ಕರಾವಳಿ

ಪೋಷಕರು ಮಕ್ಕಳಿಗೆ ವಾಕ್ಸಿನ್ (ಲಸಿಕೆಗಳನ್ನು) ನೀಡಲು ಹಿಂಜರಿಯಲು 7 ಕಾರಣಗಳು

Pinterest LinkedIn Tumblr

ವಾಕ್ಸಿನೇಷನ್ ಬಗ್ಗೆ ಧಾರಾಳ ಕಟ್ಟುಕತೆಗಳು ಹಾಗೂ ತಪ್ಪು ತಿಳಿವಳಿಕೆಗಳು ಜನರಲ್ಲಿದೆ. ಆದರೂ ಮಕ್ಕಳಿಗೆ ವ್ಯಾಕ್ಸಿನೇಷನ್ ನೀಡಲ್ಪಟ್ಟಿದ್ದ, ಆದರೆ ಇತ್ತೀಚೆಗಿನ ಕೆಲವು ದಿನಗಳಲ್ಲಿ ಪಾಲಕರು ಮಕ್ಕಳಿಗೆ ವ್ಯಾಕ್ಸಿನೇಶನ್ ನೀಡದಂತೆ ತೀರ್ಮಾನಿಸಿದಂತಿದೆ. ಇದರಿಂದ ಸಮಾಜದಲ್ಲಿ ವ್ಯಾಪಕ ಸೋಂಕು ರೋಗಗಳ ಹರಡುವಿಕೆಗೆ ಕಾರಣವಾಗುವುದು ‘ವ್ಯಾಕ್ಸಿನ್ ನೀಡುವುದರಿಂದ ಮಗುವಿಗೆ ಯಾವುದೇ ಸುರಕ್ಷತೆ ಇಲ್ಲ’ -ಎಂದು ತಿಳಿಯುವ ಪೋಷಕರು ಅದನ್ನು ಮಗುವಿಗೆ ನೀಡಲು ಹಿಂಜರಿಯುತ್ತಾರೆ. ಆದರೂ ಇಂತಹ ನಂಬಿಕೆಗೆ ಯಾವುದೇ ಆಧಾರವಿಲ್ಲವೆಂದು ಬೃಹತ್ ಪ್ರಮಾಣದಲ್ಲಿ ಪುರಾವೆಗಳನ್ನು ನೀಡಲಾಗಿದ್ದರೂ ಪಾಲಕರ ಮನಸ್ಥಿತಿಗೆ ಯಾವುದೇ ಬದಲಾವಣೆಗಳು ಉಂಟಾಗಿಲ್ಲ. ವ್ಯಾಕ್ಸಿನೇಷನ್‌ ನಿಂದ ಕೆಲವು ಪ್ರಮಾಣದ ತೊಂದರೆ ಇರಬಹುದು. ಕೆಲವು ಮಾರಣಾಂತಿಕ ರೋಗಗಳಿಗೆ ಎದುರಾಗಿ ಹೊರಡಲಿರುವ ಚುಚ್ಚುಮದ್ದುಗಳನ್ನು ನೀಡುವುದರಿಂದ ಚುಚ್ಚುಮದ್ದು ನೀಡಿದ ಭಾಗದಲ್ಲಿ ಬಾತು ಕೊಳ್ಳುವಿಕೆ, ತುರಿಕೆ ಮತ್ತು ಜ್ವರವೂ ಕಾಣಿಸಿಕೊಳ್ಳಬಹುದು. ಆದರೆ ನಿಮ್ಮ ಮಗುವಿಗೆ ತಗಲಬಹುದಾದ ಮಾರಣಾಂತಿಕ ರೋಗಗಳಿಗೆ ಹೋಲಿಸಿದರೆ, ಇಂತಹ ಚಿಕ್ಕಪುಟ್ಟ ಅಲರ್ಜಿಗಳು ಏನೂ ಅಲ್ಲ

ತಂದೆ ತಾಯಿಯರು ತಮ್ಮ ಮಗುವಿಗೆ ಲಸಿಕೆಗಳನ್ನು ನೀಡದಿರುವ ಕಾರಣಗಳು ಹಾಗೂ ಅವುಗಳ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳೋಣ.

(೧) ಚುಚ್ಚುಮದ್ದುಗಳ ಬಳಕೆಯು ಮಗುವಿನ ರೋಗ ಪ್ರತಿರೋಧಕ ಶಕ್ತಿಯನ್ನು ನಾಶಪಡಿಸುವುದು.
1970 ರ ಮತ್ತು1980 ರ ಆಸುಪಾಸಲ್ಲಿ ಬಳಸಲಾದ ಚುಚ್ಚುಮದ್ದುಗಳು ಮಕ್ಕಳನ್ನು ಎಂಟು ರೋಗಗಳಿಂದ ರಕ್ಷಿಸಿದೆ. ಇಂದಿನ ದಿನಗಳಲ್ಲಿ ವ್ಯಾಕ್ಸಿನೇಟ್ ಆದ ಮಗುವು ಹದಿನಾಲ್ಕು ರೋಗಗಳಿಗೆ ಎದುರಾಗಿ ಹೋರಾಡಬಲ್ಲಂತಹ ಶಕ್ತಿಯನ್ನು ಪಡೆದುಕೊಂಡಿದ್ದಾನೆ. ಆದ ಕಾರಣ ಹೆಚ್ಚಿನ ವ್ಯಾಕ್ಸಿನೇಷನ್‌‍ಗೊಳಪಡಿಸಿದರೆ, ರೋಗಗಳಿಗೆ ಎದುರಾಗಿ ಹೋರಾಡುವ ಶಕ್ತಿಯನ್ನು ಪಡೆದುಕೊಳ್ಳುತ್ತಾರೆಂ ಬುದಕ್ಕೆ ಇದಕ್ಕಿಂತ ಪುರಾವೆ ಇನ್ನೆನು ಬೇಕಿದೆ ? ವ್ಯಾಕ್ಸಿನ್ ಗಳಲ್ಲಿ ಅಡಕವಾಗಿರುವ ಆಂಟಿಜೆನ್ ಗಳೆಂಬ ಬ್ಯಾಕ್ಟೀರಿಯಾ ಅಥವಾ ವೈರಲ್ ಘಟಕಗಳು ಆ್ಯಂಟಿ ಬಾಡೀಸ್ ನ ಉತ್ಪಾದನೆಗೆ ಪ್ರಚೋದಿಸಿ,ಇನ್ಫೆಕ್ಷನ್ ಗಳಿಗಾಗಿ ಹೋರಾಡುವಂತೆ ಶರೀರದ ರೋಗ ಪ್ರತಿರೋಧಕ ಶಕ್ತಿಯನ್ನು ಪ್ರಚೋದಿಸುತ್ತದೆ.

(೨) ಮಗುವಿನ ಅಪರ್ಯಾಪ್ತ ರೋಗ ಪ್ರತಿರೋಧ ಶಕ್ತಿ
ಸರಕಾರ ಅನುದಾನಿತ ಎಲ್ಲಾ ಲಸಿಕೆ ಗಳನ್ನು ನೀಡುವುದಕ್ಕಿಂತ ಅತ್ಯಂತ ಅಗತ್ಯವಾದ ವ್ಯಾಕ್ಸಿನ್ಗಳನ್ನು ಮಾತ್ರ ಮಗುವಿಗೆ ನೀಡುವುದು ತೀರ್ಮಾನಿಸಿದ ಪಾಲಕರು ಇದ್ದಾರೆ. ಇದೊಂದು ಅತ್ಯಂತ ತಪ್ಪು ತಿಳಿವಳಿಕೆ ಯಾಕೆಂದರೆ ಹೀಗೆ ನೀಡುವುದರಿಂದ ಮಗುವು ಮಾರಕ ರೋಗಗಳಿಗೆ ಬಹಳ ಬೇಗನೆ ತುತ್ತಾಗುವ ಸಾಧ್ಯತೆಗಳಿವೆ. ವ್ಯಾಕ್ಸಿನೇಷನ್ ಗಳ ನಡುವೆ ತುಂಬಾ ಅಂತರ ವಿಧಿಸುವುದರಿಂದ ಏನೂ ಪ್ರಯೋಜನವಿಲ್ಲ; ಯಾಕೆಂದರೆ ನಿರ್ದೇಶಿಸಲ್ಪಟ್ಟ ದಿನಾಂಕ ಹಾಗೂ ಲಸಿಕೆಗಳ ಅಂತರವು ಮಗುವಿಗೆ ಹೆಚ್ಚಿನ ಸಂರಕ್ಷಣೆ ನೀಡುವಂತಹವುಗಳೇ ಆಗಿದೆ.

(೩) ವಾಕ್ಸಿನ್‍ಗಳ‍‍ಲ್ಲಿ ವಿಷಾಂಶಗಳಿವೆ
ನೀರಿನಲ್ಲಿರುವ ಆಂಟಿಜೆನ್ ಗಳೇ ಲಸಿಕೆಗಳಲ್ಲಿ ಕೂಡ ಅಡಕವಾಗಿದೆ. ಆದರೂ ದ್ರಾವಕವನ್ನು ಸ್ಥಿರವಾಗಿರಿಸುವಂತೆ ಮತ್ತು ಲಸಿಕೆಗಳ ಪ್ರಭಾವವನ್ನು ಹೆಚ್ಚಿಸುವಂತೆ ಕೆಲವು ರಾಸಾಯನಿಕಗಳ ಅಗತ್ಯವಿದೆ. ಕೆಲವು ಲಸಿಕೆಗಳು ಈಥೇಲ್ ಮರ್ಕ್ಯೂರಿ ಯನ್ನಾಗಿ ವಿಭಜಿಸುವಂತಹ, ಥೈಮೆರೋಸಾಲ್‍ಗಳೆಂಬ ಪ್ರಿಸರ್ವೇಟೀವ್‍ಗಳಿವೆ. ಮಿಥೇಲ್ ಮರ್ಕ್ಯುರಿಗಳಂತೆ, ಈಥೈಲ್ ಮರ್ಕ್ಯುರಿಗಳು ಹಾನಿಕರವಲ್ಲ; ಆದರೂ ಮುಂಜಾಗರೂಕತಾ ಕ್ರಮವಾಗಿ ೨೦೦೧ರಿಂದ ಥೇಮೆರೊಸಲ್‍ನ್ನು ಲಸಿಕೆಗಳಿಂದ ತೆಗೆದು ಹಾಕಲಾಗಿದೆ. ಲಸಿಕೆಗಳು ಒಳಗೊಂಡಿರುವ, ಅದರಲ್ಲಿನ ಕಣಗಳು ಆ್ಯಂಟಿ ಬಾಡಿಯನ್ನು ಹೆಚ್ಚಾಗಿ ಸುರಿಸುವಂತೆ ಪ್ರಚೋದಿಸಿ ಶರೀರದ ರೋಗ ಪ್ರತಿರೋಧಕ ಶಕ್ತಿಯನ್ನು ಬಲಯುತಗಳಿಸುವುದು.

(೪) ವಿರಳವಾದ ಅಸೌಖ್ಯಗಳು
ನೀಡಿದ ಲಸಿಕೆಗಳ ಪ್ರಭಾವದ ಪುರಾವೆಯಿದು. ಅಸೌಖ್ಯಕ್ಕಳಗಾಗದಂತೆ ಒಬ್ಬ ವ್ಯಕ್ತಿಯನ್ನು ಈ ವ್ಯಾಕ್ಸಿನ್ ಗಳು ತಡೆಯುತ್ತದೆ. ಅದು ಲಸಿಕೆ ನೀಡದ ವ್ಯಕ್ತಿಯನ್ನು ಕೂಡ ಯಾವುದೇ ರೋಗಗಳು ಬಾರದಂತೆ ಸಹಾಯ ಮಾಡುತ್ತದೆ. ಇಂತಹ ವಾತಾವರಣಕ್ಕೆ ‘ಹರ್ಡ್ ಇಮ್ಯುನಿಟಿಗಳು’ ಎಂದು ಕರೆಯುತ್ತಾರೆ ಆದರೆ ತುಂಬಾ ಪ್ರಮಾಣದ ವ್ಯಕ್ತಿಗಳು ಲಸಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಈ ‘ಹರ್ಡ್ ಇಮ್ಯುನಿಟಿಯ’ ಪ್ರಭಾವವು ಕಡಿಮೆಯಾಗುವುದು.

(೫) ಆಟಿಸಂ ಗೆ ಕಾರಣವಾಗುವುದು
ಆಟಿಸಂ ಏನೆಂದು ನಿಮಗೇ ತಿಳಿದಿದೆ. ಖಂಡಿತವಾಗಿಯೂ ಲಸಿಕೆಗಳು ಅಂತಲ್ಲ. ವಿಜ್ಞಾನಿಗಳು ಬಹಳಷ್ಟು ಅಧ್ಯಯನ ಮಾಡಿ ಲಸಿಕೆಗಳು ಒಟಿಸಮ್ ಗೆ ಕಾರಣವಾಗುವುದಿಲ್ಲವೆಂಬ ಸತ್ಯವನ್ನು ಬೆಳಕಿಗೆ ತಂದಿದ್ದಾರೆ.

(೬) ವ್ಯಾಕ್ಸಿನೇಷನ್ ಗಳಿಂದ ಸರಕಾರದ ಖಜಾನೆ ತುಂಬುವುದು.
ಮದ್ದಿನ ಕಂಪೆನಿಗಳಿಗೆ ವ್ಯಾಕ್ಸಿನೇಷನ್ ಗಳಿಂದ ಬಹಳ ಲಾಭವಿದೆ. ಆದರೆ ಇದರಿಂದ ಅವರೇನೂ ಕೋಟ್ಯಾಧಿಪತಿ ಗಳಾಗುವುದಿಲ್ಲ. ಆದರೂ ಭಾರತದಂತಹ ದೇಶಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಅಥವಾ ನಿಮ್ಮ ಜೇಬಿಗೆ ಹೊರೆ ಎನಿಸದ ದರಗಳಲ್ಲಿ ಲಸಿಕೆಗಳು ನೀಡಲ್ಪಡುತ್ತದೆ.

(೭) ರೋಗ‍‍ಗಳಿಗಿಂತ ಲಸಿಕೆಗಳಿಂದುಂಟಾಗುವ ಅಡ್ಡ ಪರಿಣಾಮಗಳೇ ಜಾಸ್ತಿ.
ವೆರಿಸೆಲ್ಲಾ ವ್ಯಾಕ್ಸಿನ್‍ಗಳನ್ನು ಜಾರಿಗೆ ತರುವ ಮೊದಲು ಚಿಕನ್ ಪಾಕ್ಸ್ ಗಳಂತಹ ಮಾರಕ ರೋಗವು ನೂರಕ್ಕಿಂತ ಹೆಚ್ಚಿನ ಮಕ್ಕಳನ್ನು ಬಲಿ ತೆಗೆದುಕೊಂಡಿತ್ತು. ಪೋಲಿಯೋ, ಮೀಸಲ್ಸ್ ಗಳಂತಹ ರೋಗಗಳನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲಾಯಿತು. ಇದಂತೂ ಮನುಷ್ಯ ಸಮೂಹದ ಹಾಗೂ ವೇದ್ಯಕೀಯ ಚರಿತ್ರೆಯ ಮೈಲಿಗಲ್ಲು.

Comments are closed.