ಕರಾವಳಿ

ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಈಜುಕಲಿಯುದರಿಂದಾಗುವ ಪ್ರಯೋಜನಗಳು

Pinterest LinkedIn Tumblr

ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಈಜುವುದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ದೇಹವನ್ನು ತಂಪಾಗಿಡಲು ಸಹಕಾರಿಯಾಗಿದೆ. ಮಕ್ಕಳಲ್ಲಿ ಸಾಹಸ ಮನೋಬಲ ಈಜುವುದರಿಂದ ಬರುತ್ತದೆ. ನಿಮ್ಮ ಮಕ್ಕಳನ್ನು ರಜಾದಿನಗಳಲ್ಲಿ ಈಜುಕೊಳಗಳಿಗೆ ಕರೆದೊಯ್ಯಿರಿ,ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಈಜುವುದನ್ನು ಕಲಿಸುವುದರಿಂದ ಅವರ ದೈಹಿಕ ಬೆಳವಣಿಗೆ,ಹಾರ್ಮೋನ್ಸ್ ಗಳ ಉತ್ಪಾದನೆ ಉತ್ತಮವಾಗಿ ಆಗುತ್ತದೆ.

ಉತ್ತಮ ದೇಹಕ್ಕಾಗಿ:

24 Hour Fitness magazine ನ ಸಂಶೋಧನೆಯ ಪ್ರಕಾರ ಈಜುವುದು ನಮ್ಮ ದೇಹಕ್ಕೆ ಒಂದು ಉತ್ತಮ ವ್ಯಾಯಾಮ,ಈಜುವುದು ಹೃದಯ ಹಾಗು ಶ್ವಾಶಕೋಶಗಳಿಗೆ ಉತ್ತಮ ವ್ಯಾಯಾಮವಾಗುತ್ತದೆ. ದೇಹಡಾ ಆಕಾರ ಚೆನ್ನಾಗುತ್ತದೆ,ಮಾತಿನಲ್ಲಿ ಸ್ಪಷ್ಟನೆ ಹೆಚ್ಚುತ್ತದೆ. ಈಜುವುದರಿಂದ ದೇಹದಲ್ಲಿನ ವಿಷಕಾರಿ ಕೊಬ್ಬನ್ನು ಕರಗಿಸುತ್ತದೆ ಮತ್ತು ಭವಿಷ್ಯದಲ್ಲಿ ಬರಬಹುದಾದ ಖಾಯಿಲೆಗಳನ್ನು ದೂರ ಮಾಡುತ್ತದೆ.

ಮಾನಸಿಕ ನೆಮ್ಮದಿ
ಈಜುವುದರಿಂದ ಮನಸ್ಸಿಗೆ ನೆಮ್ಮದಿ ಹೆಚ್ಚಾಗುತ್ತದೆ. ನೀರಿಗೆ ಏನನ್ನೇ ಆದರೂ ಶಾಂತರೂಪಕ್ಕೆ ತರುವ ಶಕ್ತಿ ಇದೆ. ನೀರು ದೇಹದಲ್ಲಿ ಸಮತೋಲನವನ್ನು ಕಾಪಾಡುತ್ತದೆ, ಮಕ್ಕಳಲ್ಲಿನ ಮಾನಸಿಕ ಖಿನ್ನತೆ ದೂರಮಾಡಿ ಧೈರ್ಯಯನ್ನು ತುಂಬುತ್ತದೆ, ಬರೀ ದೇಹಕ್ಕೆ ಮಾತ್ರ ವ್ಯಾಯಾಮ ಮುಖ್ಯವಲ್ಲ ಮನಸ್ಸಿಗೂ ವ್ಯಾಯಾಮ ಅತ್ಯಗತ್ಯ, ಈಜುವುದನ್ನು ಅಭ್ಯಾಸ ಮಾಡಿಕೊಂಡರೆ ಮನಸ್ಥಿತಿ ಆರೋಗ್ಯಕರವಾಗಿರುತ್ತದೆ.

ರಕ್ಷಣೆ
ಈಜುವುದು ಮಕ್ಕಳಲ್ಲಿ ರಕ್ಷಣಾ ಮನೋಭಾವವನ್ನು ಹೆಚ್ಚಿಸುತ್ತದೆ. ಎಂತಹ ಕಠಿಣ ಸನ್ನಿವೇಶವನ್ನು ಎದುರಿಸಲು ಸಿದ್ಧರಾಗುವಂತೆ ಮಾಡುತ್ತದೆ. ಮತ್ತು ನದಿ ಅಥವಾ ಬೇರೆ ನೀರಿನ ಸ್ಥಳಗಳಲ್ಲಿ ಏನಾದರು ಅಪಾಯ ಸಂಭವಿಸದರೆ ಅಂತಹ ಸಂದರ್ಭದಲ್ಲಿ ಮಕ್ಕಳು ಅನಾಹುತದಿಂದ ಪಾರಾಗುತ್ತಾರೆ.

ಸಲಹೆ
ನಮ್ಮ ಸಲಹೆ ಏನಂದರೆ ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಈಜುವುದನ್ನು ಕಲಿಸಿ, ರಜಾ ದಿನಗಳಲ್ಲಿ ಈಜು ತರಬೇತಿ ಕೊಡಿಸಿ,ಈಜುವುದನ್ನು ಹವ್ಯಾಸ ಮಾಡಿಕೊಳ್ಳಲು ಪ್ರೋತಾಹಿಸಿ.

Comments are closed.