದ ಭಾಗವನ್ನು ಮೇಲೆತ್ತಬೇಕು. ಅದೇ ಸಮಯದಲ್ಲಿ ಮುಖ ನೆಲದ ಕಡೆಗೆ ಬರಬೇಕು. ಈ ಭಂಗಿಯಲ್ಲಿ 3ರಿಂದ 5 ಸೆಕೆಂಡ್ ಕಾಲ ಇರಬೇಕು. ಬಳಿಕ ಸಾಮಾನ್ಯ ಸ್ಥಿತಿಗೆ ಬರಬೇಕು. ಈ ರೀತಿ ನಿತ್ಯ 1 ರಿಂದ 2 ಸಲ ಈ ವ್ಯಾಯಾಮ ಮಾಡಬೇಕು. ಆದರೆ ಮೇಲೆ ತಿಳಿಸಿದ ವ್ಯಾಯಾಮಗಳಿಗಿಂತ ಇದು ಕಠಿಣವಾದದ್ದು. ಇದನ್ನು ಮಾಡುವಲ್ಲಿ ಕಷ್ಟ ಎನ್ನಿಸಿದರೆ ಬಿಟ್ಟುಬಿಡಿ. ಸರಿಯಾಗಿ ಮಾಡದಿದ್ದರೂ ನಿತ್ಯ ಪ್ರಾಕ್ಟೀಸ್ ಮಾಡುತ್ತಿದ್ದರೆ ಕೆಲವು ದಿನಗಳಲ್ಲಿ ಈ ವ್ಯಾಯಾಮವನ್ನು ಯಾರು ಬೇಕಾದರು ಪರ್‌ಫೆಕ್ಟ್ ಆಗಿ ಮಾಡುತ್ತಾರೆ.

ಮೇಲೆ ತಿಳಿಸಿದ 7 ವ್ಯಾಯಾಮಗಳನ್ನು ನಿತ್ಯ ಮಾಡಿದರೆ ಸ್ಲಿಮ್ ಆಗಿ ಬದಲಾಗಬಹುದು. ಹೊಟ್ಟೆ, ಬೆನ್ನು, ಸೊಂಟದ ಸುತ್ತಲಿನ ಕೊಬ್ಬು ಕರಗುತ್ತದೆ. ಅಧಿಕ ತೂಕ ಕಡಿಮೆಯಾಗುತ್ತದೆ. ಸೊಂಟದ ಸುತ್ತಳತೆ ಕೆಲವು ಇಂಚಿನವರೆಗೂ ಕಡಿಮೆಯಾಗುತ್ತದೆ.

Comments are closed.