ಕರಾವಳಿ

ಮೊಬೈಲ್ ಲಾಕ್ ಪ್ಯಾಟ್ರನ್ ಮರೆತರೆ ಸಿಂಪಲ್ ಆಗಿ ಅನ್‍ಲಾಕ್ ಮಾಡಲು ಸಿಂಪಲ್ ಟ್ರಿಕ್ಸ್

Pinterest LinkedIn Tumblr

ಕೈಯಲ್ಲಿ ಸ್ಮಾರ್ಟ್‍ಫೋನ್ ಇರುವುದು ಎಂದು ಸಹಜವೋ, ಆ ಸ್ಮಾರ್ಟ್‍ಫೋನ್‍ಗೆ ಲಾಕ್ ಹಾಕಿಕೊಳ್ಳುವುದು ಅಷ್ಟೇ ಸಹಜ.. ಅದು ಕೆಲವರು ಕೆಲವು ಅಗತ್ಯಗಳಿಗಾಗಿ, ಇನ್ನೂ ಕೆಲವರು ಭದ್ರತೆಯ ದೃಷ್ಟಿಯಿಂದ ಸ್ಮಾರ್ಟ್‌ಫೋನ್‌ಗೆ ಲಾಕ್ ಹಾಕಿಕೊಳ್ಳುತ್ತಾರೆ. ನಿತ್ಯ ಬಳಸುವ ಮೊಬೈಲ್ ಆದರೂ ಆಗಾಗ ಸಹಜವಾಗಿ ನಮ್ಮ ಫೋನ್ ಲಾಕ್ ಪ್ಯಾಟ್ರನ್ ಮರೆಯುತ್ತಿರುತ್ತೇವೆ. ಒಮ್ಮೊಮ್ಮೆ ಕೆಲವು ಪ್ರಯತ್ನಗಳ ಬಳಿಕ ಅನ್ ಲಾಕ್ ಆಗುತ್ತದೆ, ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಆ ಪ್ಯಾಟ್ರನ್ ನೆನಪಾಗಲ್ಲ.. ಆಗ ಫೋನ್ ಅನ್ ಲಾಕ್ ಮಾಡಲು ಒಂದೇ ದಾರಿ ಎಂದು ಮೊಬೈಲ್ ಶಾಪ್‌ಗೆ ತೆಗೆದುಕೊಂಡು ಹೋಗುತ್ತೇವೆ. ಆ ರೀತಿ ಅಲ್ಲದೆ ಮೊಬೈಲ್ ಅನ್ ಲಾಕ್ ಮಾಡಿಕೊಳ್ಳುವ ಪದ್ಧತಿ ತಿಳಿದುಕೊಂಡರೆ ಈ ಸಲ ಸಿಂಪಲ್ ಆಗಿ ಮರೆತುಹೋದರೂ, ಅನ್ ಲಾಕ್ ಪ್ಯಾಟ್ರನ್ ನೆನಪಾಗದಿದ್ದರೂ ಸುಲಭವಾಗಿ ಲಾಕ್ ತೆಗೆಯಬಹುದು. ಅದು ಹೇಗೆ ಗೊತ್ತಾ?

ಪ್ಯಾಟ್ರನ್, ಪಿನ್ ಲಾಕ್‌ಗಳನ್ನು ರೀಸೆಟ್ ಮಾಡಲು ವಂಡರ್‌ಷೇರ್ ಆಂಡ್ರಾಯ್ಡ್ ಪ್ಯಾಟ್ರನ್ ಲಾಕ್ ರಿಮೂವ್ ಎಂಬ ಒಂದು ಸಾಫ್ಟ್‌‍ವೇರ್ ಸಿಗುತ್ತದೆ. ಆದರೆ ಇದು ಪೇಯ್ಡ್ ಸಾಫ್ಟ್‌ವೇರ್. ಇದನ್ನು ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ನಿಮ್ಮ ಫೋನನ್ನು ಆ ಪಿಸಿಗೆ ಕನೆಕ್ಟ್ ಮಾಡಿ ಸ್ಕ್ರೀನ್ ಮೇಲೆ ಕಾಣಿಸುವ ಆದೇಶಗಳಿಗೆ ತಕ್ಕಂತೆ ಮಾಡಿದರೆ ಪ್ಯಾಟ್ರನ್ ಲಾಕ್ ತೊಲಗಿಸುತ್ತದೆ.ಈ ಸಾಫ್ಟ್‌ವೇರ್ ನಿಂದ ಫೋನ್ ಓಪನ್ ಆಗದಿದ್ದರೆ ಅದಕ್ಕೆ ಇನ್ನೊಂದು ಮಾರ್ಗವಿದೆ.

ಅದೇ ಫೋನನ್ನು ರೀಸೆಟ್ ಮಾಡುವುದು. ಅದು ಹೇಗೆಂದರೆ.. ಫೋನ್ ಮೇಲೆ ಇರುವ ವಾಲ್ಯೂಮ್, ಹೋಮ್, ಪವರ್ ಬಟನ್‌ಗಳನ್ನು ಒಟ್ಟಿಗೆ ಪ್ರೆಸ್ ಮಾಡುವ ಮೂಲಕ ರಿಕವರಿ ಮೋಡ್‌ಗೆ ಹೋಗಿ ಫ್ಯಾಕ್ಟರಿ ರೀಸೆಟ್ ಮಾಡಿಕೊಳ್ಳಲು ಕೇಳುತ್ತದೆ…. ಆದರೆ ಈ ರೀತಿ ಫ್ಯಾಕ್ಟರಿ ರೀಸೆಟ್ ಮಾಡಿದಾಗ ಫೋನ್‌ನಲ್ಲಿನ ಇಂಟರ್ನಲ್ ಸ್ಟೋರೇಜ್‌ನಲ್ಲಿನ ಡಾಟಾ ಒಟ್ಟಾರೆ ಹೋಗುತ್ತದೆ, ಮೆಮೊರಿ ಕಾರ್ಡ್‌ ಡಾಟಾಗೆ ಯಾವುದೇ ಅಪಾಯ ಇರಲ್ಲ. ಈ ಎರಡು ಟ್ರಿಕ್ಸ್‌ನಿಂದ ಇನ್ನು ಮುಂದೆ ಪ್ಯಾಟ್ರನ್ ಮರೆತರೆ ಸಿಂಪಲ್ ಆಗಿ ಅನ್‍ಲಾಕ್ ಮಾಡಿಕೊಳ್ಳಿ.

Comments are closed.