ಗರ್ಭದಲ್ಲಿರುವ ಭ್ರೂಣ, ಹೆಣ್ಣು ಅಥವಾ ಗಂಡು ಎಂದು ಶಾಸ್ತ್ರೀಯವಾಗಿ ತಿಳಿದುಕೊಳ್ಳಲು ಹಲವು ವಿಧಾನಗಳಿವೆ. ನಮ್ಮ ಹಿರಿಯರು ಅನಾದಿ ಕಾಲದಿಂದಲು ಅನುಸರಿಸುತ್ತಿದ್ದ ವಿಷಯಗಳು ಬಹಳಷ್ಟಿವೆ. ಆದರೆ…ಲಿಂಗ ನಿರ್ಧಾರ ಹೇಗೆ ಆಗುತ್ತದೆ. ಗರ್ಭದಲ್ಲಿರುವ ಭ್ರೂಣ ಹೆಣ್ಣು ಅಥವ ಗಂಡಾಗಿ ಯಾವಾಗ ಮಾರ್ಪಡುತ್ತದೆ ಹೇಗೆ ಮಾರ್ಪಡುತ್ತದೆ. ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿರುತ್ತದೆ. ಅನುಮಾನವನ್ನು ಈಗ ಪರಿಹರಿಸಿಕೊಳ್ಳೋಣ ಬನ್ನಿ….
ಗಂಡು-ಹೆಣ್ಣು ಲಿಂಗ ನಿರ್ಧಾರ ಹೇಗೆ ನಡೆಯುತ್ತದೆ.?
ವಿಜ್ಞಾನದ ಪ್ರಕಾರ ಮಾನವನ ಶರೀರದಲ್ಲಿ XX – XY ಎಂಬ ಕ್ರೋಮೋಸೋಮುಗಳ ಮೂಲಕ ಲಿಂಗ ನಿರ್ಧರಿಸಲ್ಪಡುತ್ತದೆ. ಮಾನವ ಶರೀರದಲ್ಲಿರುವ ಕಾರಿಯೋಟೈಪ್ ನಲ್ಲಿ ಒಟ್ಟು 23 ಕ್ರೋಮೋಸೋಮುಗಳಿರುತ್ತವೆ. ಇವುಗಳಲ್ಲಿ ದೈಹಿಕ ಕ್ರೋಮೋಸೋಮುಗಳು 22 ಎಂದು, ಒಂದು ಜತೆ ಮಾತ್ರ ಲೈಂಗಿಕ ಕ್ರೋಮೋಸೋಮುಗಳು. ಆದರೆ, ಪುರುಷ ಹಾಗೂ ಸ್ತ್ರೀ ಶರೀರದಲ್ಲಿ ದೈಹಿಕ ಕ್ರೋಮೋಸೋಮುಗಳು ಒಂದೇ ರೀತಿಯಲ್ಲಿರುತ್ತವೆ.ಆದರೆ, ಲೈಂಗಿಕ ಕ್ರೋಮೋಸೋಮುಗಳು ಮಾತ್ರ ವಿಭಿನ್ನವಾಗಿರುತ್ತವೆ. ಹೇಗೆಂದರೆ…ಗಂಡಸರಲ್ಲಿ X, Y (XY) ಕ್ರೋಮೋಸೋಮುಗಳು, ಹೆಂಗಸರಲ್ಲಿ X,X (XX) ಕ್ರೋಮೋಸೋಮುಗಳು ಇರುತ್ತವೆ. ಪುರುಷರಲ್ಲಿ ಉತ್ಪತ್ತಿಯಾಗುವ ಶುಕ್ರ ಕಣಗಳು ಕೆಲವು X ಕ್ರೋಮೋಸೋಮುಗಳಾಗಿ, ಮಿಕ್ಕ ಕೆಲವು Y ಕ್ರೋಮೋಸೋಮುಗಳು. ಆದರೆ, ಸ್ತ್ರೀಯರಲ್ಲಿ ಮಾತ್ರ ಒಂದೇ (X)ರೀತಿಯ ಅಂಡಾಣುಗಳನ್ನು ಬಿಡುಗಡೆಮಾಡುತ್ತವೆ.
ಅಂಡಾಣುಗಳು X ಶುಕ್ರಕಣಗಳೊಂದಿಗೆ ಬೆರೆತಾಗ ಹೆಣ್ಣು ಮಗು, ಅಂಡಾಣುಗಳು Y ಶುಕ್ರ ಕಣಗಳೊಂದಿಗೆ ಬೆರೆತಾಗ ಗಂಡು ಮಗು ಹುಟ್ಟುತ್ತದೆ. ಒಟ್ಟಾರೆ ಹೇಳುವುದಾದರೆ…ಗಂಡು ಅಥವಾ ಹೆಣ್ಣು ಎಂದು ನಿರ್ಧರಿಸುವುದು ಪುರುಷರ ಶುಕ್ರ ಕಣಗಳೇ ಎಂದಾಯಿತು.
ಲಿಂಗ ನಿರ್ಧಾರ ಯಾವಾಗ ನಡೆಯುತ್ತದೆ.?
ಸಾಮಾನ್ಯವಾಗಿ ಹೆಣ್ಣು ಗರ್ಭ ದರಿಸಿದ 19 ಅಥವಾ 20 ವಾರಗಳಲ್ಲಿ , ಹುಟ್ಟಲಿರುವುದು ಗಂಡೋ ಹೆಣ್ಣೋ ಎಂಬುವುದು ತಿಳಿಯುತ್ತದೆ. ಗರ್ಭಧರಿಸಿದ 6 ನೇ ವಾರದಿಂದ ಭ್ರೂಣದ ಬೆಳವಣಿಗೆ, ಅವಯವಗಳು ರೂಪುಗೊಳ್ಳುವುದು ನಡೆಯುತ್ತದೆ. 9 ನೇ ವಾರದಲ್ಲಿಗಂಡು,ಹೆಣ್ಣು ಎಂಬುವುದು ತಿಳಿಯುತ್ತದೆ. 20 ವಾರಗಳು ತುಂಬುವುದರಲ್ಲಿ ಲಿಂಗ ನಿರ್ಧರಿಸುವ ಅವಯವಗಳು ರೂಪುಗೊಳ್ಳುತ್ತವೆ.



Comments are closed.