ಕರಾವಳಿ

ಮಹಿಳೆಯರಿಗೆ ಕ್ಯಾನ್ಸರ್ ಉಂಟಾಗಲು ಇದು ಕಾರಣವಾದಿತು……?

Pinterest LinkedIn Tumblr

ಹೆಂಗಸರ ವ್ಯಾನಿಟಿ ಬ್ಯಾಗಿನಲ್ಲಿ ಯಾವುದಾದರು ಒಂದು ಸೌಂದರ್ಯವರ್ಧಕ ಉತ್ಪನ್ನ ಯಾವಾಗಲೂ ಇದ್ದೆ ಇರುತ್ತದೆ ಎಂದರೆ ಅದು ಲಿಪ್-ಸ್ಟಿಕ್. ಆದರೆ ಈ ಮಹಿಳೆಯರ ಪ್ರಿಯವಾದ ವಸ್ತುವಾದ ಲಿಪ್-ಸ್ಟಿಕ್ ಅವರಲ್ಲಿ ಕ್ಯಾನ್ಸರ್ ಹುಟ್ಟು ಹಾಕುತ್ತದೆಯೇ? ಇದಕ್ಕೆ ಉತ್ತರವನ್ನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೊಡುತ್ತಾರೆ, ಆದರೆ ಸತ್ಯ ಯಾವುದು?

ಇಲ್ಲಿ ಪ್ರಶ್ನೆಯಲ್ಲಿರುವುದು ಲಿಪ್-ಸ್ಟಿಕ್ ಅಲ್ಲಿರುವ ಲೆಡ್ (ಸೀಸ) ಅಂಶವು ಎಷ್ಟು ಮಾರಕವೆಂಬುದು. ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಪ್ರಕಾರ ಲಿಪ್-ಸ್ಟಿಕ್ ಅಲ್ಲಿರುವ ಲೆಡ್ (ಸೀಸ) ಆರೋಗ್ಯಕ್ಕೆ ಹಾನಿ ಮಾಡುವಷ್ಟು ಪ್ರಮಾಣದಲ್ಲಿ ಇರುವುದಿಲ್ಲ ಎಂದು ಹೇಳಿದರೆ, ಸ್ವತಂತ್ರ ಸಂಶೋಧಕರು ಲೆಡ್ (ಸೀಸ) ಗರ್ಭಪಾತದಿಂದ ಹಿಡಿದು ಕ್ಷಯ ರೋಗದವರೆಗೂ ಕಾರಣವಾಗುತ್ತದೆ ಎಂದು ತಿಳಿಸುತ್ತಾರೆ. ಲೆಡ್ ಮತ್ತು ಇತರೆ ಭಾರವಾದ ಲೋಹಗಳು ಕ್ಯಾನ್ಸರ್ ಉಂಟು ಮಾಡುತ್ತವೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿವೆ. ಈ ಸುದ್ದಿಯನ್ನ ಹಲವಾರು ಸರ್ಕಾರಿ ಸಂಸ್ಥೆಗಳು ಕೂಡ ಒಪ್ಪುತ್ತವೆ.

ಲೆಡ್ ನೈಸರ್ಗಿಕವಾಗಿ ಎಲ್ಲೆಡೆ ಕಾಣಿಸಿಕೊಳ್ಳುವ ಒಂದು ಲೋಹವಾಗಿದ್ದು, ಇದು ಮಣ್ಣಿನಲ್ಲಿ ಕಾಣಸಿಗುತ್ತದೆ. ಇದನ ಪೈಪ್, ಬ್ಯಾಟರಿ ಹಿಂದ ಹಿಡಿದು ಲಿಪ್-ಸ್ಟಿಕ್ ವರೆಗೂ ಎಲ್ಲದರಲ್ಲು ಬಳಸುತ್ತಾರೆ. ಡಿಸೆಂಬರ್ FDA ನಡೆಸಿದ ಪರೀಕ್ಷೆಯಲ್ಲಿ 100% ಅಷ್ಟು, ಅಂದರೆ ಎಲ್ಲಾ ಲಿಪ್-ಸ್ಟಿಕ್ ಅಲ್ಲೂ ಲೆಡ್ ಇರುವುದು ಕಂಡು ಬಂದಿತು. ಆದರೆ ಈ ಲೆಡ್ ಪ್ರಮಾಣ ತುಂಬಾ ಕಡಿಮೆಯಿದ್ದು, ಇದು ಜೀವಕ್ಕೆ ಹಾನಿಕಾರಕವಾಗುವುದಿಲ್ಲ ಎಂದು FDA ಹೇಳಿತು.

FDA ನಡೆಸಿದ ಪರೀಕ್ಷೆಯಲ್ಲಿ, ಲಿಪ್-ಸ್ಟಿಕ್ ಅಲ್ಲಿ 0.026 ಪಿಪಿಎಂ ಇಂದ ಹಿಡಿದು 7.19 ಪಿಪಿಎಂ ಅಷ್ಟು ಲೆಡ್ ಇರುವುದು ಪತ್ತೆಯಾಯಿತು. ಆದರೆ ಸೌಂದರ್ಯವರ್ಧಕಗಳಲ್ಲಿ 20ಪಿಪಿಎಂ ವರೆಗೂ ಲೆಡ್ ಅನ್ನು ಬಳಸಬಹುದು, ಅದರಿಂದ ಯಾವ ತೊಂದರೆಯು ಆಗುವುದಿಲ್ಲ ಎಂದು FDA ಹೇಳುತ್ತದೆ.

ಈ ಪರೀಕ್ಷೆ, ಅಧ್ಯಯನಗಳು ಏನೇ ಇರಲಿ, ಲಿಪ್-ಸ್ಟಿಕ್ ಪ್ರಿಯರಿಗೆ ಒಂದು ಆಶಾಕಿರಣವಿದೆ. ಅದೇನೆಂದರೆ, ಲೆಡ್ ಗೆ ಅಷ್ಟೊಂದು ಸುಲಭವಾಗಿ ತುಟಿಗಳ ಒಳಗಿನಿಂದ ನುಸುಳಿ ಒಳಬರಲು ಆಗುವುದಿಲ್ಲ ಮತ್ತು ವಯಸ್ಕರರು ಈ ಲೆಡ್ ಹೀರುವಿಕೆಗೆ ತುತ್ತಾಗುವುದಿಲ್ಲ. ಮಕ್ಕಳ ದೇಹವು ತಾವು ಸ್ಪರ್ಶಿಸುವ 50% ಲೆಡ್ ಅನ್ನು ಒಳಗೆ ಹೀರಿಕೊಂಡರೆ, ವಯಸ್ಕರರ ದೇಹವು ಕೇವಲ 8% ಅಷ್ಟು ಮಾತ್ರ ಹೀರಿಕೊಳ್ಳುತ್ತದೆ. ಹೀಗಾಗಿ ಕೇವಲ ಲಿಪ್-ಸ್ಟಿಕ್ ಹಚ್ಚಿಕೊಳ್ಳುವ ಮೂಲಕ ನೀವು ಲೆಡ್ ಅನ್ನು ಸೇವಿಸುವುದಿಲ್ಲ

Comments are closed.