ಕರ್ನಾಟಕ

ಆಯುರ್ವೇದಶಾಸ್ತ್ರದ ಪ್ರಕಾರ ಊಟವಾದ ನಂತರ ಕೆಲವು ಕೆಲಸಗಳನ್ನು ಮಾಡಬಾರದಂತೆ ಹೌದೇ…?

Pinterest LinkedIn Tumblr

ಮಂಗಳೂರು: ಭಾರತ ದೇಶವು ಆಯುರ್ವೇದಶಾಸ್ತ್ರದ ತವರುಮನೆ. ಪ್ರಪಂಚ ಅಭಿವೃದ್ದಿಯಾಗದ ಅಂದಿನ ದಿನಗಳಲ್ಲಿಯೇ ವಿವಿಧ ರೋಗಗಳಿಗೆ ಚಿಕಿತ್ಸೆ, ಮುನ್ನೆಚ್ಚರಿಕೆಗಳನ್ನು ಸೂಚಿಸಿದ್ದ ವಿಜ್ಞಾನ ನಮ್ಮ ಆಯುರ್ವೇದ. ಹಿತ್ತಲಿನಲ್ಲಿನ ಗಿಡಗಳು ಮಾಡುವ ಅದ್ಭುತಗಳನ್ನು ತಿಳಿಯಪಡಿಸಿದ್ದು ಆಯುರ್ವೇದ. ಅಂತಹ ಆಯುರ್ವೇದಶಾಸ್ತ್ರವು ಊಟವಾದ ನಂತರ ಕೆಲವು ಕೆಲಸಗಳನ್ನು ಮಾಡಬಾರದೆಂದು ಹೇಳುತ್ತಿದೆ. ಹಾಗೆ ಮಾಡಿದರೆ ಆರೋಗ್ಯ ಕ್ಷೀಣಿಸುವುದಲ್ಲದೆ, ಶರೀರಕ್ಕೆ ಅಪಾಯವೆಂತಲೂ ಹೆಚ್ಚರಿಸುತ್ತಿದೆ. ಅವು ಯಾವುವೂ ಎಂಬುದನ್ನು ಒಂದು ಸಾರಿ ನೋಡೋಣ ಬನ್ನಿ.

1.ಮೊದಲನೆಯದು ಊಟಮಾಡಿದ ನಂತರ ಹಣ್ಣುಗಳನ್ನು ತಿನ್ನಬಾರದು.
ಕಾರಣ: ಊಟ ಮಾಡಿದ ಮೇಲೆ ತಕ್ಷಣವೇ ಹಣ್ಣನ್ನು ತಿನ್ನುವುದರಿಂದ ಆಹಾರ ಬೇಗ ಜೀರ್ಣವಾಗಿವುದಿಲ್ಲ. ಹೊಟ್ಟೆಯಲ್ಲ ಗಾಳಿಯಿಂದ ತುಂಬಿಕೊಳ್ಳುತ್ತದೆ. ಇದರಿಂದ ಅಜೀರ್ಣವಾಗುವ ಅವಕಾಶವಿರುತ್ತದೆ. ಕೆಲವು ಸಂಧರ್ಭಗಳಲ್ಲದರೆ, ಫುಡ್ ಪಾಯಿಜನ್ ಆಗುವ ಅವಕಾಶ ಇದೆ. ಒಂದು ವೇಳೆ ಪ್ರತೀದಿನ ಹಣ್ಣು ಸೇವಿಸುವ ಅಭ್ಯಾಸವಿದ್ದರೆ, ಮಾತ್ರ ಒಂದು ಗಂಟೆಯ ಮುಂಚಿತವಾಗಿ ಅಥವಾ ಗಂಟೆಯ ನಂತರ ತಿನ್ನುವುದು ಒಳ್ಳೆಯದು.

2. ಊಟ ಮಾಡಿದ ನಂತರ ಟೀ ಕುಡಿಯಬಾರದು.
ಕಾರಣ: ನಮ್ಮ ದೇಶದಲ್ಲಿ ಹೆಚ್ಚಿನ ಜನರು ಈ ತಪ್ಪನ್ನು ಮಾಡುತ್ತಿರುತ್ತಾರೆ. ಅನ್ನವನ್ನು ತಿಂದ ತಕ್ಷಣ ಟೀ ಕುಡಿಯುವುದರಿಂದ ಅಧಿಕ ಪ್ರಮಾಣದಲ್ಲಿ ಯಾಸಿಡ್ ಬಿಡುಗಡೆ ಯಾಗುತ್ತದೆ. ಜೀರ್ಣಕ್ರಿಯೆಯು ನಿಧಾನವಾಗಿ ಜೀರ್ಣವಾಗುತ್ತದೆ.

3. ಊಟ ನಂತರ ತಕ್ಷಣವೇ ನಡೆಯಬಾರದು.
ಕಾರಣ: ತಿಂದ ನಂತರ ತಕ್ಷಣವೇ ನಡೆದರೆ ಜೀರ್ಣ ವ್ಯವಸ್ಥೆಯಲ್ಲಿ ಅಧಿಕ ಪ್ರಮಾಣದಲ್ಲಿ ಯಾಸಿಡ್ಸ್ (ಆಮ್ಲಗಳು) ಬಿಡುಗಡೆಯಾಗುತ್ತವೆ. ಇದರಿಂದ ಹೊಟ್ಟೆಯಲ್ಲಿ ಉರಿಯಾಗುವ ಅವಕಾಶವಿರುತ್ತದೆ. ಆದ್ದರಿಂದ ತಿಂದ ನಂತರ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು, 30 ನಿಮಿಷಗಳ ನಂತರ ನಡೆಯುವುದನ್ನು ಆರಂಭಿಸಬೇಕು.

4.ತಿಂದ ತಕ್ಷಣವೇ ಬೆಲ್ಟ್ ಲೂಸ್ ಮಾಡಿಕೊಳ್ಳಬಾರದು.
ಕಾರಣ: ತುಂಬಾ ಜನರು ಹೆಚ್ಚಾಗಿ ತಿಂದಿದ್ದೇವೆಂಬ ಉದ್ದೇಶದಿಂದ ಬೆಲ್ಟನ್ನು ಲೂಸ್ ಮಾಡಿಕೊಳ್ಳುತ್ತಾರೆ. ಹಾಗೆ ಮಾಡಬಾರದು.. ಇದರಿಂದ ಎಲ್ಲಾದರು ಸ್ಥಗಿತಗೊಂಡಿರುವ ಆಹಾರವು ಕೆಳಗೆ ಬರುವುದಿಲ್ಲ .. ಇದರಿಂದ ಸರಿಯಾಗಿ ಜೀರ್ಣವಾಗುವುದಿಲ್ಲ.

5. ಯಾವುದೇ ಕಾರಣಕ್ಕೂ ತಿಂದ ಮೇಲೆ ಸ್ನಾನ ಮಾಡಬಾರದು.
ಕಾರಣ: ಬೆಳಿಗ್ಗೆಯಾದರೂ, ಸಂಜೆಯಾದರೂ ಊಟ ಮಾಡಿದ ತಕ್ಷಣ ಸ್ನಾನ ಮಾಡ ಬಾರದು. ಹಾಗೆ ಮಾಡಿದರೆ, ರಕ್ತವೆಲ್ಲವೂ ಕಾಲುಗಳಿಗೆ, ಕೈಗಳಿಗೆ ಒಟ್ಟು ದೇಹಕ್ಕೆಲ್ಲ ಹರಿದು, ಹೊಟ್ಟೆ ಹತ್ತಿರ ರಕ್ತವು ಕಡಿಮೆಯಾಗಿ, ಜೀರ್ಣ ಪ್ರಕ್ರಿಯೆಯು ನಿಧಾನವಾಗುತ್ತದೆ. ಇದರಿಂದ ಜೀರ್ಣ ವ್ಯವಸ್ಥೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.

6. ಊಟ ಮಾಡಿದ ತಕ್ಷಣ ನಿದ್ದೆ ಮಾಡಬಾರದು.
ಕಾರಣ: ಊಟ ಮಾಡಿದ ತಕ್ಷಣ ನಿದ್ದೆ ಮಾಡಿದರೆ ಆಹಾರವು ಸರಿಯಾಗಿ ಜೀರ್ಣ ವಾಗದೆ ಗ್ಯಾಸ್ಟ್ರಿಕ್, ಇನ್ ಫೆಕ್ಷನ್ ಬರುವ ಅವಕಾಶಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಊಟ ಮಾಡಿದ ನಂತರ ಯಾರಿಗಾದ್ರೂ, ನಿದ್ದೆ ಬಂದರೆ ಒಂದು 10 ನಿಮಿಷಗಳು ಮಲಗಿ ಎದ್ದೇಳುವುದು ಒಳ್ಳೆಯದು. ಹಾಗೆ ನಿದ್ದೆಯನ್ನು ಮುಂದುವರಿಸಿದರೆ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ.

7. ಊಟ ಮಾಡಿದ ನಂತರ ಈಜಾಡಬಾರದು.
ಕಾರಣ: ತಿಂದತಕ್ಷಣ ಈಜಾಡುವುದು ಅಪಾಯವೆಂದು ಆಯುರ್ವೇದ ಹೇಳುತ್ತದೆ. ರಕ್ತ ಪ್ರಸರಣದ ವೇಗ ಅಧಿಕವಾಗಿ ಶರೀರದ ಮಾಂಸ ಕಂಡಗಳು ಸ್ಥಗಿತಗೊಳ್ಳುತ್ತವೆಂದು ಹೇಳುತ್ತದೆ. ವ್ಯಾಯಾಮ, ಜಿಮ್, ಆಟಗಳೂ ಸಹ ಆಡಬಾರದು.

8.ಊಟ ಮಾಡಿದ ಮೇಲೆ ಧೂಮಪಾನ ಮಾಡಬಾರದು.
ಕಾರಣ: ಧೂಮಪಾನ ಯಾವಾಗ ಮಾಡಿದರೂ ಹಾನಿಕರವೇ. ಆದರೆ ತಿಂದನಂತರ ಧೂಮಪಾನ ಮಾಡಲೇಬಾರದು. ಹಾಗೆ ಮಾಡುವುದರಿಂದ, ಒಂದೇಸಾರಿ 10 ಸಿಗೆರೆಟ್’ಗಳನ್ನು ಕುಡಿದ ಪರಿಣಾಮ ಪಿತ್ತಕೋಶದ ಮೇಲೆ ಬೀರುತ್ತದೆ. ಇದರಿಂದ ಶ್ವಾಸಕೋಶಗಳ ಮೇಲಿನ ಭಾರ ಅಧಿಕ ವಾಗುತ್ತದೆಂದು ಆಯುರ್ವೇದ ಹೇಳುತ್ತದೆ.

Comments are closed.